ರಾಷ್ಟ್ರೀಯ ಸುದ್ದಿ

ಹಿಂದೂ ಯುವತಿಯ ಮದುವೆಯನ್ನು ನೆರವೇರಿಸಿದ ಮುಸ್ಲಿಮರು !

► ಮದ್ರಸಾ ಮುಖ್ಯೋಪಾಧ್ಯಾಯನ ನೇತೃತ್ವದಲ್ಲಿ ಧನ ಸಹಾಯ !

ವರದಿಗಾರ (28.11.2017) : ಪರಸ್ಪರ ಧರ್ಮಗಳ ವಿಚಾರದಲ್ಲಿ ಧ್ವೇಷ ಸಾಧಿಸುವ ಇಂದಿನ ಕಾಲದಲ್ಲೂ , ಅವೆಲ್ಲವನ್ನೂ ಮೀರಿ ನಿಂತು ಕೇವಲ ಮನುಷ್ಯ ಸಹಜ ಸಂಬಂಧಗಳು ಮತ್ತು ಮಾನವೀಯತೆ ಮೇಳೈಸಿದ ಘಟನೆಯೊಂದು ಪಶ್ಚಿಮ ಬಂಗಾಳದ ಮಾಲ್ದಾದ ಜಿಲ್ಲೆಯ ಖಾನ್ ಪುರ್ ಗ್ರಾಮದಲ್ಲಿ ನಡೆದಿದೆ.

ಕೇವಲ 8 ಹಿಂದೂ ಕುಟುಂಬಗಳು ಮತ್ತು ಸುಮಾರು 600 ರಷ್ಟು ಮುಸ್ಲಿಮ್ ಕುಟುಂಬಗಳು ಆ ಗ್ರಾಮದಲ್ಲಿ ವಾಸಿಸುತ್ತಿದೆ.  ಗ್ರಾಮದಲ್ಲಿ ಮದ್ರಸಾವೊಂದರ ಮುಖ್ಯೋಪಾಧ್ಯಾಯನಾಗಿ ದುಡಿಯುತ್ತಿರುವ  ಮೊತಿಉರ್ರಹ್ಮಾನ್, ತನ್ನದೇ ಗ್ರಾಮದಲ್ಲಿ ದಿನಗೂಲಿ ನೌಕರನಾಗಿದ್ದ ಮತ್ತು ಮೂರು ವರ್ಷಗಳ ಹಿಂದೆ ಮೃತಪಟ್ಟಿರುವ ತ್ರಿಜಿಲಾಲ್ ಚೌಧರಿಯ ಮಗಳಾದ ಸರಸ್ವತಿಯ ಮದುವೆಯನ್ನು ತನ್ನ ಗ್ರಾಮದ ಮುಸ್ಲಿಮರ ಸಹಕಾರದೊಂದಿಗೆ ಸುಸೂತ್ರವಾಗಿ ಮಾಡಿ ಮುಗಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಗಂಡನ ಮರಣಾ ನಂತರ ತನ್ನ ಐದು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗುವಿನ ತುಂಬು ಸಂಸಾರವನ್ನು ಬಹಳ ಕಷ್ಟಪಟ್ಟು ನಿಭಾಯಿಸುತ್ತಿದ್ದ ತ್ರಿಜಿಲಾಲ್ ಪತ್ನಿ ಸೊವರಾಣಿ, ಹೇಗೋ ಕಷ್ಟಪಟ್ಟು 2000 ರೂಪಾಯಿಗಳನ್ನು ವರದಕ್ಷಿಣೆ ನೀಡಲು ಹೊಂದಿಸಿದ್ದಳು. ಆದರೆ ಉಳಿದ ಖರ್ಚಿನ ಹಣಕ್ಕಾಗಿ ದಿಕ್ಕು ತೋಚದಂತಾಗಿದ್ದಳು. ವಿಷಯವರಿತ ಪಕ್ಕದ ಮನೆಯ ಮೊತಿಉರ್ರಹ್ಮಾನ್, ತನ್ನ ಗೆಳೆಯರಾದ ಅಬ್ದುಲ್ ಬಾರಿ, ಇಮಾದುಲ್ ರಹ್ಮಾನ್, ಜಲಾಲುದ್ದೀನ್ ಮತ್ತು ಶಾಹಿದುಲ್ ಇಸ್ಲಾಂ ಮತ್ತು ಇನ್ನು ಕೆಲವರೊಂದಿಗೆ ಸೊವರಾನಿಯ ಕಾರ್ಪಣ್ಯದ ಕುರಿತು ಹೇಳಿದ್ದರು. ಅವರೆಲ್ಲರೂ ಸಹಾಯ ಮಾಡುವ ಭರವಸೆ ನೀಡಿದರು. ಅದರಂತೆ ಎಲ್ಲರೂ ಸೇರಿ ಹಣ ಹೊಂದಿಸಿ ತಪನ್ ಚೌಧರಿಯೊಂದಿಗೆ ಸರಸ್ವತಿಯ ಮದುವೆ ಕಾರ್ಯವನ್ನು ನೆರವೇರಿಸಿದ್ದಾರೆ.

 

ಈ ಕುರಿತು ಪ್ರತಿಕ್ರಿಯಿಸಿರುವ ಮೊತಿಉರ್ರಹ್ಮಾನ್, ‘ಕೇವಲ ಧರ್ಮವೊಂದನ್ನು ಹೊರತುಪಡಿಸಿ ಸರಸ್ವತಿ ನಮ್ಮೆಲ್ಲರ ಮಗಳಾಗಿದ್ದಾಳೆ. ಅವಳ ಮದುವೆಯನ್ನು ಯಾವುದೇ ಸಮಸ್ಯೆಗಳಿಲ್ಲದೆ ನೆರವೇರಿಸುವುದು ನಮ್ಮೆಲ್ಲರ ಕರ್ತವ್ಯವಾಗಿತ್ತು. ನವಂಬರ್ 25 ರ ಆರತಕ್ಷತೆ ಕಾರ್ಯಕ್ರಮದಲ್ಲಿ ಪ್ರವೇಶದ್ವಾರದಲ್ಲಿ ನಿಂತು ಮದುಮಗನ ಕಡೆಯವರನ್ನು ಸ್ವಾಗತಿಸಿದ್ದ ಮೊತಿಉರ್ರಹ್ಮಾನ್, ತ್ರಿಜಿಲಾಲ್ ಇದ್ದಿದ್ದರೆ ಇದನ್ನೆಲ್ಲಾ ಮಾಡುತ್ತಿದ್ದ. ಅವನ ಅನುಪಸ್ಥಿತಿಯಲ್ಲಿ ಸರಸ್ವತಿಯನ್ನು ನಮ್ಮ ಮಗಳಂತೆ ಭಾವಿಸಿಕೊಂಡು ನಾನಿದನ್ನು ಮಾಡಿದ್ದೇನೆಂದು ಹೇಳಿದ್ದಾನೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group