ರಾಷ್ಟ್ರೀಯ ಸುದ್ದಿ

ಮೋದಿಯವರ ಹುಟ್ಟೂರಲ್ಲೇ ಬಯಲಾಯ್ತು ಸ್ವಚ್ಚ ಭಾರತದ ಅಸಲಿ ಮುಖ ! ಬಿಬಿಸಿ ವರದಿ

ವರದಿಗಾರ: ದೇಶದಾದ್ಯಂತ ‘ಸ್ವಚ್ಚ ಭಾರತ’ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕೊಡುತ್ತಿರುವ ಪ್ರಾಶಸ್ತ್ಯ ಬಹುಶಃ ಇನ್ಯಾವುದೇ ಯೋಜನೆಗೂ ಅವರು ಕೊಟ್ಟಿರಲಿಕ್ಕಿಲ್ಲ. 2014 ರ ಅಕ್ಟೋಬರ್ 2 ರ ಗಾಂಧಿ ಜಯಂತಿಯ ದಿನ ಈ ಯೋಜನೆಯನ್ನು ಮೋದಿಯವರು ಘೋಷಿಸಿ,  ಇಡೀ ದೇಶದಾದ್ಯಂತ ಅದರ ಪ್ರಚಾರಕ್ಕೆ ಬೇಕಾಗಿ ಕೋಟ್ಯಾಂತರ ರೂಪಾಯಿಗಳ ಖರ್ಚನ್ನೂ ಮಾಡಿದ್ದಾರೆ.

ಈ ಅಭಿಯಾನದ ಕುರಿತು ಬಿಬಿಸಿ ಚಾನೆಲ್ ಸಮೀಕ್ಷೆ ನಡೆಸುತ್ತಿದ್ದು, ಆದರೆ ಪ್ರಧಾನಿ ನರೇಂದ್ರ ಮೋದಿಯವರ ಹೂಟ್ಟೂರಾದಂತಹ ವಡ್ ನಗರ್ ನಲ್ಲಿ ಸ್ವಚ್ಚ ಭಾರತ ಅಭಿಯಾನದ ಕರಾಳ ಮುಖದರ್ಶನವಾಗಿದೆಯೆಂದು ಬಿಬಿಸಿ ವರದಿ ಮಾಡಿದೆ. ಇದನ್ನು ಬಿಬಿಸಿ ತನ್ನ ಚಾನೆಲಿನಲ್ಲಿ ಹೇಳಿಕೊಂಡಿದ್ದು, ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ‘ಸ್ವಚ್ಚ ಭಾರತ್ ಅಭಿಯಾನ’ ಅವರ ಹುಟ್ಟೂರು ವಡ್ ನಗರ್’ಗೆ ಬಂದಾಗ ಅದರ ಅಸ್ತಿತ್ವ ಅಲ್ಲಾಡುವ ಅನುಭವವಾಯಿತೆಂದು ಬಿಬಿಸಿ ಹೇಳಿದೆ. ಈ ಕುರಿತು ಪ್ರಸಾರಿಸಿರುವ ವೀಡಿಯೋದಲ್ಲಿ ಗ್ರಾಮದ ಮಹಿಳೆಯರು ತಮ್ಮ ಪರಿಸ್ಥಿತಿಯನ್ನು ಬಿಬಿಸಿಯೊಂದಿಗೆ ಹಂಚಿಕೊಂಡಿದ್ದು, ನಮಗೆ ಇರಲೊಂದು ಸ್ವಂತ ಮನೆಯೇ ಇಲ್ಲ. ಹೀಗಿರುವಾಗ ಸ್ವಚ್ಚ ಭಾರತದ ಶೌಚಾಲಯವೆಲ್ಲಿಂದ ಬರಬೇಕೆಂದು ಅವರು ಬಿಬಿಸಿ ವರದಿಗಾರರಲ್ಲಿ ಪ್ರಶ್ನಿಸಿದ್ದಾರೆ. ನಾವಿರುವ ಬಾಡಿಗೆ ಮನೆಯಲ್ಲೂ ಶೌಚಾಲಯದ ವ್ಯವಸ್ಥೆ ಸರಿಯಾಗಿಲ್ಲವೆಂದು ಹೇಳಿಕೊಂಡಿದ್ದಾರೆ. ಗ್ರಾಮದ ಹೆಣ್ಣುಮಕ್ಕಳೂ ಸೇರಿದಂತೆ ಎಲ್ಲರೂ ತೆರೆದ ಬಯಲನ್ನೇ ಶೌಚಾಲಯವನ್ನಾಗಿಸಿಕೊಂಡಿದ್ದಾರೆಂದು ಅವರು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಾರೆ. ಕಳೆದ ಬಾರಿಯ ಚುನಾವಣಾ ಸಮಯದಲ್ಲಿ ನರೇಂದ್ರ ಮೋದಿಯವರು ಪ್ರತಿಯೊಬ್ಬರಿಗೂ ಮನೆಯ ಭರವಸೆ ನೀಡಿದ್ದರು. ಆದರೆ ಇದುವರೆಗೂ ಆ ಭರವಸೆಯನ್ನು ಈಡೇರಿಸಿಲ್ಲವೆಂದು ಗ್ರಾಮದ ಮಹಿಳೆಯರು ಆರೋಪಿಸುತ್ತಾರೆ. ಈಗ ರಾಜ್ಯದಲ್ಲಿ ಮತ್ತೊಂದು ಚುನಾವಣೆ ಬಂದಿದೆ. ಅದಕ್ಕಾಗಿ ಅವರಿಗೆ ತನ್ನ ತವರೂರು ನೆನಪಾಗಿದೆಯಷ್ಟೇ ಎಂದು ಮಹಿಳೆಯರು ದೂರುತ್ತಾರೆ.

