ವರದಿಗಾರ (01.12.2017) : ದಕ್ಷಿಣ ಕನ್ನಡ ಜಿಲ್ಲೆ ಯಾವತ್ತೂ ತನ್ನ ಒಡಲಲ್ಲಿಟ್ಟುಕೊಂಡಿರುವ ಕೋಮುವಾದಕ್ಕೆ ಹೆಸರುವಾಸಿ. ಒಂದಲ್ಲೊಂದು ಕಾರಣಗಳನ್ನು ಮುಂದಿಟ್ಟುಕೊಂಡು ಕೆಲ ವಿಘ್ನ ಸಂತೋಷಿಗಳು ಜಿಲ್ಲೆಯ ಕೋಮು ಸಾಮರಸ್ಯವನ್ನು ಕದಡಲು ಪ್ರಯತ್ನಿಸುತ್ತಲೇ ಇರುತ್ತಾರೆ. ಇದಕ್ಕೆ ಅಪವಾದವೆಂಬಂತೆ ಕೆಲವೊಂದು ಸೌಹಾರ್ದದ ಘಟನೆಗಳು ಜಿಲ್ಲೆಯಲ್ಲಿ ನಡೆಯುತ್ತಿರುತ್ತದೆ. ಅದಕ್ಕೆ ತಾಜಾ ಉದಾಹರಣೆ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಣೋಲಿಬೈಲಿನಲ್ಲಿ ಇಂದು ನಡೆದ ಈದ್ ಮಿಲಾದ್ ರ್ಯಾಲಿಯ ಸಂದರ್ಭದ ಘಟನೆ.
ಮುಸ್ಲಿಂ ಬಾಂಧವರು ಮಸೀದಿಯಲ್ಲಿ ತಮ್ಮ ಪ್ರಾರ್ಥನೆ ಮುಗಿಸಿ ಮೀಲಾದ್ ರ್ಯಾಲಿಯಲ್ಲಿ ಸಾಗಿ ಪಣೋಲಿಬೈಲಿನ ಪ್ರಸಿದ್ಧ ದೇವಸ್ಥಾನದ ದ್ವಾರದ ಹತ್ತಿರ ಬಂದಾಗ ಅಲ್ಲಿ ಹಾಜರಿದ್ದ ಹಿಂದೂ ಬಾಂಧವರು ರ್ಯಾಲಿಯಲ್ಲಿದ್ದವರಿಗೆ ಸಿಹಿತಿಂಡಿ ಮತ್ತು ಪಾನೀಯಗಳನ್ನು ನೀಡಿ ಸತ್ಕರಿಸಿದರು.
ಜಿಲ್ಲೆಯಲ್ಲಿ ಕೋಮು ಪ್ರಚೋದಕ ಭಾಷಣಗಳನ್ನು ಬಿಗಿದು, ಕೋಮು ಕಿಡಿಯನ್ನು ಹಾರಿಸಿ ಗಲಭೆಗಳಿಗೆ ಪ್ರಚೋದನೆ ಕೊಡುವ ನಾಯಕರಿಗೆ ಪಣೋಲಿಬೈಲಿನ ಜನರ ಸೌಹಾರ್ದತೆ ಮಾದರಿಯಾಗಲಿ. ಪಣೋಲಿಬೈಲಿನಂತಹ ಘಟನೆಗಳು ಜಿಲ್ಲೆಯಲ್ಲೆಡೆ ನಡೆಯಲಿ ಎಂದೇ ನಮ್ಮ ಹಾರೈಕೆ.
