ವರದಿಗಾರ (28.11.2017) : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ತೆರಿಗೆಯ ವಿರುದ್ಧ ಗುಜರಾತ್ ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಿದೆ. 70 ರ ದಶಕದ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಸಿನೆಮಾವಾಗಿರುವ ‘ಶೋಲೇ’ ಯ ಖಳ ನಾಯಕರಂತೆ ಪೋಷಾಕು ಧರಿಸಿದ್ದ ಪ್ರತಿಭಟನಕಾರರು ಸೂರತ್ ನ ಜವಳಿ ಮಾರುಕಟ್ಟೆಯ ಬಳಿ ಕುದುರೆಯ ಮೇಲೇರಿ ಬಂದು ಮಾರುಕಟ್ಟೆಯ ವ್ಯಾಪಾರಸ್ಥರಲ್ಲಿ ತಾವು ಮಾಡಿರುವ ‘ಲೂಟಿ’ ಗೆ ಕ್ಷಮಾಪಣೆ ಕೇಳುತ್ತಾ ಪ್ರತಿಭಟಿಸುತ್ತಿರುವ ದೃಶ್ಯಗಳು ಕಂಡು ಬಂದಿದೆ.
ಗುಜರಾತಿನ ಎರಡನೇ ಅತಿ ದೊಡ್ದ ನಗರವಾಗಿರುವ ಸೂರತ್ ಜವುಳಿ ವ್ಯಾಪಾರಸ್ಥರ ಕೇಂದ್ರ ಸ್ಥಾನವಾಗಿದೆ. ಮಾತ್ರವಲ್ಲ ಪಾಟೀದಾರ್ ಸಮುದಾಯದ ಶಕ್ತಿ ಕೇಂದ್ರವೂ ಹೌದು. ಇಲ್ಲಿ ಮೋದಿಯವರ ಜನವಿರೋಧಿ ತೆರಿಗೆ ವಿರುದ್ದ ಬೃಹತ್ ಸಂಖ್ಯೆಯಲ್ಲಿ ಸೇರಿ ವ್ಯಾಪಾರಸ್ಥರು ಪ್ರತಿಭಟಿಸಿದ್ದರು. ಆದರೆ ಮುಖ್ಯವಾಹಿನಿಯ ಮಾಧ್ಯಮಗಳು ಆ ಸುದ್ದಿಗಳಿಗೆ ಉದ್ದೇಶಪೂರ್ವಕವಾಗಿ ಹೆಚ್ಚಿನ ಪ್ರಾಮುಖ್ಯತೆ ನೀಡದೆ ಪರೋಕ್ಷವಾಗಿ ಮೋದಿಯವರ ನಡೆಯನ್ನು ಬೆಂಬಲಿಸಿದ್ದರು.
ನಂತರ ರಾಹುಲ್ ಗಾಂಧಿಯವರು ಗುಜರಾತಿನ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡುವಾಗ ತೆರಿಗೆಯನ್ನು “ಗಬ್ಬರ್ ಸಿಂಗ್ ಟ್ಯಾಕ್ಸ್” ಎಂದು ವ್ಯಾಖ್ಯಾನಿಸಿದ್ದು ಬಹಳಷ್ಟು ಸುದ್ದಿಯಾಗಿತ್ತು. ಈಗ ರಾಜ್ಯ ಕಾಂಗ್ರೆಸ್ ರಾಹುಲ್ ಗಾಂಧಿಯ ಮಾತುಗಳಿಗೆ ಪೂರಕವಾಗಿ, ಗಬ್ಬರ್ ಸಿಂಗ್ ಸೇರಿದಂತೆ ‘ಶೋಲೇ’ಯ ಎಲ್ಲಾ ಖಳ ನಟರು ಸೇರಿಕೊಂಡು ಪ್ರತಿಭಟಿಸುವಂತೆ ಮಾಡುವ ವಿನೂತನ ಪ್ರಯತ್ನ ಮಾಡಿದ್ದಾರೆ. ಪ್ರತಿಭಟನೆಯಲ್ಲಿ ‘ಶೋಲೇ’ ಚಲನಚಿತ್ರದ ಠಾಕೂರ್ ಹಾಗೂ ಖಳ ನಟರಾಗಿರುವ ಸಾಂಭಾ, ಖಾಲಿಯಾ, ಮತ್ತು ಗಬ್ಬರ್ ಸಿಂಗ್ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಪಾಲ್ಗೊಂಡಿದ್ದರು
Unique protest against GST by @INCGujarat in Surat Cloth Market. – ‘Thakur’ parades #Sambha, Kalia & ‘Gabbar Singh’ in Market, while they apologise to by standers for ‘looting’ their hard earned money! #GabbarSinghTax pic.twitter.com/NxqcQNVSKu
— Saral Patel (@SaralPatel007) November 28, 2017
