ರಾಜ್ಯ ಸುದ್ದಿ

ಹಿಂದುತ್ವದ ಹೆಸರಿನಲ್ಲಿ ಹಿಂಸಾಚಾರ, ದಾಂಧಲೆ ನಡೆಸುತ್ತಿರುವ ನಕಲಿ ಹಿಂದುತ್ವವಾದಿ ಗುಂಪುಗಳನ್ನು ಹತ್ತಿಕ್ಕಬೇಕು: ಧರ್ಮ ಸಂಸತ್‌ ಕಾರ್ಯಕ್ರಮದಲ್ಲಿ ದೇಶಿಕೇಂದ್ರ ಸ್ವಾಮೀಜಿ 

ವರದಿಗಾರ: ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ನಡೆಸುವವರು, ಧರ್ಮ ರಕ್ಷಣೆ ನೆಪದಲ್ಲಿ ಅನೈತಿಕ ಪೊಲೀಸ್‌ಗಿರಿ ನಡೆಸುವವರು ಮತ್ತು ನಕಲಿ ಸನ್ಯಾಸಿಗಳಿಂದ ಹಿಂದೂ ಧರ್ಮಕ್ಕೆ ಕಳಂಕ ಅಂಟಿಕೊಳ್ಳುತ್ತಿದೆ. ಇದನ್ನು ಸಹಿಸಿಕೊಳ್ಳಲಾಗದು. ಹಿಂದುತ್ವದ ಹೆಸರಿನಲ್ಲಿ ಹಿಂಸಾಚಾರ, ದಾಂಧಲೆ ನಡೆಸುತ್ತಿರುವ ಕೆಲವು ನಕಲಿ ಹಿಂದುತ್ವವಾದಿ ಗುಂಪುಗಳಿಂದ ಹಿಂದೂ ಧರ್ಮಕ್ಕೆ ಕಳಂಕ ಅಂಟಿಕೊಳ್ಳುತ್ತಿದ್ದು, ಹಿಂದೂ ಧರ್ಮದ ಉಳಿವಿಗಾಗಿ ಇಂತಹ ಗುಂಪುಗಳನ್ನು ಹತ್ತಿಕ್ಕಬೇಕೆಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದ್ದಾರೆ.

ಅವರು ಉಡುಪಿಯ ಧರ್ಮ ಸಂಸತ್‌ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.

ಹಿಂದೂ ಧರ್ಮದ ಉನ್ನತ ಮೌಲ್ಯಗಳು ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯಿಂದಾಗಿ ಮಸುಕಾಗುತ್ತಿವೆ. ಹಿಂದೂ ಸಮುದಾಯದಲ್ಲಿನ ಎಲ್ಲರನ್ನೂ ಭ್ರಾತೃತ್ವ ಭಾವನೆಯಿಂದ ಕರೆದೊಯ್ಯುವ ಕೆಲಸವಾಗಬೇಕೆಂದು ಈ ಸಂದರ್ಭ ಸ್ವಾಮೀಜಿ ಕರೆ ನೀಡಿದರು.

ಹಿಂದೂ ಧರ್ಮದ ಹೆಸರಿನಲ್ಲಿ ಗುರಿ ಇಲ್ಲದ ಸಿದ್ಧಾಂತಗಳನ್ನು ಬಿತ್ತಲಾಗುತ್ತಿದೆ. ಭಾರತೀಯ ಮೌಲ್ಯಗಳ ಕುರಿತು ತಪ್ಪಾಗಿ ಬಿಂಬಿಸಿರುವ ಸಂದೇಶಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತಲಾಗುತ್ತಿದೆ. ಆ ಮೂಲಕ ಯುವ ಮನಸ್ಸುಗಳನ್ನು ಕೆಡಿಸಲಾಗುತ್ತಿದೆ. ಈ ಸಮಸ್ಯೆಯ ಪರಿಹಾರಕ್ಕೆ ಧರ್ಮ ಸಂಸತ್‌ ಮೂಲಕ ಪ್ರಯತ್ನ ಆರಂಭವಾಗಬೇಕಿದೆ ಎಂದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group