ವರದಿಗಾರ: ಕಣ್ಣೂರು ತಲಶ್ಶೇರಿಯ ಪಾನೂರು ಬಸ್ಸು ನಿಲ್ದಾಣದ್ಲಿ 2002ರ ಫೆಬ್ರವರಿ 15 ರಂದು ಸಿ.ಪಿ.ಐ(ಎಂ) ಕಾರ್ಯಕರ್ತ ಎನ್ನಲಾದ ತಝಯಿಲ್ ಅಶ್ರಫ್ ರನ್ನು ಸಂಘಪರಿವಾರಕ್ಕೆ ಸೇರಿದ ಕಾರ್ಯಕರ್ತರು ಇರಿದು ಕೊಲೆ ಮಾಡಿರುವ ಪ್ರಕರಣದ ತೀರ್ಪು ನೀಡಿರುವ ತಲಶ್ಶೇರಿ ಸೆಷನ್ಸ್ ನ್ಯಾಯಾಲಯ ಆರು ಮಂದಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಸಂಘಪರಿವಾರಕ್ಕೆ ಸೇರಿದ ಕಾರ್ಯಕರ್ತರಾದ ಕುಟ್ಯಾರಿ ಜಿತ್ತು, ರಾಜೀವನ್ , ಪಾರ ಪುರುಷ, ಇರುಂಬನ್ ಅನೀಶನ್ , ರತೀಶ್ ಕುರಿಚ್ಚಿಕ್ಕರ , ರಾಜು ಯಾನೆ ರಾಜೇಶ್ ಎಂಬ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 75,000ರೂ. ದಂಡ ವಿಧಿಸಿದೆ.
