ಸುತ್ತ-ಮುತ್ತ

ಭಟ್ಕಳದಲ್ಲಿ ಬ್ಲಡ್ ಹೆಲ್ಪ್ ಲೈನ್ ವತಿಯಿಂದ ನಡೆದ ಸಾರ್ವಜನಿಕ ರಕ್ತದಾನ ಶಿಬಿರ

ವರದಿಗಾರ-ಭಟ್ಕಳ: ಶಾಹೀನ್ ಸ್ಪೋರ್ಟ್ ಸೆಂಟರ್ ಭಟ್ಕಳ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ ಹಾಗೂ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಸಹಯೋಗದಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವು ಇತ್ತೀಚೆಗೆ ಭಟ್ಕಳದ ಮಖ್ದೂಮ್ ಕಾಲನಿಯ ಫಾತಿಮ ಅಲಿ ಹಾಲ್ ನಲ್ಲಿ ನಡೆಯಿತು.

ರಕ್ತದಾನ ಶಿಬಿರವನ್ನು ಭಟ್ಕಳ ಮಖ್ದೂಮಿಯ ಜಾಮಿಯಾ ಮಸ್ಜಿದ್ ಖತೀಬರಾದ ಮೌಲಾನಾ ನಿಯಮತುಲ್ಲಾಹ್ ಅಸ್ಕರಿ ದುಆ ನರೆವೇರಿಸಿ, ಸ್ವತಃ ರಕ್ತದಾನ ಮಾಡುವುದರ ಮೂಲಕ ಶಿಬಿರಕ್ಕೆ ಚಾಲನೆಯನ್ನು ನೀಡಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು,”ಸೃಷ್ಟಿಕರ್ತನು ಮಾನವನ ದೇಹದಲ್ಲಿ ಅವಶ್ಯಕವಾಗಿರುವ ವಿವಿಧ ಅಗತ್ಯತೆಗಳನ್ನು ಇಟ್ಟಿರುತ್ತಾನೆ.ಅದರಲ್ಲಿ ರಕ್ತವು ಅಮೂಲ್ಯ ಅವಶ್ಯಕತೆಯಾಗಿದೆ. ರಕ್ತದಾನ ಮಾಡುವುದರಿಂದ ಹಲವಾರು ರೋಗಿಗಳು ಚೇತರಿಸಿಕೊಳ್ಳುತ್ತಾರೆ.ಏಕೆಂದರೆ ರಕ್ತವು ಆರೋಗ್ಯಕರವಾಗಿರಲು ಅತೀ ಅವಶ್ಯಕತೆಯಾಗಿದೆ. ಕೆಲವೊಮ್ಮೆ ಜನರು ರಕ್ತದ ಹುಡುಕಾಟದಲ್ಲಿ ಒತ್ತಡದಲ್ಲಿ ಸಿಲುಕಿರುತ್ತಾರೆ”. ರಕ್ತದಾನ ಶಿಬಿರಗಳ ಮೂಲಕ ಈ ಒಂದು ಕಾರ್ಯವನ್ನು ಸರಳ ಗೊಳಿಸುವುದಕ್ಕಾಗಿ ಆಯೋಜಕರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಶಾಹೀನ್ ಸ್ಪೋರ್ಟ್ಸ್ ಸೆಂಟರ್ ಅಧ್ಯಕ್ಷರಾದ ಮುಹಮ್ಮದ್ ಸಾದಿಕ್ ಮಟ್ಟ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಹಾಫಿಝ್ ಮುಹಮ್ಮದ್ ಮುಝಮ್ಮಿಲ್ ಹಲ್ಲರೆ,ಕಿರಾತ್ ಮೂಲಕ ಉದ್ಘಾಟಿಸಿದರು. ಸಂಸ್ಥೆಯ ಕಾರ್ಯದರ್ಶಿಯಾದ  ಮುಬಸ್ಸಿರ್ ಹಲ್ಲರೆ ಸ್ವಾಗತಿಸಿ,ಇಂಷಾದ್ ಮುಕ್ತೇಸರ್ ವಂದಿಸಿದರು.

ಕಾರ್ಯಕ್ರಮದಲ್ಲಿ ಇಕ್ಬಾಲ್ ಸಈದಿ(ಅಧ್ಯಕ್ಷರು,ಮಖ್ದೂಮ್ ಕಾಲೋನಿ ಜಮಾತುಲ್ ಮುಸ್ಲಿಮೀನ್), ಮೌಲಾನಾ ಶುಜಾಉದ್ದೀನ್ ನದ್ವಿ(ಪ್ರಧಾನ ಕಾರ್ಯದರ್ಶಿ, ಮಖ್ದೂಮ್ ಕಾಲೋನಿ ಜಮಾತುಲ್ ಮುಸ್ಲಿಮೀನ್),ಮುಹಮ್ಮದ್ ಉಸ್ಮಾನ್ ಹಲ್ಲರೆ,ಜನಾಬ್ ಸಮೀಉಲ್ಲಾಹ್,ಜನಾಬ್ ಇಂತಿಯಾಝ್ ಉದ್ಯಾವರ್(ಅಧ್ಯಕ್ಷರು,ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್), ಅಬ್ದುಲ್ ವಾಜಿದ್ ಕೋಲ(ಕಾರ್ಯದರ್ಶಿ,ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್), ಮೊಹಿದೀನ್ ಅಲ್ತಾಫ್ ಖರೂರಿ(ಪ್ರಧಾನ ಕಾರ್ಯದರ್ಶಿ,ಮಜ್ಲಿಸ್-ಎ-ಇಸ್ಲಾಹ್ ವ ತಂಝೀಮ್),ಅಸ್ರಾರ್ ಜಂಷೇರ್,ಜನಾಬ್ ಮುಖ್ತಾರ್ ಮುಕ್ತೇಸರ್, ನಿಸಾರ್ ಖಾನ್,ಜನಾಬ್ ಹಸನ್ ಶಬೀರ್, ನಝೀರ್ ಖಾಸಿಂಜೀ,ಜನಾಬ್ ನಿಸಾರ್ ರುಕ್ನದ್ದೀನ್, ಅಶ್ರಫ್ ಸದ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಅಡ್ಮಿನ್ ಗಳಾದ ಫಯಾಝ್ ಬೈಂದೂರು,ನಾಚಿ ಆರ್.ಬಿ, ನಝೀರ್ ಪಿ.ಸಿ ಅಡ್ಡೂರು, ಸತ್ತಾರ್ ಕೃಷ್ಣಾಪುರ ಇನ್ನಿತರರು ಉಪಸ್ಥಿತಿಯಿದ್ದರು.

ಶಿಬಿರದಲ್ಲಿ 172 ಜನರು ರಕ್ತದಾನ ಮಾಡಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಡಾಕ್ಟರ್ ಎಡ್ವರ್ಡ್ ಇವರ ನೇತೃತ್ವದಲ್ಲಿ ಹದಿಮೂರು ಬ್ಲಡ್ ಬ್ಯಾಂಕ್ ಅಧಿಕಾರಿಗಳ ತಂಡ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.
ರಕ್ತ ದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಹಾಗೂ ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ದುಡಿದ ಎಲ್ಲಾ ಕಾರ್ಯಕರ್ತರಿಗೂ, ಸಂಘಟಕರು ಕೃತಜ್ಞತೆಗಳನ್ನು ತಿಳಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group