ರಾಷ್ಟ್ರೀಯ ಸುದ್ದಿ

ಕಡಿವಾಣವಿಲ್ಲದ ಸೋಲಿನ ಸರಣಿ: ಗುಜರಾತ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲೂ ಎಬಿವಿಪಿಗೆ ಹೀನಾಯ ಸೋಲು

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಗುಜರಾತ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲೂ ಬಹು ದೊಡ್ಡ ಅಂತರದಿಂದ ಸೋಲನುಭವಿಸಿದೆ. ಮೂಲಗಳ ಪ್ರಕಾರ ವಿಶ್ವವಿದ್ಯಾಲಯದ ಅತೀ ದೊಡ್ಡ ವಿಭಾಗವಾದ ‘ಸ್ಕೂಲ್ ಆಫ್ ಸೋಷಿಯಲ್ ಸ್ಟಡೀಸ್’ ನಿಂದ ಸ್ವತಂತ್ರ ಅಭ್ಯರ್ಥಿ ದಿಲೀಪ್ ಕುಮಾರ್ ಚುನಾಯಿತರಾಗಿದ್ದರೆ, ‘ ಸ್ಕೂಲ್ ಆಫ್ ಇಂಟರ್ ನ್ಯಾಷನಲ್ ಸ್ಟಡೀಸ್’ ನಿಂದ ಸ್ವತಂತ್ರ ಅಭ್ಯರ್ಥಿ ಅರವಿಂದ್ ವಿಜೇತರಾಗಿದ್ದಾರೆ. ಇತರ ವಿಭಾಗಗಳಿಂದಲೂ ಸ್ವತಂತ್ರ ಅಭ್ಯರ್ಥಿಗಳಾದ ಅರ್ಜುನ್ ಪಟೇಲ್ ಹಾಗೂ ವಿಪಿನ್ ಸಿಂಗ್ ಜಯಗಳಿಸಿದ್ದಾರೆ.

ದಲಿತ ವಿದ್ಯಾರ್ಥಿ ಸಂಘಟನೆಗಳು, ಎಡಪಂಥೀಯ ಸಂಘಟನೆಗಳು ಹಾಗೂ ಕಾಂಗ್ರೆಸ್ ನ ವಿದ್ಯಾರ್ಥಿ ಅಂಗವಾದ ಎನ್ ಎಸ್ ಯು ಐ ಸಮೇತ ಹಲವು ಸಂಘಟನೆಗಳು ಈ ಚುನಾವಣೆಯನ್ನು ಬಹಿಷ್ಕರಿಸಿದ್ದರೂ ಎಬಿವಿಪಿ ವಿರುದ್ಧ ಪ್ರಚಾರದಲ್ಲಿ ಕೈ ಜೋಡಿಸಿದ್ದವು.

ಇದಕ್ಕಿಂತ ಮೊದಲು ಎಬಿವಿಪಿ ಜೆ ಎನ್ ಯು, ಅಲಹಾಬಾದ್ ವಿಶ್ವವಿದ್ಯಾಲಯ, ಪಂಜಾಬ್ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲೂ ಸೋಲನುಭವಿಸಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕ್ಷೇತ್ರವಾದ ವಾರಣಾಸಿಯ ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠದಲ್ಲೂ ಹಿನ್ನಡೆ ಅನುಭವಿಸಿತ್ತು.

ಸಂಘಪರಿವಾರದ ವಿದ್ಯಾರ್ಥಿ ಅಂಗವಾದ ಎಬಿವಿಪಿಯ ಮುಂದುವರಿದ ಸೋಲಿನ ಸರಣಿ ಯುವ ಜನತೆಯಲ್ಲಿ ಕ್ಷೀಣಿಸುತ್ತಿರುವ ಸಂಘದ ಪರ ಒಲವಿನ ಲಕ್ಷಣವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. ಮುಂದಿನ ತಿಂಗಳು ಚುನಾವಣೆ ಎದುರಿಸಲಿರುವ ಬಿಜೆಪಿ ಯ ‘ಮಾದರಿ ರಾಜ್ಯ’ವಾದ ಗುಜರಾತಿನಿಂದ ಈಗ ಕೇಳಿ ಬರುತ್ತಿರುವ ಎಬಿವಿಪಿಯ ಸೋಲು ರಾಜಕೀಯ ಕ್ಷೇತ್ರದಲ್ಲಿ ಕುತೂಹಲ ಸೃಷ್ಟಿಸಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group