ಸಾಮಾಜಿಕ ತಾಣ

ಡೆಂಗ್ಯೂ ಬಾಧಿತ 7 ರ ಬಾಲಕಿಯ ಚಿಕಿತ್ಸೆಗೆ 16 ಲಕ್ಷ ಬಿಲ್ ಮಾಡಿದ ಫೋರ್ಟಿಸ್ ಆಸ್ಪತ್ರೆಗೆ ಟ್ವಿಟ್ಟರಿಗರು ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತೇ?

ವರದಿಗಾರ (30.11.2017) : ಇತ್ತೀಚೆಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಡೆಂಗ್ಯೂ ರೋಗಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ 7 ರ ಹರೆಯದ ಬಾಲಕಿಗೆ ಆಸ್ಪತ್ರೆಯವರು ಮಗು ಮೃತಪಟ್ಟ ನಂತರ ಬಾಲಕಿಯ ತಂದೆಗೆ ನೀಡಿದ್ದ 16 ಲಕ್ಷದ ಬಿಲ್ ಕುರಿತಾಗಿ ನಾವೆಲ್ಲಾ ಓದಿದ್ದೇವೆ. ಆ ಘಟನೆಯ ನಂತರ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರವು (NPPA) ಬಾಲಕಿಗೆ ನೀಡಿದ್ದ ಔಷಧಿಗಳ ವಿವರಗಳು ಮತ್ತು ನೀಡಿದ್ದ ಬಿಲ್ಲನ್ನು ಕಳುಹಿಸುವಂತೆ ತಿಳಿಸಿತ್ತು. ಆ ವೇಳೆ ನಡೆಸಿದ ತನಿಖೆಯಲ್ಲಿ ಬಾಲಕಿಗೆ ನೀಡಿದ್ದ ಔಷದಿಗಳಿಗೆ, ಇಂಜೆಕ್ಷನ್ ಗಳಿಗೆ ಹೆಚ್ಚುವರಿ ಬಿಲ್ ಹಾಕಿರುವುದು ಕಂಡು ಬಂದಿತ್ತು. ಪ್ರಾಧಿಕಾರದ ಪ್ರಕಾರ ಇದೊಂದು ವ್ಯವಸ್ಥಿತ ಸುಲಿಗೆಯ ಕ್ರಿಮಿನಲ್ ಪ್ರಕರಣವೆಂದು ಹೇಳಿತ್ತು.

ಈ ಘಟನೆಗಳು ಸಾಮಾಜಿಕ ತಾಣಗಳಲ್ಲಿ ಕೂಡಾ ಸದ್ದು ಮಾಡತೊಡಗಿತ್ತು. ಜಾಲ ತಾಣಿಗರು ಮಗಳನು ಜೀವಂತವಾಗಿ ಪಡೆಯಲಾಗದ ಮತ್ತು 16 ಲಕ್ಷ ವೆಚ್ಚದ ಬಿಲ್ಲನ್ನು ಪಡೆದ ತಂದೆಯ ಪರಿಸ್ಥಿತಿಯ ಕುರಿತು ಮಮ್ಮಲಲ ಮರುಗಿದ್ದರು. ಇದೀಗ ಟ್ವಿಟ್ಟರ್ ಖಾತೆದಾರರು ಈ ಘಟನೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದು, ಫೋರ್ಟಿಸ್ ಆಸ್ಪತ್ರೆ ಭಾರತದ ಅತಿ ದುಬಾರಿಯ ಕಾಲ ಕಳೆಯುವ ಸ್ಥಳ,  ಫೋರ್ಟಿಸ್ ಅನ್ನು ಹಣ ಪಡೆಯಲಿಕ್ಕಾಗಿ ಮಾತ್ರ (for FEES), ನಿಮ್ಮ ಹಣವನ್ನೆಲ್ಲಾ ಖಾಲಿ ಮಾಡುವ ಆಸ್ಪತ್ರೆ ಎಂದೆಲ್ಲಾ ಕಿಚಾಯಿಸಿದ್ದಾರೆ. ಅದರ ಒಂದು ನೋಟ ಇಲ್ಲಿದೆ

 

 

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group