-ಅನ್ಸಾರ್ ಕಾಟಿಪಳ್ಳ
ಗಾಂಧೀಜಿಯ ಧ್ಯೇಯ ಚಿತ್ತ
ದೇಶದಲ್ಲಿಲ್ಲ,
ಭಾವ ಚಿತ್ರ ನೋಟಿನಲ್ಲಿದೆ!!!
ಜಾತೀಯತೆಯ ಧ್ಯೇಯ ಚಿತ್ತ
ಸಂವಿಧಾನದಲ್ಲಿಲ್ಲ,
ಕೋಮು ಸೂತ್ರ ದೇಶದಲ್ಲಿದೆ!!!
ದೇಶದ್ರೋಹಿಗಳ ಅಟ್ಟಹಾಸಕೆ
ಕಾನೂನುಗಳಿಲ್ಲ,?!
ಕಾವು ಏರೋಕೆ
ಕಾರಣವೇ ಬೇಕಿಲ್ಲ,
ನೋವು ತೋಡೋಕೂ ನೇತೃತ್ವವಿಲ್ಲ!
ತನ್ನ ಜಾತಿಗೂ ಬಣ್ಣವಿಲ್ಲವೆಂದಲ್ಲ ಗೆಳೆಯಾ
ಮಾನವೀಯತೆ ನಿಗೂಢ!
ದಿನ ದುಡಿವ ಕೈಗಳನೇ
ಮಟ್ಟ ಹಾಕೋದೂ,
ಸುಟ್ಟು ಕೊಂದು ಹಾಕೋದೂ,
ಕಟ್ಟಿ ಹಿಂಸೆ ನೀಡೋದೂ,
ತುಟ್ಟಿ ಬೆಲೆಯ ಕಾಡೋದೂ,
ಗೋಗರೆದು ಅತ್ತು ಸತ್ತವರಾರು?
ಗಟ್ಟಿ ಗಾರುಡಿಗರೆಲ್ಲ ಭಕ್ತರೊಳಗಿರುವಾಗ
ಮೆಟ್ಟಿ ನಿಲ್ಲವವರಾರು ಗೆಳೆಯಾ?
ನೀತಿ ಹಕ್ಕು ಮಾಯ
ಹಸಿವು ಭಯಗಳದು ಭೀಕರ
ಜಾತಿ ದ್ವೇಷ, ಮದ,ಮತ್ಸರವ
ತಡೆಯುವಲಿ ಆಳುವವರಿಗೆ ಆತುರವಿಲ್ಲ!
ತಪ್ಪು ಸರಿಯಾಗುತಿದೆ,
ಸರಿಯು ತಪ್ಪಾಗುತಿದೆ,
ನೀತಿ ನಾರುತಿದೆ,
ನ್ಯಾಯ ಕಾಯುತಿದೆ ಗೆಳೆಯಾ!
ಗೆಳೆಯಾ…ನನಗೂ ನಿನಗೂ
ಮನ ಗಟ್ಟಿಯಾಗಿಸಲೇನು ದಾಡಿ!
ಹಾಕಿದವರಾರಿಲ್ಲ ನಮಗೆ ಬೇಡಿ!
ನೆಲ ಸಿಹಿಯ ಸಸಿ ನೆಟ್ಟು
ಮರವಾಗುವ ಕನಸು ನನಸಾಗಲಾರದೇನು?
ಬಳಿ ಕೆಟ್ಟ ತಳ ಬುಡಕೆ ನೀರೆರೆಯದಿರೆ
ಕಹಿ ದ್ರೋಹ ಬಾಡಲಾರದೇನು?!!!
