ವರದಿಗಾರ (01.12.2017) : ಮಂಗಳೂರು : ಯೂತ್ ಕಾಂಗ್ರೆಸ್ ಮಂಗಳೂರು ವಿಧಾನಸಭಾ ಕ್ಷೇತ್ರ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಇದರ ಜಂಟಿ ಆಶ್ರಯದಲ್ಲಿ ಯೇನೆಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಇದರ ಸಹಯೋಗದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಇತ್ತೀಚೆಗೆ ನಗರದ ರಝಿಯಾ ರೂರಲ್ ಹೆಲ್ತ್ ಕೇರ್ ಹರೇಕಳದಲ್ಲಿ ನಡೆಯಿತು.
ರಕ್ತದಾನ ಶಿಬಿರವನ್ನು ಧಾರ್ಮಿಕ ಗುರುಗಳಾದ ಸಿರಾಜುದ್ದೀನ್ ಸಖಾಫಿ ಕನ್ಯಾನ ಇವರು ಉದ್ಘಾಟಿಸಿ ಮಾತನಾಡುತ್ತಾ,”ಏನನ್ನು ಕಂಡು ಹಿಡಿದರೂ ಕೂಡಾ ಇವತ್ತು ಎಷ್ಟು ಹಣವನ್ನು ಕೊಟ್ಟರೂ ನಿರ್ಮಾಣ ಮಾಡಲು ಸಾಧ್ಯವಾಗದಂತಹ ಒಂದು ವಿಶೇಷವಾದ ವಸ್ತುವಾಗಿದೆ ರಕ್ತ.ರಕ್ತಕ್ಕೆ ಪರ್ಯಾಯ ರಕ್ತ ಮಾತ್ರ”.ಇಂತಹ ಜೀವ ಉಳಿಸುವ ರಕ್ತ ದಾನ ಶಿಬಿರಗಳನ್ನು ಆಯೋಜಿಸಿದ ಸಂಘಟಕರನ್ನು ಪ್ರಶಂಶಿಸಿದರು.
ವೇದಿಕೆಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಮೊಹಮ್ಮದ್ ಮೋನು, ಕರಾವಳಿ ಅಲ್ಪಸಂಖ್ಯಾತ ಕಾಂಗ್ರೆಸ್ ಅಧ್ಯಕ್ಷರಾದ ಯು.ಬಿ.ಸಲೀಮ್ ಉಳ್ಳಾಲ, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಸಿರ್ ಸಾಮಣಿಗೆ, , ಯುವ ಕಾಂಗ್ರೆಸ್ ಮಂಗಳೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾದ ರಿಯಾಝ್ ಮಲಾರ್, ಮಂಗಳೂರು ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸಮೀರ್ ಪಜೀರ್, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಮುಸ್ತಪ ಹರೇಕಳ, ಬದ್ರುದ್ದೀನ್, ಸಿದ್ದಿಕ್,ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಇದರ ಅಡ್ಮಿನ್ ಗಳಾದ ಇಮ್ರಾನ್ ಅಡ್ಡೂರು,ಮುಝಮ್ಮಿಲ್ ನೂಯಿ ಅಡ್ಡೂರು, ನಿಝಾಮ್ ತೊಕೂರು, ನಝೀರ್ ಪಿ.ಸಿ, ಸತ್ತಾರ್ ಪುತ್ತೂರು, ಸಾದಿಕ್ ಪಾವೂರು,ನಾಸೀರ್ ಬಿ ಸಿ ರೋಡ್,ಸಮೀರ್ ಉಳಾಯಿಬೆಟ್ಟು,ಇಮ್ರಾನ್ ಮದಕ,ಅಲ್ಮಾಝ್,ಸಫ್ವಾನ್ ಕಲಾಯಿ ಮುಂತಾದ ಹಲವಾರು ಗಣ್ಯರು ಉಪಸ್ಥಿತಿಯಿದ್ದರು.
ಸಭೆಯಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಇದರ ಹೊಸತಾಗಿ ವಿನ್ಯಾಸಗೊಳಿಸಿದ ಸಮವಸ್ತ್ರವನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಗುರುಗಳಾದ ಸಿರಾಜುದ್ದೀನ್ ಸಖಾಫಿ ಕನ್ಯಾನ, ಯುವ ಕಾಂಗ್ರೆಸ್ ಅಧ್ಯಕ್ಷ ಸಿಎಂ ರವೂಫ್, ಬ್ಲಡ್ ಹೆಲ್ಪ್ ಲೈನ್ (ರಿ) ಇದರ ಅಡ್ಮಿನ್ ಗಳಾದ ಇಫ್ತಿಕಾರ್ ಕೃಷ್ಣಾಪುರ, ನಾಚೀ ಆರ್.ಬಿ. ದೇರಳಕಟ್ಟೆ ಇವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ 2 ಗಂಟೆಗೆ ಮುಕ್ತಾಯವಾದ ರಕ್ತ ದಾನ ಶಿಬಿರದಲ್ಲಿ ಹಲವಾರು ಜನರು ಪಾಲ್ಗೊಂಡು ರಕ್ತದಾನ ಮಾಡಿದರು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಯೇನೆಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಇದರ ಬ್ಲಡ್ ಬ್ಯಾಂಕ್ ಅಧಿಕಾರಿಗಳ ತಂಡ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.
ರಕ್ತ ದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಹಾಗೂ ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ದುಡಿದ ಎಲ್ಲಾ ಕಾರ್ಯಕರ್ತರಿಗೂ,ಸಂಘಟಕರು ಕೃತಜ್ಞತೆಗಳನ್ನು ತಿಳಿಸಿದ್ದಾರೆ.
