ವರದಿಗಾರ: ಕರ್ನಾಟಕದ ನಾಡಧ್ವಜದ ಬಣ್ಣವನ್ನೇ ಮರೆತು ಸದ್ಯ ಇರುವ ‘ಕೇಸರಿ ಮತ್ತು ಕೆಂಪು’ ಬಣ್ಣದ ಧ್ವಜವೇ ಸಾಕೆಂದು ಹೇಳುವುದರ ಮೂಲಕ ಸಂಸದೆ ಶೋಭಾ ಕರಂದ್ಲಾಜೆ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಅವರು ಉಡುಪಿಯಲ್ಲಿ ನಡೆದ ಧರ್ಮ ಸಂಸತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭ ಈ ಎಡವಟ್ಟು ಮಾಡಿಕೊಂಡಿದ್ದಾರೆ.
ಕರ್ನಾಟಕಕ್ಕೆ ಈಗಾಗಲೇ ಧ್ವಜ ಇದೆ. ಕನ್ನಡಿಗರಿಗೆ ಕನ್ನಡ ಗೀತೆ ಇದೆ. ಕನ್ನಡದ ಧ್ವಜ ಕೇಸರಿ ಮತ್ತು ಕೆಂಪುನ್ನು ನಾವೀಗಾಗಲೇ ಉಪಯೋಗಿಸುತ್ತಿದ್ದೇವೆ. ಇದನ್ನು ಹೊರತುಪಡಿಸಿದ ಧ್ವಜ ಬೇಕೆಂದು ಸಿದ್ದರಾಮಯ್ಯ ನವರ ಮನಸ್ಸಿನಲ್ಲಿ ಯಾಕಿದೆ ಎಂಬುವುದು ಗೊತ್ತಿಲ್ಲ ಎಂದು ತನ್ನ ಹೇಳಿಕೆಯಲ್ಲಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದರು.
ಇತ್ತೀಚೆಗೆ ಕೇಂದ್ರ ಸರಕಾರಕ್ಕೆ 23 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ ಎಂದು ಬದುಕಿದ್ದವರ ಹೆಸರನ್ನು ಹಾಗೂ ಕೌಟುಂಬಿಕ ಕಲಹದಿಂದ ಕೊಲೆಯಾದವರ ಹೆಸರನ್ನೂ ಸೇರ್ಪಡಿಸಿದ ವರದಿಯನ್ನು ಶೋಭಾ ಕರಂದ್ಲಾಜೆ ಕೇಂದ್ರಕ್ಕೆ ನೀಡಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರು.
ವೀಡಿಯೋ ಕೃಪೆ: ಸುದ್ದಿ ಟಿವಿ
