ರಾಷ್ಟ್ರೀಯ ಸುದ್ದಿ

ಅಂತ್ಯಗೊಂಡ ‘ಧರ್ಮ ಸಂಸದ್’ : ರಾಮ ಮಂದಿರ ನಿರ್ಮಾಣದ ಗಡುವಿನ ನಿರ್ಣಯವೇ ಇಲ್ಲ !

ವರದಿಗಾರ : ವಿವಾದಿತ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಗಡುವು ನೀಡುವ ಸಭೆಯೆಂದೇ  ಮಾಧ್ಯಮಗಳಿಂದ ವ್ಯಾಖ್ಯಾನಿಸಲ್ಪಟ್ಟಿದ್ದ ಮೂರು ದಿನಗಳ ‘ಧರ್ಮ ಸಂಸದ್’ ನಿನ್ನೆ ಉಡುಪಿಯಲ್ಲಿ ಕೊನೆಗೊಂಡಿದೆ. ಆದರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಸರ್ಕಾರಕ್ಕೆ ಗಡುವು ನೀಡುವ ಯಾವುದೇ ನಿರ್ಣಯಗಳನ್ನು ಧರ್ಮ ಸಂಸದ್ ನಲ್ಲಿ ಕೈಗೊಳ್ಳದೇ ಇರುವುದು ಈಗ ಚರ್ಚಾ ವಿಷಯವಾಗಿದೆ. ಕೇವಲ ವಿವಾದಿತ ಸ್ಥಳದಲ್ಲಿ ಮಂದಿರ ನಿರ್ಮಿಸುತ್ತೇವೆ, ಮಸೀದಿಯಲ್ಲ ಎಂಬ ಹೇಳಿಕೆಯನ್ನು ವಿ ಹೆಚ್ ಪಿ ಕಾರ್ಯಾಧ್ಯಕ್ಷ ತೊಗಾಡಿಯಾ ಹೇಳಿದ್ದು ಬಿಟ್ಟರೆ ಉಳಿದಂತೆ ಈ ಕುರಿತು ಯಾವುದೇ ನಿರ್ಣಯಗಳು ಮಂಡನೆಯಾಗಿಲ್ಲ ಮಾತ್ರವಲ್ಲ ಮಂದಿರ ನಿರ್ಮಿಸಲು ಗಡುವನ್ನೂ ಇಟ್ಟಿಲ್ಲ.

ವಿ ಹೆಚ್ ಪಿ ಯ ಮೂಲದ ಪ್ರಕಾರ ಮಂದಿರ ನಿರ್ಮಾಣ ಕಾರ್ಯ ಬರುವ ವರ್ಷ ಡಿಸಂಬರ್ 18ಕ್ಕೆ ನಿಗದಿಪಡಿಸಲಾಗಿದೆಯೆಂದು ತಿಳಿಸಿದ್ದಾರೆ.ಆದರೆ ಈ ಕುರಿತು ಯಾವುದೇ ಗಡುವು ನೀಡುವ ನಿರ್ಣಯಗಳು ಮಂಡನೆಯಾಗಿಲ್ಲ. ಆದರೂ ಧರ್ಮ ಸಂಸದ್,  ಮಂದಿರ ನಿರ್ಮಾಣ ಕಾರ್ಯ ಸುಸೂತ್ರವಾಗಿ ನಡೆಯುವಂತಾಗಲು ಎಲ್ಲಾ ಹಿಂದೂಗಳು ಮುಂದಿನ ವರ್ಷ  ಮಾರ್ಚ್ 18 ರಿಂದ ಮಾರ್ಚ್ 31 ರ ಒಳಗೆ ಪ್ರಾರ್ಥಿಸಬೇಕೆಂದು ಕರೆ ನೀಡಿದೆ.

