ವರದಿಗಾರ: ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ಪ್ರಧಾನ ಉದ್ದೇಶವೇ ಹಿಂಸಾಚಾರವಾಗಿದ್ದು, ಅದುವೇ ಬಿಜೆಪಿಯ ಕಾರ್ಯತಂತ್ರವಾಗಿದೆ ಎಂದು ಪಶ್ಷಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನನಗೆ ರಾಜಕೀಯದಲ್ಲಿ ಸ್ಪರ್ಧೆ ನೀಡಲು ವಿಫಲತೆಯನ್ನು ಕಂಡಿರುವ ಬಿಜೆಪಿಯು ಪಶ್ಚಿಮ ಬಂಗಾಲದಲ್ಲಿ ಹಿಂಸಾಚಾರ ಪ್ರಾರಂಭಿಸಲು ಪ್ರಯತ್ನಿಸುತ್ತಿದೆ. ಇಲ್ಲಿ ಅಸ್ತಿತ್ವವೇ ಇಲ್ಲದ ಪಕ್ಷವು ತಾನು ಖರೀದಿಸಿದ ಮಾಧ್ಯಮ ಮತ್ತು ಸಾಮಾಜಿಕ ತಾಣದ ಮೂಲಕ ಅಸ್ತಿತ್ವವನ್ನು ಪಡೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿಗರು ಕೇವಲ ಬೊಬ್ಬೆ ಹೊಡೆಯುತ್ತಾರೆ. ಅವರು ಬೊಬ್ಬೆ ಹೊಡೆಯುತ್ತಾನೆ ಇರಲಿ. ಪಶ್ಚಿಮ ಬಂಗಾಲದಲ್ಲಿ ಅವರಿಂದ ಏನೂ ಮಾಡಲು ಅಸಾಧ್ಯವೆಂದು ಹೇಳಿದರು.
