ರಾಷ್ಟ್ರೀಯ ಸುದ್ದಿ

ನನ್ನ ಶಿಕ್ಷಣಕ್ಕೆ ರಾಜ್ಯ ಸರ್ಕಾರದ ಖರ್ಚು ಬೇಕಾಗಿಲ್ಲ; ಶಿಕ್ಷಣದ ಖರ್ಚು ನೋಡಿಕೊಳ್ಳಲು ನನ್ನ ಗಂಡನಿದ್ದಾರೆ: ಹಾದಿಯಾ

ವರದಿಗಾರ : ಬಲವಂತದ ಮತಾಂತರದ ಆರೋಪದಲ್ಲಿ ಕಳೆದ 11 ತಿಂಗಳಿನಿಂದ ಗೃಹಬಂಧನದಲ್ಲಿರುವ ಹಾದಿಯಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರಿಂ ಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ನಡೆಯಿತು. ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಕೋರ್ಟ್ ರೂಂ ನಲ್ಲಿ ನಡೆದ ಪ್ರಕರಣದ ವಿಚಾರಣೆಗೆ ಹಾದಿಯಾ ಹಾಜರಾಗಿದ್ದರು. ಈ ಸಂದರ್ಭ ದೀಪಕ್ ಮಿಶ್ರಾ, “ರಾಜ್ಯದ ಖರ್ಚಿನಲ್ಲಿ ಶಿಕ್ಷಣ ಮುಂದುವರೆಸಬೇಕು ಎಂದು ಬಯುಸುತ್ತಿಯಾ?” ಎಂದು ಹಾದಿಯಾರನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಹಾದಿಯಾ “ನಾನು ಶಿಕ್ಷಣ ಮುಂದುವರೆಸಲು ಬಯಸುತ್ತೇನೆ. ಆದರೆ ರಾಜ್ಯದ ಖರ್ಚಿನಲ್ಲಲ್ಲ; ನನ್ನ ಗಂಡ ನನ್ನ ಖರ್ಚು ನೋಡಿಕೊಳ್ಳುತ್ತಿದ್ದಾರೆ” ಎಂದು ಉತ್ತರಿಸಿದರು.

ಈ ಪ್ರಕರಣದ ಕೇಂದ್ರ ಬಿಂದು ಆಗಿರುವ ಹಾದಿಯಾ “ನನಗೆ ನನ್ನ ಸ್ವಾತಂತ್ರ್ಯ ಬೇಕು, ನನ್ನ ನಂಬಿಕೆಯೊಂದಿಗೆ ನನ್ನ ಶಿಕ್ಷಣ ಮುಂದುವರಿಸಲು ಅವಕಾಶ ಮಾಡಿಕೊಡಿ” ಎಂದು ಕೇಳಿಕೊಂಡಿದ್ದಾರೆ. ಜತೆಗೆ ನಾನು ನನ್ನ ಪತಿಯ ಜತೆ ಹೋಗಲು ಇಚ್ಛಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮೊದಲು ವಿಚಾರಣೆ ವೇಳೆ ಹಾದಿಯಾಳನ್ನು ಒತ್ತಾಯಪೂರ್ವಕವಾಗಿ ಮತಾಂತರಿಸಲಾಗಿದೆ ಎಂದು ಪೋಷಕರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಹಾದಿಯಾ ಪತಿ ಶಾಫಿ ಜಹಾನ್ ಪರ ವಕೀಲ ಕಪಿಲ್ ಸಿಬಲ್, “ಹಾದಿಯಾ ಇವತ್ತು ತುಂಬಾ ಬೇಸರಗೊಂಡಿದ್ದಾರೆ. ನಾವು ಇವತ್ತು ಹಾದಿಯಾಳಿಗೆ ಏನು ಬೇಕು ಎಂಬುದನ್ನು ಆಕೆಯಲ್ಲೇ ಕೇಳುವ ಬದಲು ಸುದ್ದಿ ವಾಹಿನಿಗಳ ಮೂಲಕ ನಮ್ಮ ತಲೆಗೆ ತುಂಬಿದ ವಿಷವನ್ನು ತೆಗೆದುಕೊಳ್ಳುತ್ತಿದ್ದೇವೆ,” ಎಂದು ವಾದಿಸಿದರು.”ಹಾದಿಯಾ ಇಲ್ಲಿರುವಾಗ ಕೋರ್ಟ್ ಆಕೆಯ ವಾದವನ್ನು ಕೇಳಬೇಕು. ಅದರ ಬದಲು ಎನ್ಐಎಯನ್ನು ಪ್ರಶ್ನಿಸುವುದಲ್ಲ. ಆಕೆ ತನ್ನ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಮರ್ಥಳಿದ್ದಾಳೆ,” ಎಂದು ಸಿಬಲ್ ನ್ಯಾಯಾಲಯದಲ್ಲಿ ಹೇಳಿದರು.

ಇದೇ ವೇಳೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) 100 ಪುಟಗಳ ತನಿಖಾ ವರದಿಯನ್ನು ಸುಪ್ರಿಂ ಕೋರ್ಟ್ ಗೆ ಸಲ್ಲಿಸಿತು. ಹಾದಿಯಾರನ್ನು ಶಿಕ್ಷಣಕ್ಕಾಗಿ ಕಾಲೇಜಿಗೆ ಕರೆದೊಯ್ಯಬೇಕು ಮತ್ತು ಆಕೆಗೆ ಕಾಲೇಜಿನಲ್ಲಿ ಹಾಸ್ಟೆಲ್ ಸೌಲಭ್ಯವನ್ನು ನೀಡಬೇಕು ಎಂದು ಸುಪ್ರಿಂ ಕೋರ್ಟ್ಕಾಲೇಜಿನ ಡೀನ್ ಗೆ ಸೂಚನೆ ನೀಡಿದೆ.ನಂತರ ವಿಚಾರಣೆಯನ್ನು ಮುಂದೂಡಲಾಗಿದ್ದು ಮುಂದಿನ ದಿನಾಂಕವನ್ನು ಜನವರಿ ಮೂರನೇ ವಾರಕ್ಕೆ ನಿಗದಿಪಡಿಸಲಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group