ಸುತ್ತ-ಮುತ್ತ

ಕೈಕಂಬ: ಮರ್ಕಝ್ ವಿಮೆನ್ಸ್ ಕಾಲೇಜು ಶಿಲಾನ್ಯಾಸ ಮತ್ತು ಝಹ್ರತುಲ್ ಖುರ್‌ಆನ್ ಉದ್ಘಾಟನೆ

ಕೈಕಂಬ,ನ.21: ಮರ್ಕಝ್ ದ‌ಅವತಿಲ್ ಇಸ್ಲಾಮಿಯ್ಯಃ ಸಂಸ್ಥೆಯ ಅಧೀನದಲ್ಲಿ ಮರ್ಕಝ್ ವಿಮೆನ್ಸ್ ಕಾಲೇಜು ಶಿಲಾನ್ಯಾಸ ಮತ್ತು ಝಹ್ರತುಲ್ ಖುರ್‌ಆನ್ ಪ್ರೀ ಇಸ್ಲಾಮಿಕ್ ಸ್ಕೂಲ್ ಉದ್ಘಾಟನೆಯು ಮಂಗಳವಾರ ಕೈಕಂಬ ಮರ್ಕಝ್ ನಗರದಲ್ಲಿ ನಡೆಯಿತು. ಕೇರಳ ಮುಸ್ಲಿಂ ಜಮಾಅತ್ ಅಧ್ಯಕ್ಷ, ಮಅದಿನ್ ಅಕಾಡಮಿ ಅಧ್ಯಕ್ಷ ಬದುರುಸ್ಸಾದಾತ್ ಸಯ್ಯಿದ್ ಇಬ್ರಾಹೀಂ ಖಲೀಲ್ ಅಲ್ ಬುಖಾರಿ ಕಡಲುಂಡಿ ತಂಙಳ್ ನೇತೃತ್ವ ವಹಿಸಿದ್ದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸುನ್ನೀ ಜಂಇಯತುಲ್ ಉಲಮಾ ರಾಜ್ಯಾಧ್ಯಕ್ಷ
ಖಾಝಿ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ವಹಿಸಿದ್ದರು. ಸಮಸ್ತ ಕೇರಳ ಜಂಇಯತುಲ್ ಉಲಮಾ ಕಾರ್ಯದರ್ಶಿ ಮುಹ್ಯಿಸ್ಸುನ್ನಃ ಪೊನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್ ಕಾರ್ಯಕ್ರಮ
ಉದ್ಘಾಟಿಸಿದರು. ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನಿ ಕಾಮಿಲ್ ಮುನ್ನುಡಿ
ಬಾಷಣ ಮಾಡಿದರು. ಈ ವೇಳೆ ಬದ್ರುಸ್ಸಾದಾತ್ ಇಬ್ರಾಹೀಂ ಖಲೀಲ್ ಅಲ್ ಬುಖಾರಿ ತಂಙಳರನ್ನು
ಸಂಸ್ಥೆಯ ವತಿಯಿಂದ ಮುಹ್ಯಿಸ್ಸುನ್ನ ಪೊನ್ಮಳ ಉಸ್ತಾದ್ ಮತ್ತು ಬೇಕಲ ಉಸ್ತಾದ್
ಸನ್ಮಾನಿಸಿದರು.


