ವರದಿಗಾರ (30.11.2017) : ಕುತೂಹಲಕಾರಿ ಘಟನೆಯೊಂದರಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿಯದ್ದೆಂದು ಹೇಳಲಾದ ಆಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ವಿಜಯ್ ರುಪಾನಿಯವರು ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯ ಪರಿಸ್ಥಿತಿ ಬಹಳ ಕೆಟ್ಟದಾಗಿದೆ ಮಾತ್ರವಲ್ಲ ಖುದ್ದು ನನ್ನ ಪರಿಸ್ಥಿತಿಯೂ ಅದಕ್ಕಿಂತ ಭಿನ್ನವಾಗಿಲ್ಲ ಎಂದು ಆತಂಕಭರಿತರಾಗಿ ಹೇಳುತ್ತಿರುವುದು ಕೇಳಿ ಬಂದಿದೆ. ನರೇಶ್ ಸಂಗೀತಮ್ ಎನ್ನುವವರೊಡನೆ ಮಾತನಾಡುವ ಆಡಿಯೋ ಇದಾಗಿದ್ದು, ನರೇಂದ್ರ ಮೋದಿಯವರು ನನಗೆ ಫೋನಾಯಿಸಿ ರಾಜ್ಯದಲ್ಲಿ ಜೈನ ಸಮುದಾಯ ಜನಸಂಖ್ಯೆ ಕೇವಲ 5 ಶೇಕಡಾ ಇದ್ದರೂ ಹೇಗೆ ನನ್ನನ್ನು ಮುಖ್ಯಮಂತ್ರಿ ಮಾಡಿದ್ದರೆಂಬುವುದನ್ನು ನೆನಪಿಸಿದರೆಂದು ಅವರೊಡನೆ ಹೇಳುತ್ತಿರುವುದು ಆಡಿಯೋದಲ್ಲಿದೆ.
ಆಡಿಯೋದಲ್ಲಿ ದಾಖಲಾದ ಮಾತುಕತೆ ಹೀಗಿದೆ :
ನರೇಶ್ : ಹೌದು ಸರ್, ಹೌದು
ರುಪಾನಿ : ಒಂದ್ನಿಮಿಷ, ನನಗೊಂದು ಮುಖ್ಯವಾದ ಕರೆ ಬಂದಿದೆ
ನರೇಶ್ : ಹೌದು ಸರ್, ಜೈ ಜಿನೇಂದ್ರ
ರುಪಾನಿ : ಜೈ ಜಿನೇಂದ್ರ, ನಮಸ್ಕಾರ ನರೇಶ್ ಭಾಯಿ, ನಾವು ಹೋರಾಟ ಮಾಡುವುದು ಮಾತ್ರವಲ್ಲ ನಮ್ಮ ಅಸ್ತಿತ್ವವನ್ನೂ ಉಳಿಸಿಕೊಳ್ಳಬೇಕಾಗಿದೆ. ದೇಶದಲ್ಲಿ ಇರುವ ಏಕೈಕ ಜೈನ ಮುಖ್ಯಮಂತ್ರಿ ನಾನೆಂಬುವುದನ್ನು ಮರೆಯಬೇಡಿ
ನರೇಶ್ : ಸರಿಯಾಗಿ ಹೇಳಿದಿರಿ ತಾವು
ರುಪಾನಿ : ನಾನು ಈವಾಗಷ್ಟೇ ನರೇಂದ್ರ ಮೋದಿಯವರ ಕರೆ ಸ್ವೀಕರಿಸಿದ್ದೆ, ರಾಜ್ಯದಲ್ಲಿ ಜೈನ ಸಮುದಾಯದ ಜನಸಂಖ್ಯೆ ಕೇವಲ 5 ಶೇಕಡಾ ಇದ್ದರೂ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದರ ಬಗ್ಗೆ ಅವರು ಹೇಳಿದರು. ಸುರೇಂದ್ರ ನಗರದ ಜೈನರು ನಮ್ಮನ್ನು ಒಪ್ಪಿಕೊಳ್ಳುತ್ತಾರೆ ತಾನೇ? ನಮ್ಮ ಪಕ್ಷದ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಅದರಲ್ಲೂ ನನ್ನ ವೈಯುಕ್ತಿಕ ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗಿದೆ.
ನರೇಶ್ : ನಾವು ನಿಮ್ಮ ಪರಿಸ್ಥಿತಿಯನ್ನು ಕೆಟ್ಟದಾಗಲು ಬಿಡುವುದಿಲ್ಲ, ಖಂಡಿತ ನಿಮಗೆ ನಮ್ಮ ಬೆಂಬಲವಿದೆ.
ಆಡಿಯೋ ಕುರಿತಾಗಿನ ಸಂಪೂರ್ಣ ವರದಿಯನ್ನು ‘ಜನತಾ ಕಾ ರಿಪೋರ್ಟರ್’ ಪ್ರಕಟಿಸಿದ್ದು, ಆಡಿಯೊದಲ್ಲಿರುವ ವ್ಯಕ್ತಿ ಇದುವರೆಗೂ ಏನೂ ಪ್ರತಿಕ್ರಿಯೆ ನೀಡಿಲ್ಲ ಎಂದಿದೆ. ‘ಜನತಾ ಕಾ ರಿಪೋರ್ಟರ್’ ಕೂಡಾ ಆಡಿಯೋದ ಸಾಚಾತನದ ಕುರಿತು ಸ್ಪಷ್ಟಪಡಿಸಿಲ್ಲ
