ರಾಷ್ಟ್ರೀಯ ಸುದ್ದಿ

ದಲಿತ ಶಕ್ತಿ ಕೇಂದ್ರದಿಂದ ಸ್ವೀಕರಿಸಿದ ತ್ರಿವರ್ಣ ಧ್ವಜವನ್ನು ಪಡೆಯಲು ನಿರಾಕರಿಸಿದ ಗುಜರಾತ್ ಮುಖ್ಯಮಂತ್ರಿ !

ವರದಿಗಾರ : ನವಂಬರ್ 24 ರಂದು ಕಾಂಗ್ರೆಸಿನ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಗುಜರಾತಿನ ದಲಿತ ಶಕ್ತಿ ಕೇಂದ್ರಕ್ಕೆ (D S K ) ಭೇಟಿ ಕೊಡಲಿದ್ದು, ಭಾರತವನ್ನು ‘ಅಸ್ಪೃಶ್ಯತಾ ಮುಕ್ತ’ ದೇಶವನ್ನಾಗಿಸುವ ಯೋಜನೆಯ ಭಾಗವಾಗಿ ಶಕ್ತಿ ಕೇಂದ್ರದಿಂದ ಬೃಹತ್ ತ್ರಿವರ್ಣ ಧ್ವಜವನ್ನು ಪಡೆಯಲಿದ್ದಾರೆ. ಇದನ್ನು ಮೊದಲು  ರಾಜ್ಯದ ಮುಖ್ಯಮಂತ್ರಿ ವಿಜಯ್ ರೂಪಾನಿಯವರಿಗೆ ಹಸ್ತಾಂತರಿಸುವ ಕಾರ್ಯಕ್ರಮವಿತ್ತು. ಆದರೆ ಸ್ಥಳದ ಕೊರತೆಯ ಕಾರಣಗಳನ್ನಿತ್ತು ವಿಜಯ್ ರೂಪಾನಿಯವರು ತ್ರಿವರ್ಣ ಧ್ವಜವನ್ನು ಪಡೆಯಲು ನಿರಾಕರಿಸಿದ್ದರು.

ಭಾರತದ ಅತಿ ದೊಡ್ಡದೆಂದೇ ಹೇಳಲಾದ 125 ಅಡಿ ಉದ್ದ ಮತ್ತು 83.3 ಅಡಿ ಅಗಲದ ತ್ರಿವರ್ಣ ಧ್ವಜವನ್ನು ಮುಖ್ಯಮಂತ್ರಿ ರೂಪಾನಿಯವರಿಗೆ ಹಸ್ತಾಂತರಿಸಿ, ಆ ಮೂಲಕ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಅಸ್ಪೃಶ್ಯತಾ ಪದ್ಧತಿಯ ನಿರ್ಮೂಲನೆಗೆ ಬೇಕಾಗಿ ಬಾಬಾಸಾಹೇಬ್ ಡಾ. ಅಂಬೇಡ್ಕರ್ ರವರ ಆಶಯದಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಮನವಿ ಮಾಡಿಕೊಳ್ಳುವುದು ಇದರ ಉದ್ದೇಶವಾಗಿತ್ತೆನ್ನಲಾಗಿದೆ. ಆದರೆ ಮುಖ್ಯಮಂತ್ರಿಯವರ ಪರವಾಗಿ ಹೇಳಿಕೆ ನೀಡಿದ್ದ  ಗಾಂಧಿನಗರದ ಜಿಲ್ಲಾಡಳಿತ , ನಮ್ಮಲ್ಲಿ ತ್ರಿವರ್ಣ ಧ್ವಜವನ್ನಿಟ್ಟುಕೊಳ್ಳಲು ಸೂಕ್ತ ಸ್ಥಳಾವಕಾಶದ ಕೊರತೆಯಿರುವುದರಿಂದ ಧ್ವಜವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲವೆಂದು ತಿಳಿಸಿದ್ದಾರೆಂದು ಶಕ್ತಿ ಕೇಂದ್ರ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ದಲಿತ ಶಕ್ತಿ ಕೇಂದ್ರದ ಪತ್ರಿಕಾ ಪ್ರಕಟಣೆಯಲ್ಲಿ ಅದು ಕಾರ್ಯಕ್ರಮದ ಕುರಿತು ಉಲ್ಲೇಖಿಸಿದ್ದು, ರಾಹುಲ್ ಗಾಂಧಿಯವರು ಸಂಪೂರ್ಣ ಗೌರವ ಮತ್ತು ಘನತೆಯೊಂದಿಗೆ ನಮ್ಮಿಂದ ತ್ರಿವರ್ಣ ಧ್ವಜವನ್ನು ಪಡೆಯಲಿದ್ದಾರೆ. ಆ ಮೂಲಕ ಅವರು ‘ಅಸ್ಪೃಶ್ಯತಾ ಮುಕ್ತ ಭಾರತ’ ದ ಪ್ರತಿಜ್ಞೆ ಕೈಗೊಳ್ಳಲಿದ್ದಾರೆ. ಭಾರತದ ಗೌರವಕ್ಕೆ ಅವಮಾನವಾಗುವ ರೀತಿಯಲ್ಲಿ ದೇಶದ್ರೋಹಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ದುಷ್ಟ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದ ರಾಹುಲ್ ಗಾಂಧಿಯ ನಡೆ ಐತಿಹಾಸಿಕವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group