ವರದಿಗಾರ: ಸೋಮವಾರ ಹಾದಿಯಾ ಪ್ರಕರಣದ ಕುರಿತಾಗಿ ಸುಪ್ರೀಂ ಕೊರ್ಟಿಗೆ ಹಾಜರು ಪಡಿಸಲಿಕ್ಕಾಗಿ ಹಾದಿಯಾರನ್ನು ಕೇರಳದ ನೆಡುಂಬಶ್ಶೇರಿ ವಿಮಾನ ನಿಲ್ದಾಣಕ್ಕೆ ಕರೆ ತಂದ ಸಂದರ್ಭ ಮಾಧ್ಯಮಗಳಿಗೆ ತಡೆ ಹಿಡಿದಿದ್ದರೂ “ನನಗೆ ನ್ಯಾಯ ಸಿಗಬೇಕು, ನಾನು ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕರಿಸಿದ್ದೇನೆ. ಇಸ್ಲಾಂ ಸ್ವೀಕರಿಸಲು ಯಾರೂ ನನ್ನ ಮೇಲೆ ಒತ್ತಡ ಹೇರಿಲ್ಲ. ನನಗೆ ಪತಿ ಶೆಫಿನ್ ಜಹಾನ್ಯೊಂದಿಗೆ ಹೋಗಬೇಕು, ನಾನು ಮುಸ್ಲಿಮ್ ಎಂದು ಸಾರ್ವಜನಿಕವಾಗಿ ಹಾದಿಯಾ ಕೂಗಿ ಹೇಳಿದ್ದಾರೆ.
ಹಾದಿಯಾ ಸುದ್ದಿಗಾರರೊಂದಿಗೆ ಮಾತಾಡದಂತೆ ಪೊಲೀಸರು ಭಾರೀ ಬಂದೋ ಬಸ್ತು ಏರ್ಪಡಿಸಿರುವುದರ ಮಧ್ಯೆಯೇ ಹಾದಿಯಾ ಸಾರ್ವಜನಿಕವಾಗಿ ತನ್ನ ನಿರ್ಧಾರವನ್ನು ಹೇಳಿಕೊಂಡಿದ್ದಾರೆ.
