ವರದಿಗಾರ: ತಾನು ಸ್ವಇಚ್ಚೆಯಿಂದ ಶಫಿನ್ ಜಹಾನ್ ರನ್ನು ವಿವಾಹವಾಗಿದ್ದು, ಮತಾಂತರವೂ ಸ್ವ ಇಚ್ಚೆಯಿಂದಲೇ ನಡೆದಿದೆ ಎಂದು ಕೇರಳದ ಹಾದಿಯಾ ಹೇಳಿರುವುದಾಗಿ ರಾಷ್ಟ್ರೀಯ ತನಿಖಾ ಏಜೆನ್ಸಿ (NIA) ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದೆ ಎಂದು ಮೂಲಗಳು ವರದಿ ಮಾಡಿವೆ.
ತಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು, ಮುಸ್ಲಿಂ ಯುವಕನನ್ನು ಮದುವೆಯಾಗಲು ಯಾವುದೇ ಒತ್ತಡ ಎದುರಿಸಲಿಲ್ಲ. ತಾನು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಕ್ಕೆ ಯಾರೂ ಹಣ ನೀಡಿಲ್ಲವೆಂಬುವುದನ್ನು ಹಾದಿಯಾ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಹಾದಿಯಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ ಯಾವುದೇ ಆರ್ಥಿಕ ಲಾಭ ಗಳಿಸಲಿಲ್ಲವೆಂದೂ NIA ವರದಿಯಲ್ಲಿ ಉಲ್ಲೇಖಿಸಿದೆ.
ಹಾದಿಯಾರೊಂದಿಗೆ ನೇರ ಮಾತುಕತೆಯ ನಂತರವಷ್ಟೇ ತಾನು NIA ಮತ್ತು ಆಕೆಯ ತಂದೆಯ ಮಾತುಗಳನ್ನು ಪರಿಗಣಿಸಲು ಸಾಧ್ಯವೆಂದು ಸುಪ್ರೀಂ ಕೋರ್ಟ್ ಹೇಳಿದೆ.
ಸೋಮವಾರ ಹಾದಿಯಾ ಸುಪ್ರೀಂ ಕೋರ್ಟ್ ಗೆ ಹಾಜರಾಗಲಿದ್ದಾರೆ.
