ರಾಷ್ಟ್ರೀಯ ಸುದ್ದಿ

ಕೇಂದ್ರ ಸರಕಾರದ ರಾಫೆಲ್ ಜೆಟ್ ಖರೀದಿ ಹಗರಣವನ್ನು ಬಯಲಿಗೆಳೆದ ಸುದ್ದಿ ತಾಣ ‘ಜನತಾ ಕಾ ರಿಪೋರ್ಟರ್’ ಗೆ ಗೂಗಲ್ ಜಾಹೀರಾತು ಸ್ಥಗಿತ !

ವರದಿಗಾರ (30.11.2017) : ಕೇಂದ್ರ ಸರಕಾರದ ಬಹು ಚರ್ಚಿತ ರಾಫೆಲ್ ಜೆಟ್ ಖರೀದಿ ಹಗರಣವನ್ನು ಬಯಲಿಗೆಳೆದ ಸುದ್ದಿ ಜಾಲತಾಣ ‘ಜನತಾ ಕಾ ರಿಪೋರ್ಟರ್’ (JKR) ನಲ್ಲಿ ಗೂಗಲ್ ತನ್ನ ಜಾಹೀರಾತು ಸೇವೆಯನ್ನು ಸ್ಥಗಿತಗೊಳಿಸಿದೆ. ಜನತಾ ಕಾ ರಿಪೋರ್ಟರ್ ಗೆ ಈ ಕುರಿತು ಈ ಮೈಲ್ ಒಂದನ್ನು ಕಳುಹಿಸಿರುವ ಗೂಗಲ್ ಸಂಸ್ಥೆ, ‘ನಿಯಮ ಉಲ್ಲಂಘನೆ’ ಯ ಕಾರಣಕ್ಕಾಗಿ ನಮ್ಮ ಜಾಹೀರಾತು ಸೇವೆಯನ್ನು ಮೊಟಕುಗೊಳಿಸಿರುವುದಾಗಿ ಹೇಳಿದೆ.

