ವರದಿಗಾರ 28.11.2017 : ಗುಜರಾತ್ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಹಲವು ಆಮಿಷಗಳನು ಒಡ್ಡಿ, ಮಾಧ್ಯಮಗಳ ಮೂಲಕ ಪಾಟೀದಾರ್ ಸಮುದಾಯ ಕಾಂಗ್ರೆಸ್ಸಿಗೆ ಬೆಂಬಲ ಘೋಷಿಸಿದ್ದನ್ನು ಗೊಂದಲಕಾರಿ ಹೇಳಿಕೆಗಳ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿಯೂ ಬಿಜೆಪಿಯ ಈ ಬಾರಿಯ ಗುಜರಾತ್ ಚುನಾವಣಾ ಹಾದಿ ಬಹಳ ದುರ್ಗಮವೆನಿಸಿದೆ. ಹಾರ್ದಿಕ್ ಪಟೇಲ್ ರವರದ್ದೆಂದು ಹೇಳಲಾದ ಅಶ್ಲೀಲ ಸಿಡಿಯೇ ಬಿಜೆಪಿಗೆ ಈಗ ಮುಳುವಾದಂತಿದೆ. ಪಾಟೀದಾರ್ ಸಮುದಾಯ ಸಾಗರೋಪಾದಿಯಲ್ಲಿ ಕಾಂಗ್ರೆಸ್ ಸಭೆಗಳಲ್ಲಿ ಮತ್ತು ರ್ಯಾಲಿಗಳಲ್ಲಿ ಭಾಗವಹಿಸುತ್ತಿರುವುದು ಬಿಜೆಪಿಗೆ ತಲೆ ನೋವು ತಂದಿದೆ. ಅದಕ್ಕೆ ಪೂರಕವೆಂಬಂತೆ ರಾಜ್ಯ ಚುನಾವಣಾಣ ಕಣಕ್ಕೆ ಧುಮುಕಿರುವ ಪ್ರಧಾನಿ ಮೋದಿ ಬಂದ ದಿನವೇ ಸೂರತ್ ನಲ್ಲಿ ನಡೆದ ಕಾಂಗ್ರೆಸಿನ ರ್ಯಾಲಿಯಲ್ಲಿ ಪಾಟಿದಾರ್ ಸಮುದಾಯದ ಜನರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ್ದ ವೀಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಮುಖ್ಯ ವಾಹಿನಿಯ ಮಾಧ್ಯಮಗಳು ಇದನ್ನು ತೋರಿಸಲು ಹಿಂದೇಟು ಹಾಕುತ್ತಿದೆ ಎನ್ನುವ ಒಕ್ಕಣೆಯೂ ಆ ವೀಡಿಯೋದ ಜೊತೆಗೆ ಹಾಕಲಾಗಿದೆ.
ಆ ವೀಡಿಯೋದಲ್ಲಿ ಸೂರತ್ ನ ಮುಖ್ಯ ರಸ್ತೆಗಳ ಮೂಲಕ ಹಾದು ಹೋದ ಕಾಂಗ್ರೆಸ್ ರ್ಯಾಲಿಯಲ್ಲಿ ಪಾಟೀದಾರ್ ಸಮುದಾಯದವರೇ ಹೆಚ್ಚು ಕಂಡು ಬರುತ್ತಿದ್ದು, ಮೋದಿ ಮತ್ತು ಬಿಜೆಪಿಯ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಾಗುತ್ತಿದ್ದಾರೆ. “ಸರ್ದಾರ್ ಪಟೇಲ್ ಬ್ರಿಟಿಷರೊಂದಿಗೆ ಹೋರಾಡಿದ್ದರು, ನಾವು ಕಳ್ಳರೊಂದಿಗೆ ಹೋರಾಡುತ್ತಿದ್ದೇವೆ’ (ಸರ್ದಾರ್ ಲಡೇತೇ ಗೋರೋನ್ ಸೇ, ಹಮ್ ಲಡೇಂಗೇ ಚೋರೋನ್ ಸೇ) ಎನ್ನುವ ಅವರ ಎಂದಿನ ಘೋಷಣೆಗಳು ರ್ಯಾಲಿಯಲ್ಲೆಲ್ಲಾ ಕೇಳಿ ಬರುತ್ತಿದ್ದವು. ಒಟ್ಟಿನಲ್ಲಿ ಕಳೆದ 22 ವರ್ಷಗಳಿಂದ ಪಾಟೀದಾರ್ ಸಮುದಾಯದ ಬೆಂಬಲದೊಂದಿಗೆ ಅಧಿಕಾರದ ರುಚಿ ಅನುಭವಿಸುತ್ತಿದ್ದ ಬಿಜೆಪಿಗೆ ಈ ಬಾರಿಯ ಚುನಾವಣಾ ಕಣ ಮಾತ್ರ ಕಬ್ಬಿಣದ ಕಡಲೆಯಾಗಿ ಪರಿಣಮಿಸಿರುವುದು ಮಾತ್ರ ಸುಳ್ಳಲ್ಲ
ರ್ಯಾಲಿಯ ವೀಡಿಯೋ ವೀಕ್ಷಿಸಿ
