ವರದಿಗಾರ : ಪವಿತ್ರ ಉಮ್ರಾ ಕರ್ಮಾ ನಿರ್ವಹಿಸಲು 24.11.2017 ರಂದು ಮಂಗಳೂರಿನ ಮಂಗಳೂರು ಇಂಟೆರ್ ನ್ಯಾಷನಲ್ ಟ್ರಾವೆಲ್ಸ್ ಮೂಲಕ ಮೆಕ್ಕಾಗೆ ಆಗಮಿಸಿದ ಮಂಗಳೂರು ತಾಲೂಕಿನ ಇನೋಳಿ ನಿವಾಸಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಎಂಬವರು, ಉಮ್ರಾ ನಿರ್ವಹಿಸುವ ಸಂಧರ್ಭದಲ್ಲಿ ಕಾಣೆಯಾಗಿದ್ದರು. ಊರಿನ ಹಲವಾರು ಅನಿವಾಸಿ ಸಂಘಟನೆಗಳು ಇವರುಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರೂ ಯಾವುದೇ ಪ್ರಯೋಜನ ವಾಗಿಲ್ಲ. ಕೊನೆಗೆ ಸೌದಿ ಪೊಲೀಸರನ್ನು ಟ್ರಾವೆಲ್ ಮಾಲೀಕ ಅಬೂಬಕ್ಕರ್ ಮತ್ತು ಇಬ್ರಾಹಿಂ ಕಕ್ಕಿಂಜೆ ರವರು ಸೌದಿ ಪೊಲೀಸರಿಗೆ ಸಂಪರ್ಕಿಸಿ ವಿಷಯ ತಿಳಿಸಿದಾಗ ಪೊಲೀಸರು ಆ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಮೃತದೇಹ ಆಸ್ಪತ್ರೆಯ ಶವಾಗಾರದಲ್ಲಿ ಇರುವ ಮಾಹಿತಿ ದೊರಕಿತು. ತಕ್ಷಣವೇ ಅಬೂಬಕ್ಕರ್ ರವರು ಈ ವಿಷಯವನ್ನು ಇಂಡಿಯಾ ಫ್ರಟೆರ್ನಿಟಿ ಫೋರಮ್ ಸದಸ್ಯರ ಗಮನಕ್ಕೆ ತಂದರು. ಕೂಡಲೇ ಕಾರ್ಯ ಪ್ರವೃತ್ತರಾದ ಇಂಡಿಯಾ ಫ್ರಟೆರ್ನಿಟಿ ಫೋರಮ್ ಮಕ್ಕಾ ಘಟಕದ ಉಬೈದುಲ್ಲಾ ಬಂಟ್ವಾಳ ನೇತೃತ್ವದಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಜೆದ್ದಾ ವಲಯದ ಅಶ್ರಫ್ ಬಜ್ಪೆ, ಎಲ್ಲಾ ದಾಖಲೆ ಪತ್ರಗಳನ್ನು ಕ್ಲಪ್ತ ಸಮಯಕ್ಕೆ ಸಂಗ್ರಹಿಸಿ ಸೌದಿ ಸರಕಾರಕ್ಕೆ ಸಲ್ಲಿಸಿದ ನಂತರ ಮೃತದೇಹವನ್ನು ಉಮ್ರಾ ಅಮೀರ್, ಅಬೂಬಕ್ಕರ್ ರವರಿಗೆ ಹಸ್ತಾಂತರ ಮಾಡಿದರು.
ಅಬ್ದುಲ್ ಹಮೀದ್ ಕಾಣೆಯಾದ ಸಂದರ್ಭದಲ್ಲಿ ಕಳಿಸಿದ್ದ ನೋಟೀಸು
ನಂತರ ಪವಿತ್ರ ಹರಂನಲ್ಲಿ ಮೃತರ ಜನಾಝ ನಮಾಜ್ ನಂತರ ಹರಮ್ ಹತ್ತಿರದ ಶರಯ ಎಂಬಲ್ಲಿ ದಫನ ಕ್ರಿಯೆ ನಡೆಸಲಾಯಿತು. ದಫನ ಕ್ರಿಯೆಗೆ ಇಂಡಿಯಾ ಫ್ರಟೆರ್ನಿಟಿ ಫೋರಮ್ ಮಕ್ಕಾ ವಲಯದ ಸದಸ್ಯರು ಮತ್ತು ಕೆ ಸಿ ಎಫ್ ನ ಮೂಸಾ ಹಾಜಿ ಕಿನ್ಯ ಹಾಗು
ಸದಸ್ಯರು, ಮೃತರ ಸಂಬಂಧಿಕರು, ಹಿತೈಷಿಗಳು ಭಾಗವಹಿಸಿದ್ದರು.
ಮೃತರ ಮಗ್ಫಿರತ್ಗಾಗಿ ದುಆ ಮತ್ತು ಮೃತರಿಗಾಗಿ ಜನಝ ನಮಾಜ್ ನಿರ್ವಹಿಸಬೇಕಾಗಿ ಕುಟುಂಬವು ಪ್ರಕಟಣೆಯಲ್ಲಿ ವಿಜ್ಞಾಪಿಸಿದೆ.
ವರದಿ: ಎಸ್ ಹೆಚ್ ಬ್ಯಾರಿ ನೆಲ್ಯಾಡಿ
