ರಾಷ್ಟ್ರೀಯ ಸುದ್ದಿ

ಸೈನಿಕ ಕಾರ್ಯಾಚರಣೆಯಲ್ಲಿ ಹತನಾಗಿದ್ದ ‘ಭಯೋತ್ಪಾದಕ’ ಟಿವಿಯ ಮುಂದೆ ಪ್ರತ್ಯಕ್ಷ !!

ವರದಿಗಾರ : ಕಾಶ್ಮೀರದ ಬಂಡೀಪೊರದಲ್ಲಿ ಭದ್ರತಾ ಪಡೆಗಳಿಂದ ಹತ್ಯೆಗೀಡಾದ ‘ಭಯೋತ್ಪಾದಕ’, ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯ ನಾಯಕ ಝಕೀಉಲ್ ರಹ್ಮಾನ್ ಲಕ್ವಿ ಯ ಸಂಬಂಧಿಕ ಎಂದು ಮಾಧ್ಯಮಗಳಿಂದ ಬಣ್ಣಿಸಲ್ಪಟ್ಟ ವ್ಯಕ್ತಿಯು ಇದೀಗ ಮಾಧ್ಯಮಗಳ ಮುಂದೆ ಬಂದು ಸಹಾಯ ಯಾಚಿಸುತ್ತಿದ್ದಾನೆ.

ಎರಡು ದಿನಗಳ ಹಿಂದೆ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳಿಂದ ಲಕ್ವಿ ಸಂಬಂಧಿಕ ಹಾಗೂ ಇತರ 5 ಉಗ್ರವಾದಿಗಳು ಹತ್ಯೆಗೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅದರಲ್ಲಿ ಭಯೋತ್ಪಾದಕ ಲಕ್ವಿಯ ಸಂಬಂಧಿಕ ಎಂದು ತೋರಿಸಲಾದ ಚಿತ್ರವು ಜಮ್ಮುವಿನ ಕಾಟಿಕಾನ್ ತಲಾಬ್ ಎಂಬ ಪ್ರದೇಶದಲ್ಲಿ ವಾಸಿಸುವ ಅಬ್ದುಲ್ ಮಜೀದ್ ಎಂಬವರದ್ದಾಗಿದೆ.

A2Z News ಚಾನೆಲಿಗೆ ಸಂದರ್ಶನ ನೀಡಿದ ಅಬ್ದುಲ್ ಮಜೀದ್ ತನ್ನ ಫೊಟೋ ಪ್ರಕಟಿಸಿದ್ದ ಹಲವು ದಿನಪತ್ರಿಕೆಗಳ ಪೈಕಿ ‘ಅಮರ್ ಉಜಾಲ‘ ಹಾಗೂ ‘ದೈನಿಕ್ ಜಾಗರಣ್‘ ಎಂಬ ಎರಡು ಪತ್ರಿಕೆಗಳನ್ನು ಸಂದರ್ಶನದಲ್ಲಿ ತೋರಿಸಿದರು.

ತಾನು ಯಾವುದೇ ಭಯೋತ್ಪಾದಕ ಸಂಘಟನೆಗೆ ಸೇರಿದವನಲ್ಲವೆಂದೂ, ಲಕ್ವಿಯ ಸಂಬಂಧಿಕನಲ್ಲವೆಂದೂ ವೀಡಿಯೋದಲ್ಲಿ ಮಜೀದ್ ಹೇಳುತ್ತಾರೆ. ತಾನು ತಬ್ಲೀಘ್ ಜಮಾಅತ್ ಎಂಬ ಧಾರ್ಮಿಕ ಸಂಘಟನೆಗೆ ಸೇರಿದವನೆಂದೂ, ಜಮ್ಮುವಿನಲ್ಲಿ ಚಿರಪರಿಚಿತನೆಂದೂ ಅವರು ಹೇಳುತ್ತಾರೆ. ತನ್ನ ಫೇಸ್ಬುಕ್ ಪ್ರೊಫೈಲ್ ನಿಂದ ತೆಗೆದ ಫೋಟೋ ಪತ್ರಿಕೆಗಳು ಉಪಯೋಗಿಸಿವೆ ಎಂದೂ ಅವರು ಆರೋಪಿಸಿದ್ದಾರೆ.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group