ಸೋಷಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಇದರ ಅಧೀನದಲ್ಲಿರುವ ಸೋಷಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ಮಂಗಳೂರು ನಗರ ಸಮಿತಿ ವತಿಯಿಂದ ಕಳೆದ ನಾಲ್ಕು ವಾರಗಳಿಂದ ಪ್ರತಿ ಆದಿತ್ಯವಾರ ನಡೆಸಿಕೊಂಡು ಬಂದಂತಹ ನಡುಪಳ್ಳಿ ಜುಮಾ ಮಸೀದಿ ಖಬರಸ್ಥಾನ ಸ್ವಚ್ಛತಾ ಕಾರ್ಯಕ್ರಮವು ಇತ್ತೀಚೆಗೆ ಮುಕ್ತಾಯವಾಗಿದೆ. ಸುಮಾರು 40 ರಷ್ಟು ಆಟೋ ಯೂನಿಯನ್ ನ ಕಾರ್ಯಕರ್ತರು ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸ್ವಚ್ಛತಾ ಕಾರ್ಯಕ್ರಮದ ನೇತ್ರತ್ವವನ್ನು ಎಸ್ಡಿಎಯು ಮಂಗಳೂರು ನಗರ ಸಮಿತಿ ಅಧ್ಯಕ್ಷರಾದ ನೌಫಾಲ್ ಕುದ್ರೋಳಿ ವಹಿಸಿದ್ದರು.
ತಮ್ಮ ಜೀವನ ನಿರ್ವಹಣೆಗೆ ಬೇಕಾಗಿ ಮಾಡುವ ಚಾಲಕ ವೃತಿಯ ನಡುವೆಯೂ, ಇಂಥಹ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿದ ಆಟೋ ಚಾಲಕರ ಈ ಪರಿಸರ ಸ್ವಚ್ಚತಾ ಕಾರ್ಯವು ಸ್ಥಳೀಯ ಹಲವು ಗಣ್ಯರಿಂದ ಹಾಗೂ ಸಾರ್ವಜನಿಕರಿಂದ ಪ್ರಶಂಸೆಗೊಳಗಾಗಿದ್ದು, ಹಲವರ ಮಚ್ಚುಗೆಗೆ ಪಾತ್ರವಾಯಿತು.
