ರಾಷ್ಟ್ರೀಯ ಸುದ್ದಿ

ಮಾಧ್ಯಮಗಳು ಏನು ಪ್ರಸಾರಿಸಬೇಕೆಂದು ಮೋದಿಯವರ ಆಡಳಿತ ತೀರ್ಮಾನಿಸುತ್ತಿದೆ : ಮಮತಾ ಬ್ಯಾನರ್ಜಿ

 ವರದಿಗಾರ :   ಮೋದಿಯವರ ಆಡಳಿತದಲ್ಲಿ ಮಾಧ್ಯಮಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತಿಲ್ಲ. ಮಾಧ್ಯಮಗಳೇನು ಪ್ರಸಾರ ಮಾಡಬೇಕು ಮತ್ತು ಪ್ರಕಟಿಸಬೇಕೆಂದು ಮೋದಿಯವರ ಆಡಳಿತ ವರ್ಗ ತೀರ್ಮಾನಿಸುತ್ತಾರೆಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಂದು ‘ಇಂಡಿಯಾ ಟುಡೇ’ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ನಾನು ಯಾಕೆ ಅಷ್ಟೊಂದು ಮೋದಿಯವರನ್ನು ಟೀಕಿಸುತ್ತೇನೆಂದು ಅರಿಯಲು ಹಲವಾರು ಬಿಜೆಪಿಯ ಮಂತ್ರಿಗಳು  ವೈಯುಕ್ತಿಕವಾಗಿ ಬೆನ್ನ ಹಿಂದೆ ಬಿದ್ದಿದ್ದರು ಎಂದವರು ಸಂದರ್ಶನದಲ್ಲಿ ತಿಳಿಸಿದ್ದಾರೆ. ಸದ್ಯಕ್ಕೆ ದೇಶದಲ್ಲಿ ಸಹಕಾರಿ ಫೆಡರಲ್ ವ್ಯವಸ್ಥೆಯೆಂಬುವುದಿಲ್ಲ. ದೇಶವೀಗ ‘ಅತಿ ಭಯಂಕರ ತುರ್ತು ಪರಿಸ್ಥಿತಿ’ ಯಲ್ಲಿದೆ ಎಂದವರು ತಿಳಿಸಿದ್ದಾರೆ.

ಮಾಧ್ಯಮಗಳು ಏನು ಪ್ರಸಾರಿಸಬೇಕು ಮತ್ತು ಪ್ರಕಟಿಸಬೇಕೆಂದು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳದಂತಹಾ ಪರಿಸ್ಥಿತಿಯಿದೆ. ಆಡಳಿತ ವರ್ಗವೇ ಅವರಿಗೆ ನಿರ್ದಿಷ್ಟವಾದಂತಹವುಗಳನ್ನು ಮಾತ್ರವೇ ಪ್ರಸಾರಿಸುವಂತೆ ನಿರ್ದೇಶನ ನೀಡುತ್ತಿದೆ. ಅದನ್ನು ಮಾತ್ರ ಅನುಸರಿಸಬೇಕಾದಂತಹಾ ಪರಿಸ್ಥಿತಿಯಲ್ಲಿ ಮಾಧ್ಯಮಗಳಿವೆ. ಇದು ಬಹಳ ಅಪಾಯಕಾರಿ ಕೂಡಾ ಹೌದು. ಹಿಂದೆಂದೂ ಇಂತಹಾ ‘ಅಹಂಕಾರದ ಮನೋಭಾವ’ವನ್ನು ನಾನು ನೋಡಿಲ್ಲವೆಂದು ಅವರು ತನ್ನ ಸಂದರ್ಶನದಲ್ಲಿ ತಿಳಿಸಿದ್ದಾರೆ

 

 

 

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಾಧ್ಯಮಗಳು ಏನು ಪ್ರಸಾರಿಸಬೇಕೆಂದು ಮೋದಿಯವರ ಆಡಳಿತ ತೀರ್ಮಾನಿಸುತ್ತಿದೆ : ಮಮತಾ ಬ್ಯಾನರ್ಜಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group