ವರದಿಗಾರ 28.11.2017 : ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ ಯ ಬಗ್ಗೆ ಚರ್ಚಿಸಲು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ , ತುಮಕೂರು ಜಿಲ್ಲೆಯು ‘ಶಿಕ್ಷಕರ ಸಮ್ಮಿಲನ’ ವನ್ನು ಎಚ್ ಎಂ ಎಸ್ ಯುನಾನಿ ಕಾಲೇಜಿನಲ್ಲಿ ಹಮ್ಮಿಕೊಂಡಿತ್ತು . ವಿಶ್ಲೇಷಣಾತ್ಮಕ ವಿಚಾರ ಮಂಡಿಸಿದ ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಫಯಾಝ್ ದೊಡ್ಡಮನೆ ಯಾವುದೇ ಪ್ರಜಾಸತ್ತಾತ್ಮಕ ಚರ್ಚೆ ನಡೆಸದೇ ಕೇಂದ್ರ ಸರಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಸೆಕ್ರಡ್ ಹಾರ್ಟ್ ಪದವಿ ಕಾಲೇಜು ಪ್ರಾಂಶುಪಾಲ ಶೇಕ್ ಮುಹಮ್ಮದ್ ಅನ್ವರ್ , ಎಚ್ ಎಂ ಎಸ್ ಯುನಾನಿ ಕಾಲೇಜು ಪ್ರಾಧ್ಯಾಪಕ ಡಾ. ನಿಸಾರ್ ಅಹ್ಮದ್ , ನಿವ್ರತ್ತ ಜಿಲ್ಲಾ ಶಿಕ್ಷಣ ಉಪನಿರ್ದೇಶಕರಾದ ನಜೀಬುಲ್ಲಾ ಖಾನ್ ಮತ್ತು ವಿವಿಧ ಕಾಲೇಜು , ಶಾಲೆಗಳ ಶಿಕ್ಷಕ/ಉಪನ್ಯಾಸಕರು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು . ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು , ಜಲ್ಲಾಧ್ಯಕ್ಷ ರೋಶನ್ ನವಾಝ್ , ಕಾರ್ಯದರ್ಶಿ ರಾಝಿಕ್ ಪಾಷಾ , ಶುಮಾಝ್ ಉಪಸ್ಥಿತರಿದ್ದರು.
