ವರದಿಗಾರ-ಸಾಮಾಜಿಕ ತಾಣ ಹೈಲೈಟ್ಸ್: ನಿನ್ನೆಯಷ್ಟೇ ಬೆಂಗಳೂರಿನ ಜನರಿಗೆ ರಿಯಾಯಿತಿ ದರದಲ್ಲಿ ಊಟ ಮತ್ತು ಉಪಾಹಾರ ಒದಗಿಸಲು ನಗರದ 101 ವಾರ್ಡ್ಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಹಸಿವು ಮುಕ್ತ ಬೆಂಗಳೂರು ಎಂಬ ಉದ್ದೇಶದಿಂದ ಜಾರಿಗೊಂಡು, ಉದ್ಘಾಟನೆಗೊಂಡ ‘ಇಂದಿರಾ ಕ್ಯಾಂಟೀನ್’ ಬಗ್ಗೆ ಪರ ವಿರೋಧ ಚರ್ಚೆಗಳು, ಹೇಳಿಕೆಗಳು ಸಾಮಾಜಿಕ ಜಾಲತಾಣವಾದ ಫೇಸ್ಬುಕ್, ಟ್ವಿಟ್ಟರ್, ವಾಟ್ಸಪ್ ಗಳಲ್ಲಿ ಹರಿದಾಡುತ್ತಿದೆ. ಹಲವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ‘ಇಂದಿರಾ ಕ್ಯಾಂಟೀನ್’ ಬಗ್ಗೆ ಅಭಿಪ್ರಾಯಗಳನ್ನು ಹಂಚಿ ಬೆಂಬಲ ಸೂಚಿಸಿದ್ದರೆ, ಇನ್ನು ಕೆಲವರು ಯೋಜನೆಗೆ ವಿರೋಧವನ್ನು ವ್ಯಕ್ತಪಡಿಸುತ್ತಾ ಇದು ‘ರಾಜಕೀಯ ಲಾಭಕ್ಕಾಗಿ’ ಮಾಡಲಾಗಿದೆ ಎಂದಿದ್ದಾರೆ. ಇನ್ನು ಕೆಲವರು ತನ್ನದೇ ಮಾತಿನ ಮೂಲಕ ವ್ಯಂಗವಾಡುತ್ತಾ ಟಾಂಗ್ ಕೊಟ್ಟಿದ್ದಾರೆ. ಇನ್ನು ಹಲವರು ಇಂತಹ ಯೋಜನೆಯನ್ನು ಎಲ್ಲಾ ನಗರಗಳಲ್ಲಿ ಜಾರಿಗೆ ಬರುವಂತೆ ಆಗ್ರಹಿಸಿದ್ದಾರೆ. ಇನ್ನು ವಿರೋಧಿಸುವವರಿಗೆ ತಾವು ಬೆಂಬಲಿಸುವ ಪಕ್ಷದದವರು ಮುಂಬರುವ ಚುನಾವಣಾ ಪ್ರಣಾಳಿಕೆಯಲ್ಲಿ ಇಂತಹ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆಯೆಂದು ಘೋಷಿಸಿ ಎಂದು ಸವಾಲು ಹಾಕಿದ್ದಾರೆ.
ಒಟ್ಟಾರೆ ಸಾಮಾಜಿಕ ತಾಣದಲ್ಲೂ ಇಂದಿರಾ ಕ್ಯಾಂಟೀನ್ ತೆರೆದಂತಿದೆ.
ನನ್ನ ಸಮಾಜ “ಅಭಿವೃದ್ಧಿಯಾಗಬೇಕು, ಅಭಿವೃದ್ಧಿಯಾಗಲೂ ಬಾರದು” ಎಂಬ ಧೋರಣೆ.
(ಸಾರ್ವಜನಿಕ ಹಿತಾಸಕ್ತಿಯ ದೃಷ್ಠಿಯಿಂದ ಕೆಳಗೆ ನೀಡಿರುವ ಚಿತ್ರದಿಂದ ಹೆಸರನ್ನು ಅಳಿಸಿ ಹಾಕಲಾಗಿದೆ).
