ಸಾಮಾಜಿಕ ತಾಣ

“ಮೋದಿಯ ಮೇಲೆ ಶೂ ಎಸೆಯುವವರಿಗೆ ಒಂದು ಲಕ್ಷ ಬಹುಮಾನ !”

ವರದಿಗಾರ: ದೇಶದಲ್ಲಿ ತಲೆ, ಕೈ ಕಾಲು ಕಡಿಯುವ ಹೇಳಿಕೆಗಳು ಮೇಳೈಸುತ್ತಿರುವ ವೇಳೆಯಲ್ಲೇ ನಿನ್ನೆ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡೀ ದೇವಿಯವರು, ನರೇಂದ್ರ ಮೋದಿಯ ಕೈ ಕಡಿಯುವವರೂ ಬಿಹಾರದಲ್ಲಿದ್ದಾರೆಂಬ ಹೇಳಿಕೆ ಕೊಟ್ಟಿದ್ದರು. ಇದೀಗ ಈ ರೀತಿಯ ವಿವಾದಾತ್ಮಕ ಹೇಳಿಕೆಗಳ ಪಟ್ಟಿಗೆ “ವಾಯ್ಸ್ ಓಫ್ ರಾಮ್” ಖ್ಯಾತಿಯ ಭಾರತ – ಪಾಕ್ ಶಾಂತಿ ಪ್ರಕ್ರಿಯೆಯ ಕಾರ್ಯಕರ್ತ ಮತ್ತು ಖ್ಯಾತ ಬರಹಗಾರ ರಾಮ್ ಸುಬ್ರಹ್ಮಣ್ಯಂ ಅವರು ಸೇರಿಕೊಂಡಿದ್ದಾರೆ.

ಪದ್ಮಾವತಿ ಚಿತ್ರದ ನಟಿ ದೀಪಿಕಾ ಪಡುಕೋಣೆಯವರ ತಲೆಗೆ ಹತ್ತು ಕೋಟಿ ಬಹುಮಾನ ಕೊಡುವೆನೆಂದು ಘೋಷಿಸಿಕೊಂಡಿದ್ದ ಹರ್ಯಾಣದ ಬಿಜೆಪಿ ನಾಯಕ ಸೂರಜ್ ಪಾಲ್ ಅಮುರವರ ಹೇಳಿಕೆಗೆ ಮಾರ್ಮಿಕವಾಗಿ ತನ್ನ ಟ್ವಿಟ್ಟರ್ ಮತ್ತು ಫೇಸ್ಬುಕ್ ಖಾತೆಯಲ್ಲಿ ಪ್ರತಿಕ್ರಿಯಿಸಿದ ರಾಮ್, ನರೇಂದ್ರ ಮೋದಿಯ ಮೇಲೆ ಮೊದಲಾಗಿ ಶೂ ಅಥವಾ ಚಪ್ಪಲಿಯನ್ನು ಎಸೆಯುವ ವ್ಯಕ್ತಿಗೆ ನಾನು ಒಂದು ಲಕ್ಷ ಕೊಡುವೆನು. ನನ್ನ ಈ ಕೊಡುಗೆ ದೀಪಿಕಾ ಪಡುಕೋಣೆಯ ತಲೆಗೆ ಹತ್ತು ಕೋಟಿ ಘೋಷಿಸಿದ ಬಿಜೆಪಿಯ ಆ ನಾಯಕನನ್ನು ಪಕ್ಷದಿಂದ ಹೊರ ಹಾಕುವ ವರೆಗೆ ಮತ್ತು ಆತನನ್ನು ಜೈಲಿಗೆ ಕಳುಹಿಸುವ ವರೆಗೆ ಚಾಲ್ತಿಯಲ್ಲಿರುತ್ತದೆ. ಸುಪಾರಿ ಕೊಡುವುದೇ ಈ ದೇಶದ ಸಂಸ್ಕೃತಿಯಾದರೆ ನಾನು ಅದರಲ್ಲಿದ್ದೇನೆ ಎಂದವರು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ನನ್ನ ಕೊಡುಗೆಗೆ ಜಿ ಎಸ್ ಟಿ ಅನ್ವಯವಾಗಿತ್ತದೆಯೆಂದೂ ವ್ಯಂಗ್ಯವಾಡಿದ್ದಾರೆ.

 

ರಾಮ್ ಸುಬ್ರಹ್ಮಣ್ಯಂ ಅವರು ಕಾರ್ಗಿಲ್ ಯುದ್ಧದ ಹುತಾತ್ಮ ಯೋಧನ ಮಗಳು ಗುರ್ಮೇಹರ್ ಕೌರ್ ರವರ ವೀಡಿಯೋ ಚಿತ್ರೀಕರಿಸಿದ್ದರು. ಆ ವೀಡಿಯೋವನ್ನು ಎಬಿವಿಪಿಯವರು ದುರ್ಬಳಕೆ ಮಾಡಿದ್ದಾಗ ಇವರು ಸುದ್ದಿಯಲ್ಲಿದ್ದರು

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group