ಸುತ್ತ-ಮುತ್ತ

ಕೇರಳ ; ಎಸ್.ಡಿ.ಪಿ.ಐ ಜಾಥಾದ ಮೇಲೆ ಸಿಪಿಐ(ಎಂ) ದಾಳಿ : ಅಬ್ದುಲ್ ಹನ್ನಾನ್ ಖಂಡನೆ

ಬೆಂಗಳೂರು: ರಾಷ್ಟ್ರದಾದ್ಯಂತ ನಡೆಯುತ್ತಿರುವ ಕೋಮುವಾರು ವಿಭಜನೆ ರಾಜಕೀಯದ ವಿರುದ್ಧ ಕೇರಳದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ವತಿಯಿಂದ ಉಪಾಧ್ಯಕ್ಷ ತುಳಸೀದರನ್ ಪಳ್ಳಿಕ್ಕಲ್ ರವರ ನಾಯಕತ್ವದಲ್ಲಿ ಜಾಥಾ ಹಮ್ಮಿ ಕೊಂಡಿತ್ತು.

ಶುಕ್ರವಾರ ಕೊಲ್ಲಂ ಜಿಲ್ಲೆಯ ಬಾವರ ಪ್ರದೇಶದಲ್ಲಿ ಎಸ್.ಡಿ.ಪಿ.ಐ ರಾಲಿ ವಿರುದ್ಧ ಕೇರಳದ ಆಡಳಿತಾರೂಡ ಸಿ.ಪಿ.ಐ.ಎಂ ಪಕ್ಷದ ಗೂಂಡಾಗಳು ದಾಳಿ ನಡೆಸಿ, ಕಾರ್ಯಕರ್ತರಿಗೆ ದೈಹಿಕ ಹಲ್ಲೆ ನಡೆಸಿರುವ ಕಾರಣ ಗಾಯಾಳುಗಳಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪಕ್ಷದ ನಾಯಕರ ವಾಹನಗಳನ್ನು ಸಹ ಜಖಂಗೊಳಿಸಲಾಗಿದೆ. ಈ ಘಟನೆಯನ್ನು ವಿರೋಧಿಸಿ ನಡೆಸಿದ ಪ್ರತಿಭಟನಾಕಾರರ ವಿರುದ್ಧ ಪೋಲಿಸರು ಜಲ ಫಿರಂಗಿ ಬಳಸಿದ್ದಾರೆ. ಎಸ್.ಡಿ.ಪಿ.ಐ ಪಕ್ಷ ಶಾಂತ ರೀತಿಯಲ್ಲಿ ನಡೆಸಿದ ಕಾರ್ಯಕ್ರಮದ ವಿರುದ್ಧ ಸಿ.ಪಿ.ಐ.ಎಂ ದಾಳಿ ನಡೆಸಿರುವುದನ್ನು ಕರ್ನಾಟಕ ರಾಜ್ಯದ ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಹನ್ನಾನ್ ರವರು ಖಂಡಿಸಿದ್ದಾರೆ.

ರಾಜಕಿಯ ಅಧಿಕಾರ ದುರ್ಬಳಕೆ ಮಾಡಿ ಕೊಂಡು ಸಿ.ಪಿ.ಐ.ಎಂ ಗೂಂಡಾ ಪಡೆಗಳು ಬಿಜೆಪಿ, ಕಾಂಗ್ರೆಸ್, ಮುಸ್ಲಿಂಲೀಗ್ ಸಹಿತ ಹೆಚ್ಚಿನ ರಾಜಕಿಯ ಪಕ್ಷಗಳ ನಾಯಕರ ವಿರುದ್ಧ ನಿರಂತರವಾಗಿ ದೌರ್ಜನ್ಯ ಮಾಡುತ್ತಿದ್ದಾರೆ. ಕೇರಳದಲ್ಲಿ ಹಿಂಸಾ ರಾಜಕಿಯ ಶಾಶ್ವತವಾಗಿ ನಿಲ್ಲಬೇಕು. ರಾಜಕೀಯ ಭಿನ್ನಾಭಿಪ್ರಾಯಗಳಿಗೆ ಹಿಂಸಾ ರಾಜಕಿಯ ಪರಿಹಾರವಲ್ಲ ಎಂದು ಹನ್ನಾನ್ ರವರು ಅಭಿಪ್ರಾಯಿಸಿದ್ದಾರೆ. ಅಲ್ಲಿಯ ಸರಕಾರ ಪಕ್ಷ ಭೇದ ಮರೆತು ಈ ಕೂಡಲೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವ ಮೂಲಕ ಎಲ್ಲಾ ಹಲ್ಲೆಕೋರರನ್ನು ಬಂಧಿಸಬೇಕು ಎಂದು ಹನ್ನಾನ್ ರವರು ಒತ್ತಾಯಿಸಿದ್ದಾರೆ. ಕೇರಳದಲ್ಲಿ ನಡೆಯುತ್ತಿರುವ ಎಸ್.ಡಿ.ಪಿ.ಐ ಪಕ್ಷದ ಸಂವಿಧಾನ ಬದ್ಧ ಹೋರಾಟಕ್ಕೆ ಕರ್ನಾಟಕ ರಾಜ್ಯ ಸಮಿತಿ ನೈತಿಕ ಬೆಂಬಲ ಸೂಚಿಸಿದೆ. ಸಿ.ಪಿ.ಐ.ಎಂ ಪಕ್ಷದ ಅಕ್ರಮ ರಾಜಕೀಯಕ್ಕೆ ಹೆದರುವ, ಬಗ್ಗುವ ಪಕ್ಷವಲ್ಲ ಎಸ್.ಡಿ.ಪಿ.ಐ ಎಂಬ ಸಂದೇಶವನ್ನು ಹನ್ನಾನ್ ರವರು ನೀಡಿದ್ದಾರೆ. ದೇಶದಲ್ಲಿ ತಲೆ ಎತ್ತಿರುವ ಫ್ಯಾಸಿಸಂ ವಿರುದ್ಧ ಶಕ್ತ ಹೋರಾಟ ಮಾಡುವುದನ್ನು ಬಿಟ್ಟು ಎಸ್.ಡಿ.ಪಿ.ಐ ವಿರುದ್ಧ ಹಲ್ಲೆ ನಡೆಸುವುದು ಖಂಡನೀಯ. ದೇಶದ ಇತರೆ ರಾಜ್ಯಗಳಲ್ಲಿ ಎಸ್.ಡಿ.ಪಿ.ಐ ಪಕ್ಷದ ಹೋರಾಟದಲ್ಲಿ ಎಡಪಂಥೀಯ  ಪಕ್ಷಗಳ ನಾಯಕರು, ಕಾರ್ಯಕರ್ತರು ಕೈಜೋಡಿಸಿದ್ದಾರೆ. ಮುಂದೆಯೂ ಈ ಸಹಕಾರ ಮುಂದುವರಿಯಲಿ ಎಂದು ಅಬ್ದುಲ್ ಹನ್ನಾನ್ ರವರು ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group