ವರದಿಗಾರ (28.11.2017) : ಕೊಲ್ಕತ್ತಾದಲ್ಲಿ ಇತ್ತೀಚೆಗೆ ‘ಇಂಡೀಯಾ ಟುಡೇ’ ಯ ಕಾರ್ಯಕ್ರಮವೊಂದರಲ್ಲಿ ಅದರ ಸಲಹಾ ಸಂಪಾದಕರಾಗಿರುವ ರಾಜ್ ದೀಪ್ ಸರ್ದೇಸಾಯಿಯವರು ತಾನು ಬೀಫ್ ತಿಂದದ್ದರ ಬಗ್ಗೆ ಎಲ್ಲರೆದುರು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು., ಇದಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯದ ಬಿಜೆಪಿಯ ನಾಯಕನೋರ್ವ “ಗೋ ಮಾಂಸ ತಿನ್ನುವವರೆಲ್ಲರೂ ದೇಶದ್ರೋಹಿಗಳು” ಎಂದು ಹೇಳಿಕೆ ನೀಡಿದ್ದರು.
ಇದೀಗ ಟ್ವಿಟ್ಟರ್ ನಲ್ಲಿ ‘ಶಶಿಧರನ್ ಪಝೂರ್ ಎನ್ನುವ ಖಾತೆದಾರನೊಬ್ಬ, ‘ಕೊಲ್ಕತ್ತಾದ India Today Conclave ಕಾರ್ಯಕ್ರಮದಲ್ಲಿ ರಾಜ್ ದೀಪ್ ಸರ್ದೇಸಾಯಿಯವರು ನಾನು ಕೊಲ್ಕತ್ತಾದಲ್ಲಿ ಬೀಫ್ ಸ್ಟೀಕ್ ತಿಂದಿದ್ದೇನೆಂದು ಎಲ್ಲರೆದುರು ಧೈರ್ಯದಿಂದ ಹೇಳಿದ್ದಾರೆ ಮಾತ್ರವಲ್ಲ ಸಂಶಯಾಸ್ಪದ ಸನ್ನಿವೇಶದಲ್ಲಿ ಮೃತರಾಗಿರುವ ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶ ಲೋಯಾ ಅವರ ಸಾವಿನ ಕುರಿತೂ ಪ್ರಶ್ನಿಸಿದ್ದರು. ಇದನ್ನು ನಾವೆಲ್ಲರೂ ಮೆಚ್ಚಬೇಕಾದ್ದೆ’ ಎಂದು ಹೊಗಳಿ ಟ್ವೀಟ್ ಮಾಡಿದ್ದರು. ಕೂಡಲೇ ಈ ಟ್ವೀಟ್ ಗೆ ವ್ಯಂಗ್ಯಭರಿತ ಧಾಟಿಯಲ್ಲಿ ಪ್ರತಿಕ್ರಿಯಿಸಿದ ರಾಜ್ ದೀಪ್ ಸರ್ದೇಸಾಯಿ “ನಾನಿನ್ನೂ ದೇಶದ್ರೋಹಿಯಾಗಿಯೇ ಉಳಿದಿದ್ದೇನೆ” ಎಂದು ಟ್ವೀಟ್ ಮಾಡಿದ್ದರು. ಅವರ ಈ ಟ್ವೀಟ್ ಬಿಜೆಪಿಯ ನಾಯಕನ ‘ಬೀಫ್ ತಿಂದವರು ದೇಶದ್ರೋಹಿಗಳು’ ಎನ್ನುವ ಹೇಳಿಕೆಯನ್ನುದ್ದೇಶಿಸಿಯಾಗಿತ್ತೆಂದು ಟ್ವಿಟ್ಟರಿಗರು ವ್ಯಾಖ್ಯಾನಿಸಿದ್ದಾರೆ.
Guess I remain an anti national! 😄👍 https://t.co/b5OhdS8KFV
— Rajdeep Sardesai (@sardesairajdeep) November 25, 2017