ಗೂಗಲ್ ಕಳುಹಿಸಿರುವ ಈ ಮೈಲ್ ಕುರಿತಾಗಿ ‘ಜನತಾ ಕಾ ರಿಪೋರ್ಟರ್’ ಪ್ರಕಟಿಸಿದ್ದು, “ಜನತಾ ಕಾ ರಿಪೋರ್ಟರ್ ಜಾಲತಾಣದಲ್ಲಿ ನಮ್ಮ ಜಾಹೀರಾತು ನಿಯಮಗಳಿಗೆ ಅನುಸಾರವಲ್ಲದ ಸುದ್ದಿಗಳನ್ನು ಪ್ರಕಟಿಸಿರುವುದು ತಿಳಿದುಬಂದಿದ್ದು, ಆದುದರಿಂದ ನಿಮ್ಮ ಜಾಲತಾಣದಲ್ಲಿ ನಮ್ಮ ಜಾಹೀರಾತು ಸೇವೆಯನ್ನು ನಿಷ್ಕ್ರಿಯಗೊಳಿಸಲಾಗಿದೆ” ಎಂಬ ಸಂದೇಶ ಕಳಿಸಿದ್ದಾರೆ ಎಂದು ಜನತಾ ಕಾ ರಿಪೋರ್ಟರ್ ಹೇಳಿಕೊಂಡಿದೆ. ಗೂಗಲ್ ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳುವಲ್ಲಿ ಕೂಡಾ ಎಡವಿದೆ ಎಂದು JKR ಹೇಳಿದೆ. ನಾವು 2016ರ ಸೆಪ್ಟಂಬರ್ ನಲ್ಲಿ ಬಾಲಿವುಡ್ ನಟಿ ರಾಧಿಕಾ ಅಪ್ಟೆಯವರ ಚಲನಚಿತ್ರವೊಂದರ ಸೋರಿಕೆಯಾದ ವೀಡಿಯೋ ಪ್ರಕಟಿಸಿದ್ದಕ್ಕಾಗಿ ಈ ಕ್ರಮವೆಂದು ಗೂಗಲ್ ತಿಳಿಸಿರುವುದು ನಮ್ಮ ಸಂಶಯಕ್ಕೆ ಕಾರಣವಾಗಿದೆ. ಆದರೂ ನಾವು ಇತ್ತೀಚೆಗೆ ಬಯಲಿಗೆಳೆದ ರಾಫೆಲ್ ಜೆಟ್ ಖರೀದಿ ಹಗರಣದ ಸತ್ಯಾಂಶಗಳು ಹಲವ ಕಣ್ಣು ಕೆಂಪಗಾಗಿಸಿದ್ದವು. ಗೂಗಲ್ ಸಂಸ್ಥೆ ‘ಕೆಲವೊಬ್ಬರ’ ವೈಯುಕ್ತಿಕ ಹಿತಾಸಕ್ತಿಯನ್ನು ಕಾಪಾಡುತ್ತಿರುವ ಕುರಿತು ನಮಗೆ ನಮ್ಮದೇ ಆದಂತಹಾ ಸಂಶಯಗಳಿವೆ ಎಂದು JKR ಹೇಳಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಜನತಾ ಕಾ ರಿಪೋರ್ಟರ್ ನ ಪ್ರಧಾನ ಸಂಪಾದಕ ರಿಫತ್ ಜವೈದ್, ”ಗೂಗಲ್ ಸಂಸ್ಥೆಯ ವಾದ ಒಪ್ಪತಕ್ಕಂತಹದ್ದಲ್ಲ. ನಟಿ ರಾಧಿಕಾ ಅಪ್ಟೆಯ ಸೋರಿಕೆಯಾದ ವೀಡಿಯೋವನ್ನು ನಾವು ಮಾತ್ರ ಪ್ರಕಟಿಸಿದ್ದಲ್ಲ. ಜಾಲತಾಣಗಳ ಹಲವು ಸುದ್ದಿ ಸಂಸ್ಥೆಗಳು ತಮ್ಮ ತಾಣದಲ್ಲಿ ಪ್ರಕಟಿಸಿದೆ. ಅವುಗಳ ಮೇಲಿಲ್ಲದ ಕ್ರಮ ಕೇವಲ ನಮ್ಮ ತಾಣದ ಮೇಲೆ ಮಾತ್ರ ಯಾಕೆಂದು ಪ್ರಶ್ನಿಸಿದ್ದಾರೆ. ಅದೂ ಅಲ್ಲದೆ ಗೂಗಲ್ ಸಂಸ್ಥೆಯದ್ದೇ ಒಡೆತನದ ‘ಯೂ ಟ್ಯೂಬ್’ ನಲ್ಲಿ ಇದರ ವೀಡೀಯೋ ಇನ್ನೂ ಅಸ್ತಿತ್ವದಲ್ಲಿದೆ. ಅದನ್ನು ಅಳಿಸಿ ಹಾಕದೆ, ನಿರ್ಭೀತ ಪತ್ರಿಕೋಧ್ಯಮ ನಡೆಸುತ್ತಿರುವ ನಮ್ಮ ಮೇಲೆ ಮಾತ್ರ ತೆಗೆದುಕೊಂಡಿರುವ ಈ ಕ್ರಮ ಖಂಡನೀಯ ಮತ್ತು ಆ ಕುರಿತು ಗೂಗಲ್ ಸಂಸ್ಥೆಯು ತಮ್ಮ ನಿರ್ಧಾರವನ್ನು ಮರು ಪರಿಶೀಲಿಸಬೇಕೆಂದು ಕೇಳಿಕೊಳ್ಳುತ್ತಿದ್ದೇವೆ’ ಎಂದು ಜವೈದ್ ವಿನಂತಿಸಿದ್ದಾರೆ.

ಗೂಗಲ್ ನ ಕ್ರಮವು ‘ಸ್ವತಂತ್ರ ಪತ್ರಿಕೋಧ್ಯಮ’ದ ಮೇಲಿನ ದಾಳಿಯಾಗಿದೆ. ಯಾವ ಬೆದರಿಕೆಗಳು ಕೂಡಾ ಚುನಾಯಿತ ಸರ್ಕಾರವನ್ನು ಪ್ರಶ್ನಿಸುವ ನಮ್ಮ ಹಕ್ಕನ್ನು ತಡೆಯಲಾರದು ಹಾಗೂ ನಮ್ಮ ನಿರ್ಭೀತ ಪತ್ರಿಕೋಧ್ಯಮವನ್ನು ಮುಂದುವರಿಸುತ್ತೇವೆ. ನಾವು ನರೇಂದ್ರ ಮೋದಿ ನೇತೃತ್ವದ ರಕ್ಷಣಾ ಇಲಾಖೆಯ ಸಂಶಯಾಸ್ಪದ ರಾಫೆಲ್ ಜೆಟ್ ಖರೀದಿ ವ್ಯವಹಾರದ ಕುರಿತು ವರದಿ ಪ್ರಕಟಿಸಿದ್ದಕ್ಕೆ ಪ್ರತಿಯಾಗಿ ಗೂಗಲ್ ಸಂಸ್ಥೆಯು ನಮ್ಮ ಮೇಲೆ ಈ ಕ್ರಮ ತೆಗೆದುಕೊಂಡಿದೆ ಎಂದು ನಾವು ಭಾವಿಸಿದ್ದೇವೆ ಎಂದು ರಿಫತ್ ಜವೈದ್ ತಿಳಿಸಿದ್ದಾರೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group