ವರದಿಗಾರ (30.11.2017): 2012ರಲ್ಲಿ ನರೇಂದ್ರ ಮೋದಿ ಯವರು ಗುಜರಾತಿನ ಜನತೆಗೆ ಭರಸವೆ ನೀಡಿದ್ದ 50ಲಕ್ಷ ಮನೆಗಳನ್ನ ಪೂರ್ತಿಗೊಳಿಸಲು ಪ್ರಧಾನಿಗೆ 45ವರ್ಷ ಬೇಕಾಗಬಹುದು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವ್ಯಂಗ್ಯವಾಡಿ, ಪ್ರಧಾನಿಯನ್ನು ಕುಟುಕಿದ್ದಾರೆ.
ರಾಹುಲ್ ಗಾಂಧಿ ಟ್ವಿಟ್ಟರ್ ಮೂಲಕ ಪ್ರಧಾನಿಯನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ.
22 सालों का हिसाब,
गुजरात मांगे जवाब।गुजरात के हालात पर प्रधानमंत्रीजी से पहला सवाल:
2012 में वादा किया कि 50 लाख नए घर देंगे।
5 साल में बनाए 4.72 लाख घर।प्रधानमंत्रीजी बताइए कि क्या ये वादा पूरा होने में 45 साल और लगेंगे?
— Office of RG (@OfficeOfRG) November 29, 2017
ನರೇಂದ್ರ ಮೋದಿ ಯವರು ಗುಜರಾತಿನ ಜನತೆಗೆ ಭರಸವೆ ನೀಡಿದ್ದ 50 ಲಕ್ಷ ಮನೆಗಳಲ್ಲಿ ಕೇವಲ 4 ಲಕ್ಷದ 72 ಸಾವಿರ ಮನೆಗಳನ್ನು ಮಾತ್ರ ಕಟ್ಟಿಸಿಕೊಟ್ಟಿದ್ದಾರೆ. ಭರವಸೆಯನ್ನು ಪೂರ್ತಿಗೊಳಿಸಲು ಪ್ರಧಾನಿಗೆ 45 ವರ್ಷ ಬೇಕಾಗಬಹುದು
22 ವರ್ಷ ಗುಜರಾತಿನಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯ ಸಾಧನೆ ಏನು? ಎಂದು ಗುಜರಾತ್ ಜನತೆ ತಿಳಿಯಲು ಇಚ್ಚಿಸುತ್ತಿದ್ದಾರೆ.
ಗುಜರಾತ್ ಜನತೆ ಬಿಜೆಪಿ ಸರ್ಕಾರ 22 ವರ್ಷದ ಅಧಿಕಾರ ಅವಧಿಯಲ್ಲಿ ಮಾಡಿರುವ ಸಾಧನೆ ತಿಳಿಯಲು ಇಚ್ಚಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
