ರಾಷ್ಟ್ರೀಯ ಸುದ್ದಿ

ಇತರ ಪಕ್ಷಗಳಿಗೆ ಹಾಕಿದ್ದ ಮತಗಳೂ ಬಿಜೆಪಿಗೆ: ಮತಯಂತ್ರದಲ್ಲಿ ಕಣ್ಣಮುಚ್ಚಾಲೆ ಆಟ ಬೆಳಕಿಗೆ

ವರದಿಗಾರ: ಮತದಾರರು ಮತಯಂತ್ರದಲ್ಲಿದ್ದ ಇತರ ಪಕ್ಷದ ಚಿಹ್ನೆಗಳಿಗೆ ಮತ ಹಾಕಿದರೂ ಬಿಜೆಪಿಗೆ ಮತ ಬೀಳುತ್ತಿದ್ದ ಘಟನೆಯು ಉತ್ತರ ಪ್ರದೇಶದ ಮೀರತ್ ನಿಂದ ವರದಿಯಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿರುವ ಎಂಟು ತಿಂಗಳ ಬಳಿಕ ಸ್ಥಳಿಯಾಡಳಿತ ಚುನಾವಣೆ ಬುಧವಾರ ಆರಂಭವಾಗಿದೆ.

ಮತದಾರನೊಬ್ಬ ತಾನು ಬೆಂಬಲಿಸಿದ್ದ ಅಭ್ಯರ್ಥಿಗೆ ಮತ ಹಾಕುವ ಸಂದರ್ಭ ಅದು ಬಿಜೆಪಿಗೆ ಹಾಕಲಾಗಿದೆ ಎಂದು ತೋರಿಸುತ್ತಿತ್ತು. ತಾನು ಬೆಂಬಲಿಸಿದ್ದ ಅಭ್ಯರ್ಥಿಗೆ ಮತ ಹಾಕಲು ಸಾಧ್ಯವಾಗದೆ, ಮತ್ತೆ ಮತ್ತೆ ಪ್ರಯತ್ನಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಬಿಎಸ್ಪಿ ಬೆಂಬಲಿಗರು ಮತಗಟ್ಟೆಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಬಿಎಸ್ಪಿ ಅಭ್ಯರ್ಥಿಗೆ ಮತವನ್ನು ಹಾಕಿದ್ದೆ. ಆದರೆ ನಾನು ಹಾಕಿದ ಮತ ಬಿಜೆಪಿಗೆ ಹೋಗುತ್ತಿತ್ತು. ಇಲ್ಲಿ ನಾನು ಸುಮಾರು 1 ಗಂಟೆಯಿಂದ ಕಾಯುತ್ತಿದ್ದೇನೆ. ಆದರೂ ನನಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ ಎಂದು ವಿಡಿಯೋದಲ್ಲಿ ಅಹ್ಮದ್ ಎಂಬವರು ಹೇಳುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಸ್ಪಿ ಮಾಜಿ ಶಾಸಕ ಯೋಗೇಶ್ ಶರ್ಮಾ, ಅಲ್ಪಸಂಖ್ಯಾತ ಸಮುದಾಯದ ಜನತೆ ಹೆಚ್ಚಿರುವ ಸ್ಥಳದಲ್ಲೇ ಈ ಸಮಸ್ಯೆಯಾಗಿದೆ. ಇಲ್ಲಿ ನಮಗೆ ವ್ಯಾಪಕವಾದ ಬೆಂಬಲವಿದೆ. ಅಧಿಕಾರಿಗಳು ಮತಯಂತ್ರವನ್ನು ಬದಲಾಯಿಸಿದ್ದಾರೆ. ಆದರೆ ಎಲ್ಲಾ ಮತಗಳು ಬಿಜೆಪಿಗೆ ಹೋಗಿದೆ ಎನ್ನುವುದನ್ನು ತಿಳಿದರೆ ಆಘಾತವಾಗುತ್ತದೆ ಎಂದು ಹೇಳಿದ್ದಾರೆ.

ಮತಯಂತ್ರಗಳು ಸರಿ ಇರಲಿಲ್ಲ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದು, ಮತಯಂತ್ರವನ್ನು ಬದಲಾಯಿಸಿದ್ದಾರೆ. ಇತರೆ ಪಕ್ಷಗಳು ಮತಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

ಸರಿಯಿಲ್ಲದ ಮತಯಂತ್ರದಲ್ಲಿ ಮತ ಹಾಕಿದಾಗ ಬಿಜೆಪಿಗೆ ಮಾತ್ರ ಹೋಗುತ್ತಿದ್ದದ್ದೇಕೆ? ಎಂಬುವುದೇ ಪ್ರಶ್ನಾರ್ಹ. ಮತಯಂತ್ರದಲ್ಲಿ ಕಣ್ಣಮುಚ್ಚಾಲೆ ಆಟ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group