ಧರ್ಮ ಸಂಸದ್ ನಲ್ಲಿ ಗೋ ಹತ್ಯೆ ನಡೆಸುವವರಿಗೆ ಕಠಿಣ ಶಿಕ್ಷೆ, ಹಿಂದೂ ಸಮಾಜದಲ್ಲಿ ಬೇರೂರಿರುವ ಜಾತಿ ಪದ್ಧತಿಯನ್ನು ನಿರ್ಮೂಲನೆಗೊಳಿಸಿ ಒಗ್ಗಟ್ಟು ಪ್ರದರ್ಶಿಸಬೇಕೆಂಬ ಕರೆ, ಅಲ್ಪಸಂಖ್ಯಾತ ಮೀಸಲಾತಿಯಲ್ಲಿ ಹಿಂದೂಗಳನ್ನು ಸೇರಿಸಬೇಕಂಬ ನಿರ್ಣಯ, ದೇವಸ್ಥಾನಗಳ ಮೇಲೆ ಸರ್ಕಾರಗಳ ನಿಯಂತ್ರಣದ ವಿರುದ್ಧದ ನಿರ್ಣಯಗಳು ಮಾತ್ರ ಮಂಡನೆಯಾಗಿದೆಯೆನ್ನಲಾಗಿದೆ.

ವಿ ಹೆಚ್ ಪಿ ಯ ಕಾರ್ಯದರ್ಶಿಯಾಗಿರುವ ಗೋಪಾಲ್, ಮುಸ್ಲಿಮರು “ಲವ್ ಜಿಹಾದ್” ನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ನಾವು ನಮ್ಮ ಬಜರಂಗದಳದ ಯುವಕರನ್ನು ಕಳುಹಿಸಿ ಮುಸ್ಲಿಂ ಹೆಣ್ಣುಮಕ್ಕಳನ್ನು ಆಕರ್ಷಿಸುವ ಪ್ರಯತ್ನ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ನಾವು ಪ್ರೀತಿಗೆ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ ನಮ್ಮ ಹೆಣ್ಣು ಮಕ್ಕಳು ಶಾರುಕ್ ಖಾನ್ ಮತ್ತು ಶಿರಿಶ್ ಒಂದೇ ಎಂದು ತಿಳಿದಿದ್ದಾರೆ. ಆದರೆ ಅವರಿಗೆ ತಿಳಿದಿಲ್ಲ, ಹಿಂದೂ ಹುಡುಗರು ಒಮ್ಮೆ ಮಾತ್ರ ಮಾದುವೆಯಾಗುತ್ತಾರೆ, ಆದರೆ ಮುಸ್ಲಿಮರು ಹಾಗಲ್ಲವೆಂದು’ ಎಂದು ಹೇಳಿದ್ದಾರೆ

ತೊಗಾಡಿಯಾ ತನ್ನ ಸಮಾರೋಪ ಭಾಷಣದಲ್ಲಿ, ಪದ್ಮಾವತಿ ಸಿನೆಮಾವನ್ನು ನಿಷೇಧಿಸಬೇಕೆಂದು ಪುನರುಚ್ಚರಿಸಿದರಲ್ಲದೆ, ಸಂಜಯ್ ಲೀಲಾ ಬನ್ಸಾಲಿಗೆ ಧೈರ್ಯವಿದ್ದರೆ ಪ್ರವಾದಿ ಪೈಗಂಬರರ ಕುರಿತಾಗಿನ ಸಿನೆಮಾ ಮಾಡಲಿ ಎಂಬ ಪ್ರಚೋದನಕಾರಿಯಾದ ಭಾಷಣ ಮಾಡಿದ್ದಾರೆ. ಒಟ್ಟಾರೆಯಾಗಿ ರಾಮ ಮಂದಿರ ನಿರ್ಮಾಣದ ವಿಷಯದಲ್ಲೊಂದು ನಿರ್ಣಾಯಕ ತಿರ್ಮಾನ ಈ ಬಾರಿ ಹೊರ ಬರುತ್ತದೆಯೆಂದು ಕಾದವರಿಗೆ ನಿರಾಶೆಯಾಗಿರುವುದಂತೂ ನಿಜ. ಆದರೆ ಉಳಿದ ನಿರ್ಣಯಗಳೇನಿದ್ದರೂ ಸದ್ಯಕ್ಕೆ ದೇಶದಲ್ಲಿ ಹರಿದಾಡುತ್ತಿರುವ ಸಮಸ್ಯೆಗಳ ಕುರಿತಾಗಿದೆ. ಈ ‘ಧರ್ಮ ಸಂಸದ್’ ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಹಿಂದು ವೋಟ್ ಬ್ಯಾಂಕ್ ಗಟ್ಟಿಗೊಳಿಸಲಿಕ್ಕಾಗಿ ಹೆಣೆದ ತಂತ್ರಗಾರಿಕೆ ಇದೆಂದು ರಾಜಕೀಯ ವಿಶ್ಲೇಷಕರ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತು

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group