ವೇದಿಕೆಯಲ್ಲಿ ಸಯ್ಯಿದ್ ಫರೀದ್ ಅಹ್ಮದ್ ಅಲ್ ಖಾದಿರಿ ಕೈಕಂಬ, ನಿಝಾಮುದ್ದೀನ್ ಬಾಫಖಿ
ತಂಙಳ್, ಮಜ್ಲಿಸ್ ಗಾಣೆಮಾರ್ ಚೇರ್ಮನ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಅಲ್ ಕಾಮಿಲ್, ರಝಾಖ್ ಮದನಿ ಬಜ್ಪೆ, ಹಂಝ ಮದನಿ ಮಿತ್ತೂರು, ಯೂಸುಫ್ ಮದಮಿ ಕಂದಾವರ, ಅಲ್ ಅಸಾಸ್ ಚೇರ್‌ಮೆನ್ ಎಂಪಿಎಂ ಅಶ್ರಫ್ ಸ‌ಅದಿ ಮಲ್ಲೂರು, ಹಾಫಿಳ್ ಅಹ್ಮದ್ ಸಖಾಫಿ ಮಳಲಿ, ರಿಯಾಝ್ ಸ‌ಅದಿ ಗುರುಪುರ, ಇಸ್ಮಾಯಿಲ್ ಡಿಲಕ್ಸ್, ಇಸ್ಮಾಯಿಲ್ ಸ‌ಅದಿ, ಸುರಲ್ಪಾಡಿ ಮಳ್‌ಹರುಲ್ ಅವಾತಿಫ್ ಜುಮಾ ಮಸ್ಜಿದ್ ಅಧ್ಯಕ್ಷ ಅಬ್ದುಲ್ ಮಜೀದ್ ಹಾಜಿ, ನಾರ್ಲಪದವು ಸಬೀಲು ರಷಾದ್ ಜುಮಾ ಮಸ್ಜಿದ್ ಅಧ್ಯಕ್ಷ ನೌಷಾದ್ ಹಾಜಿ, ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ ಮೋನು, ಸ‌ಅಲಬ್ಬ ಹಾಜಿ, ಬಶೀರ್ ಹಾಜಿ ಮಿತ್ತಬೈಲು
ಮುಹಮ್ಮದ್ ಅನ್ಸಾಫ್ ದೇರಳಕಟ್ಟೆ, ಅಬ್ದುಲ್ ಅಝೀಝ್ ವೆನ್ಝ್, ಅಬ್ದುಲ್ ಅಝೀಝ್ ಮೆಗಾ
ಪ್ಲಾಝಾ, ಎಟಿಬಿ ಅಹ್ಮದ್ ಹಾಜಿ, ಅಡ್ವಕೇಟ್ ಮುಹಮ್ಮದ್ ಇಕ್ಬಾಲ್, ಹಾಜಿ ಹನೀಫ್ ಬಜ್ಪೆ,
ಅಬ್ದುಲ್ ಹಮೀದ್ ಬಜ್ಪೆ, ಹಾಜಿ ಸಲೀಲ್ ಬಜ್ಪೆ, ಬಶೀರ್ ಅಲ್ ರಫ ಬಜ್ಪೆ, ಮೂನ್‌ಲೈಟ್
ಅಬ್ದುಲ್ ರಹಿಮಾನ್ ಕಂದಾವರ, ಹುಸೈನ್ ಕೈಕಂಬ, ಹೈದರ್ ಕೈಕಂಬ, ರಿಯಾಝ್ ಮಿಲನ್ ಮುಂತಾದವರು ಉಪಸ್ಥಿತರಿದ್ದರು.

ಮರ್ಕಝ್ ಚೇರ್ಮನ್ ಬದ್ರುದ್ದೀನ್ ಅಝ್‌ಹರಿ ಅಲ್ ಕಾಮಿಲ್ ಸ್ವಾಗತಿಸಿ ಝೈನುದ್ದೀನ್ ಸ‌ಅದಿ ಬಜ್ಪೆ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ದ್ವಿದಿನ ಹುಬ್ಬುರಸೂಲ್ ಧಾರ್ಮಿಕ ಮತಪ್ರವಚನ ಕಾರ್ಯಕ್ರಮವು ಮೆಗಾ
ಪ್ಲಾಝಾ ಸಭಾಂಗಣದಲ್ಲಿ ನಡೆಯಿತು. ಜಬ್ಬಾರ್ ಸಖಾಫಿ ಪಾತೂರು ಮತ್ತು ರಫೀಖ್ ಸ‌ಅದಿ ದೇಲಂಪಾಡಿ ಹುಬ್ಬುರಸೂಲ್ ಭಾಷಣ ಮಾಡಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group