ವಿದೇಶ ಸುದ್ದಿ

ಮನೆಯಿಲ್ಲದ ನಿರ್ಗತಿಕನ ಒಂದು ಸಾವಿರ ರೂಪಾಯಿ ಸಹಾಯಕ್ಕೆ ಬದಲಾಗಿ ಯುವತಿ ನೀಡಿದ್ದು ಎರಡೂವರೆ ಕೋಟಿ ರೂಪಾಯಿಗಳನ್ನು!!

ವರದಿಗಾರ : ಯಾಂತ್ರೀಕೃತ ಜೀವನದ ಇಂದಿನ ಯುಗದಲ್ಲಿ ಮಾನವೀಯತೆಯ ಸೆಲೆಗಳು ಬತ್ತಿ ಹೋಗಿದ್ದು, ಅದು ಘಟಿಸಿದಾಗಲೆಲ್ಲಾ ಬಹುದೊಡ್ಡ ಸುದ್ದಿಯಾಗುತ್ತಿರುವುದು ಕಾಲದ ಮಹಿಮೆಯೆಂದೇ ಹೇಳಬಹುದು. ಅಂತಹದೇ ಒಂದು ಘಟನೆ ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆದಿದ್ದು, ಅಂತರ್ಜಾಲ ತಾಣಗಳಲ್ಲಿ ಸಂಚಲನ ಸೃಷ್ಟಿಯಾಗಿದೆ.

ನ್ಯೂಜರ್ಸಿಯ 27ರ ಹರೆಯದ ಅಸಹಾಯಕ ಯುವತಿಯೋರ್ವಳು ಮಧ್ಯ ರಾತ್ರಿ ತನ್ನ ಕಾರಿನ ಗ್ಯಾಸ್ ಖಾಲಿಯಾಗಿ ನಡುರಸ್ತೆಯಲ್ಲಿ ನಿಂತಿದ್ದನ್ನು ಕಂಡ ಮನೆಯಿಲ್ಲದ ಆ ನಿರ್ಗತಿಕ,  ತನ್ನ ಅಂದಿನ ಗಳಿಕೆಯಾಗಿದ್ದ 20 ಡಾಲರಿನಿಂದ ಆ ಯುವತಿಯ ಕಾರಿಗೆ ಗ್ಯಾಸ್ ಹಾಕಿಸಿ ಅಪದ್ಬಾಂಧವನಾಗಿ ಬಂದಿದ್ದವನಿಗೆ ಋಣಿಯಾಗಿರಲು ಆ ಯುವತಿ ಅಂತರ್ಜಾಲ ತಾಣದಲ್ಲಿ ನಿಧಿ ಸಂಗ್ರಹಣೆ ಮಾಡಿ,  ಈಗ ಎರಡೂ ವರೆ ಕೋಟಿಗೂ ಅಧಿಕ ಮೊತ್ತವನ್ನು ಕಲೆ ಹಾಕಿರುವ ಮಾನವೀಯತೆಯ ಸುದ್ದಿ ಬಹಳ ರೋಚಕವಾಗಿದೆ.

 

