ವರದಿ : ದಾವೂದ್ ಬಜಾಲ್ ಹಾಗೂ ಮುಝಮ್ಮಿಲ್
ವರದಿಗಾರ : ಅದೆಷ್ಟೋ ರೋಗಿಗಳು ರಕ್ತವಿಲ್ಲದೆ ಪರದಾಡುತ್ತಾ ತನ್ನ ಜೀವವನ್ನೇ ಕಳೆಯುತ್ತಿರುವಾಗ ನಮ್ಮ ದೇಹದಲ್ಲಿರುವ ರಕ್ತದಿಂದ ಅಲ್ಪ ಪ್ರಮಾಣದ ರಕ್ತವನ್ನು ದಾನದ ರೂಪದಲ್ಲಿ ಆ ರೋಗಿಗೆ ನೀಡಿ ಅದರಿಂದ ಆ ರೋಗಿಯ ಜೀವ ಉಳಿಯುವುದಾದರೆ ನಮಗಿಂತ ಪುಣ್ಯವಂತರು ಬೇರೆ ಯಾರೂ ಇರಲಾರರು.
ಕೊಲ್ಲರಕೋಡಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘ ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಬ್ಲಡ್ ಡೋನರ್ಸ್ ಮಂಗಳೂರು ಇದರ ವತಿಯಿಂದ ಯೇನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಇವರ ಸಹಯೋಗದೊಂದಿಗೆ ಬ್ರಹತ್ ರಕ್ತದಾನ ಶಿಬಿರ ನಡೆಯಲಿದೆ. ದಿನಾಂಕ 3-12-2017 ನೇ ರವಿವಾರ ಬೆಳಿಗ್ಗೆ 9 ಗಂಟೆಯಿಂದ ಮದ್ಯಾಹ್ನ 12 ಗಂಟೆಯ ವರೆಗೆ ಕೊಲ್ಲರಕೋಡಿ ಸರಕಾರಿ ಶಾಲಾ ವಠಾರದಲ್ಲಿ ನಡೆಯುವ ಈ ಒಂದು ರಕ್ತದಾನ ಶಿಬಿರಕ್ಕೆ ಸಾರ್ವಜನಿಕರಿಗೆಲ್ಲರಿಗೂ ಆದರದ ಸ್ವಾಗತ ಬಯಸುತ್ತಾ ಈ ಶಿಬಿರದಲ್ಲಿ ಸಾರ್ವಜನಿಕರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನ ಮಾಡಿ ಯಶಸ್ವಿಗೊಳಿಸಬೇಕೆಂದು ಬ್ಲಡ್ ಡೋನರ್ಸ್ ಅಡ್ಮಿನ್ ಬಳಗ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದೆ.
