ರಾಜ್ಯ ಸುದ್ದಿ

ನಾನು ಹಿಂದೂ ವಿರೋಧಿಯಲ್ಲ, ಹಿಂದುತ್ವದ ವಿರೋಧಿ; ಕಲೆಗೆ ಅಡ್ಡಿಪಡಿಸುವುದಕ್ಕಿಂತ ನೇರವಾಗಿ ಚರ್ಚೆಗೆ ಬನ್ನಿ: ಸಂಘಪರಿವಾರಕ್ಕೆ ನಟ ಚೇತನ್ ಸವಾಲು

ವರದಿಗಾರ: ನಾನು ಹಿಂದೂ ವಿರೋಧಿಯಲ್ಲ, ಹಿಂದುತ್ವದ ವಿರೋಧಿ. ಎಲ್ಲಾ ಧರ್ಮಗಳನ್ನು ಪ್ರೀತಿಯಿಂದ ಕಾಣುವುದೇ ಹಿಂದೂ ಧರ್ಮ  ಎಂದು ನಟ ಚೇತನ್ ಹೇಳಿದ್ದಾರೆ.

ಅವರು ಚಾಮರಾಜನಗರ ಜಿಲ್ಲೆಯಲ್ಲಿ ‘ಅತಿರಥ’ ಚಿತ್ರ ಬಿಡುಗಡೆಗೆ ಸಂಘಪರಿವಾರದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿರುವ ಘಟನೆಯ ಬಗ್ಗೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಬಹುತ್ವವನ್ನು ಬಿಟ್ಟು ಒಂದೇ ಅಜೆಂಡಾ ಸಾರಲು ಹೊರಟವರನ್ನು ಮಾತ್ರ ಪ್ರಶ್ನೆ ಮಾಡಿದ್ದೇನೆ. ಈ ರೀತಿ ಪ್ರಶ್ನಿಸುವಂತಹ ಗುಣ ಬೆಳೆದಿದ್ದು ಕೂಡ ಬಸವಣ್ಣ, ಕುವೆಂಪು ಅಂತಹವರು ಹುಟ್ಟಿದ ಕರ್ನಾಟಕದ ಈ ಮಣ್ಣಿನಲ್ಲಿ. ನನ್ನ ಮೇಲಿನ ದ್ವೇಷಕ್ಕಾಗಿ ಸಿನಿಮಾಗೆ ಅಡ್ಡಿಪಡಿಸುವುದು ಅವರ ಸಂಸ್ಕೃತಿ ತೋರಿಸುತ್ತದೆ. ನಾನು ಹಿಂದೂ ವಿರೋಧಿ ಎಂಬ ಅಭಿಪ್ರಾಯವಿದ್ದರೆ ನೇರವಾಗಿ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.

ಸಿನಿಮಾ ಕೇವಲ ಒಬ್ಬ ನಟನನ್ನು ಅವಲಂಬಿಸಿರುವುದಿಲ್ಲ. ನಿರ್ಮಾಪಕ, ನಿರ್ದೇಶಕರು ಹಣ ಮತ್ತು ಶ್ರಮ ಹಾಕಿರುತ್ತಾರೆ. ನೂರಾರು ಕಾರ್ಮಿಕರು ಅದಕ್ಕಾಗಿ ಕೆಲಸ ಮಾಡಿರುತ್ತಾರೆ. ಅವರೆಲ್ಲರ ಜೀವನವೂ ಆ ಚಿತ್ರದ ಮೇಲೆ ನಿಂತಿರುತ್ತದೆ. ಕಲೆಗೆ ಅಡ್ಡಿಪಡಿಸುವುದು ಒಳ್ಳೆಯ ಸಂಸ್ಕೃತಿಯಲ್ಲ ಎಂದು ಚೇತನ್ ಹೇಳಿದ್ದಾರೆ.

ನ.24ರಂದು ಬಿಡುಗಡೆಯಾದ ಅತಿರಥ ಚಿತ್ರಕ್ಕೆ ಎಲ್ಲ ಕಡೆ ಉತ್ತಮ ಪ್ರತಿಕ್ರಿಯಿದ್ದು, ಆರೋಗ್ಯ ಮತ್ತು ಶಿಕ್ಷಣ ವ್ಯಾಪಾರೀಕರಣದಿಂದಾಗಿರುವ ಸಮಸ್ಯೆಗಳ ಕುರಿತು ಸಾಮಾಜಿಕ ಸಂದೇಶ ನೀಡುತ್ತದೆ. ಆದರೆ, ಚಾಮರಾಜನಗರದಲ್ಲಿ ನಗರಸಭೆ ಸದಸ್ಯರೊಬ್ಬರು ಸಿನಿಮಾದ ಫ್ಲೆಕ್ಸ್‌ಗಳನ್ನು ಹರಿದು, ಚಿತ್ರ ಪ್ರದರ್ಶಿಸದಂತೆ ಚಿತ್ರಮಂದಿರ ಮಾಲೀಕರಿಗೆ ಒತ್ತಡ ಹಾಕಿದ್ದಾರೆ. ಇದರ ವಿರುದ್ಧ ಕಾನೂನು ಮೂಲಕವೂ ಹೋರಾಟ ಮಾಡುತ್ತೇವೆ ಎಂದು ಈ ಸಂದರ್ಭ ಅವರು ಸ್ಪಷ್ಟಪಡಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group