ಘಟನೆಯನ್ನು ಯುವತಿ ಕೇಟ್ ಮೆಕ್ಲೂರ್  ವಿವರಿಸಿದ್ದು ಹೀಗೆ. ‘ನಾನು ನ್ಯೂಜರ್ಸಿಯಿಂದ ಫಿಲಡೆಲ್ಫಿಯಾಕ್ಕೆ ಪ್ರಯಾಣಿಸುತ್ತಿರಲು ದಾರಿ ಮಧ್ಯೆ ನನ್ನ ಕಾರಿನ ಗ್ಯಾಸ್ ಖಾಲಿಯಾಗಿ ದಿಕ್ಕು ತೋಚದಂತಾಗಿದ್ದೆ. ಆದರೂ ಪ್ರಯತ್ನಿಸಿ ಹತ್ತಿರದ ಗ್ಯಾಸ್ ಸ್ಟೇಶನ್ ವರೆಗೆ ಕಾರನ್ನು ತರುವ ಪ್ರಯತ್ನದಲ್ಲಿದ್ದೆ. ಆಗ ನನ್ನ ಕಣ್ಣ ಮುಂದೆ ಕಂಡವನೇ ಈ ಜಾನಿ ! ಆತ ರಸ್ತೆಯ ಪಕ್ಕದಲ್ಲೇ ಕುಳಿತುಕೊಂಡಿದ್ದ. ನನ್ನನ್ನು ನೋಡಿದಾಗಲೇ ಆತನಿಗೆ ನನ್ನ ಸಮಸ್ಯೆಯ ಕುರಿತು ತಿಳಿಯಿತು. ಆ ಕೂಡಲೇ ಜಾನಿ ನನ್ನನ್ನು ಕಾರಿನೊಳಗೆ ಡೋರ್ ಭದ್ರಪಡಿಸಿ ಕುಳಿತುಕೊಳ್ಳುವಂತೆ ಸೂಚಿಸಿ, ತಾನು ಹೊರಟು ಹೋಗಿದ್ದ. ಕೆಲವು ನಿಮಿಷಗಳ ತರುವಾಯ ಹಿಂತಿರುಗಿ ಬಂದಿದ್ದ ಜಾನಿಯ ಕೈಯ್ಯಲ್ಲಿ ಗ್ಯಾಸ್ ತುಂಬಿದ್ದ ಕೆಂಪು ಕ್ಯಾನ್ ಇತ್ತು. ತನ್ನ ಅಂದಿನ ಗಳಿಕೆಯಾಗಿದ್ದ 20 ಡಾಲರನ್ನು ( ಸುಮಾರು ರೂ 1300) ಆತ ನನಗೆ ಗ್ಯಾಸ್ ತರಲು ವ್ಯಯಿಸಿದ್ದ ! ಅಂದು ಆತನಿಗೆ ಹಿಂತಿರುಗಿಸಲು ನನ್ನಲ್ಲಿ ಹಣವಿರಲಿಲ್ಲ. ಆತ ಅದನ್ನು ಕೇಳಲೂ ಇಲ್ಲ. ಈ ಘಟನೆಯ ನಂತರ ಹಲವಾರು ಬಾರಿ ನಾನು ಜಾನಿಯನ್ನು ಅದೇ ಸ್ಥಳದಲ್ಲಿ ಭೇಟಿಯಾಗಿದ್ದೆ. ಆತ ನೀಡಿದ್ದ ಸಾಲವನ್ನು ಮರು ಪಾವತಿಸಿದ್ದೆ. ಮಾತ್ರವಲ್ಲ ಆತನಿಗೆ ಈ ಚಳಿಯ ವೇಳೆಯಲ್ಲಿ ಸಹಾಯವಾಗಲೆಂದು ಜಾಕೆಟ್, ಕೈಗವಸು, ಟೋಪಿ ಮತ್ತು ಸಾಕ್ಸ್ ಗಳನ್ನು ನೀಡಿದ್ದೆ. ಆತನನ್ನು ಭೇಟಿಯಾದಾಗಲೆಲ್ಲಾ ಸ್ವಲ್ಪ ಹಣ ಸಹಾಯವನ್ನೂ ಮಾಡುತ್ತಿದ್ದೆ.  ಆದರೆ ಆ ಮಧ್ಯರಾತ್ರಿಯ ಆತ ನನ್ನಿಂದ ಏನೊಂದು ಫಲಾಪೇಕ್ಷೆಯಿಲ್ಲದೆ ಮಾಡಿದ ಸಹಾಯಕ್ಕಾಗಿ ಆತನಿಗೆ ಇನ್ನೂ ಹೆಚ್ಚಿನದನ್ನು ಮಾಡಲೆಂದು ಯೋಚಿಸುತ್ತಿದ್ದೆ. ಒಂದು ದಿನ ನಾನು ಆತನಿಗೆ ದವಸ ಧಾನ್ಯಗಳ ಪೆಟ್ಟಿಗೆಯನ್ನು ಕೊಟ್ಟಾಗ ಆತ ಅದನ್ನು ತಿನ್ನುತ್ತಾ “ನಿಮಗೆ ಒಂದು ಬೇಕಾ” ಎಂದು ಕೇಳುವಷ್ಟರ ಮಟ್ಟಿಗಿನ ಪರೋಪಕಾರಿಯಾಗಿದ್ದಾನೆ ಜಾನಿ. ಸೂರಿಲ್ಲದ ಆತನಿಗೆ ಒಂದು ಮನೆಯ ನಿರ್ಮಾಣ ಮಾಡಿಕೊಡಬೇಕು, ಆತನಿಗೆ ಆರು ತಿಂಗಳ ಮಟ್ಟಿಗೆ ಸಾಕಾಗುವ ಖರ್ಚಿಗಾದರೂ ಹಣ ಹೊಂದಿಸಬೇಕೆಂಬ ಗುರಿಯೊಂದಿಗೆ www.gofundme.com ತಾಣದಲ್ಲಿ ನನ್ನ ಅನುಭವದೊಂದಿಗೆ ಜಾನಿಗೆ ಬೇಕಾಗಿ ನಿಧಿ ಸಂಗ್ರಹಣೆಗೆ ಮುಂದಾದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ‘ ಎಂದು ಧನ್ಯತಾ ಭಾವ ವ್ಯಕ್ತಪಡಿಸುತ್ತಾರೆ ಕೇಟ್ ಮೆಕ್ಲೂರ್.

ಕೇಟ್ ರವರ ನಿಧಿ ಸಂಗ್ರಹಣೆಯು ನವಂಬರ್ 10 ರಿಂದ ಪ್ರಾರಂಭವಾಗಿದ್ದು ಇಂದಿನ ವರೆಗೆ ಒಟ್ಟು 13000 ಕ್ಕೂ ಹೆಚ್ಚು ದಾನಿಗಳು ನಿಧಿ ಸಂಗ್ರಹಣೆಗೆ ಕೈ ಜೋಡಿಸಿದ್ದು, ಒಟ್ಟು 3,76,988 (ಸುಮಾರು ಎರಡೂ ವರೆ ಕೋಟಿ ರೂಪಾಯಿಗಳು) ಡಾಲರ್ ನಿಧಿ ಸಂಗ್ರಹವಾಗಿದೆ. ಕೇಟ್’ಗೆ ಅಂದು ರಾತ್ರಿ ಮಾನವೀಯತೆಯ ಮುಖದರ್ಶನ ಮಾಡಿಸಿದ್ದ ಜಾನಿಗೆ ಸಹಾಯ ಮಾಡಲು ಜನ ತುದಿಗಾಲಲ್ಲಿ ನಿಂತಿರುವುದು ಆತನಿಗೆ ಸಂಗ್ರಹವಾದ ಹಣದ ಮೊತ್ತವೇ ಸಾರಿ ಹೇಳುತ್ತಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group