ಬಿಬಿಸಿಯ ವರದಿಗಾರ್ತಿ ಗ್ರಾಮದ ಬಾಲಕಿಯರನ್ನು ಕರೆದುಕೊಂಡು ಅವರ ಪ್ರತಿದಿನ ಬೆಳಗ್ಗೆಯ ಶೌಚಾಲಯವನ್ನು ತೋರಿಸುವಂತೆ ಹೇಳಿದಾಗ ಅವರೆಲ್ಲರೂ ಒಂದು ಬಯಲು ಮೈದಾನವನ್ನು ತೋರಿಸುತ್ತಾರೆ. ಅಲ್ಲಿದ್ದ ಹಿರಿಯ ಮಹಿಳೆಯೊಬ್ಬರೊಂದಿಗೆ,”ತಮಗೆ ಸ್ವಂತ ಶೌಚಾಲಯವಿಲ್ಲವೇ” ಎಂದು ಕೇಳಿದಾಗ ಆ ಹಿರಿಯ ಮಹಿಳೆ ಇಲ್ಲವೆನ್ನುತ್ತಾರೆ. ಕೊನೆಯಲ್ಲಿ ಆ ಎಲ್ಲಾ ಬಾಲಕಿಯರೊಂದಿಗೆ ಬಿಬಿಸಿಯ ವರದಿಗಾರ್ತಿ ತಾವೆಲ್ಲರೂ ನರೇಂದ್ರ ಮೋದಿಯವರಿಗೆ ನೀಡುವ ಸಂದೇಶವೇನೆಂದು ಕೇಳಿದಾಗ, ನಮಗೆ ಶೌಚಾಲಯ ಕಟ್ಟಿಸಿಕೊಡಿ ಎಂದು ಒಕ್ಕೊರಳಿನಿಂದ ಕೇಳಿಕೊಳ್ಳುತ್ತಾರೆ.

ಬಿಬಿಸಿಯ ವೀಡಿಯೋ ವೀಕ್ಷಿಸಿ

https://youtu.be/lhwuKXhpW7w

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮೋದಿಯವರ ಹುಟ್ಟೂರಲ್ಲೇ ಬಯಲಾಯ್ತು ಸ್ವಚ್ಚ ಭಾರತದ ಅಸಲಿ ಮುಖ ! ಬಿಬಿಸಿ ವರದಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group