ವರದಿಗಾರ : ಹರ್ಯಾಣದ ಬಿಜೆಪಿ ಮುಖಂಡನೋರ್ವ ಬಾಲಿವುಡ್ ನಟಿ ಮತ್ತು ವಿವಾದಿತ ‘ಪದ್ಮಾವತಿ’ ಚಲನಸಿತ್ರದ ಮುಖ್ಯ ಪಾತ್ರಧಾರಿಣಿಯಾಗಿರುವ ದೀಪಿಕಾ ಪಡುಕೋಣೆಯ ತಲೆ ತಂದವರಿಗೆ ಹತ್ತು ಕೋಟಿ ಕೊಡುವುದಾಗಿ ಘೋಷಿಸಿರುವುದನ್ನು ಖಂಡಿಸಿದ ಇಂಧನ ಸಚಿವ ಡಿ ಕೆ ಶಿವಕುಮಾರ್, ಇದು ಬಿಜೆಪಿಗರು ಮಹಿಳೆಯರಿಗೆ ಕೊಡುವ ಗೌರವ ಎಂತಹದ್ದು ಎನ್ನುವುದನ್ನು ಪ್ರತಿನಿಧಿಸುತ್ತದೆ ಎಂದಿದ್ದಾರೆ.
ದೀಪಿಕಾ ಪಡುಕೋಣೆ ನಮ್ಮ ರಾಜ್ಯದವರು ಮಾತ್ರವಲ್ಲ ದೇಶದ ಓರ್ವ ಗೌರವಯುತ ಕಲಾವಿದೆಯಾಗಿದ್ದಾರೆ ಎಂದು ಡಿಕೆಶಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಬಿಜೆಪಿಗರು ಓರ್ವ ಕಲಾವಿದೆಯ ಮೇಲೆ ಈ ರೀತಿಯ ದಾಳಿ ನಡೆಸುವುದನ್ನು ನಾನು ಖಂಡಿಸುತ್ತೇನೆ. ಇದು ನಿಮ್ಮ ಸಂಸ್ಕೃತಿಯೇ? ಓರ್ವ ಮಹಿಳೆಯನ್ನು ಗೌರವಿಸುವ ರೀತಿ ಇದೇ? ಎಂದವರು ಖಾರವಾಗಿ ಪ್ರಶ್ನಿಸಿದ್ದಾರೆ. ಇಂತಹವರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
It is condemnable that a BJP office bearer is placing a bounty of Rs. 10 crore on @deepikapadukone, who is from our state & the daughter of one of India’s most respected sportsman.
Is this BJP’s culture & the way they show respect towards women? Immediate action should be taken.
— DK Shivakumar (@withDKS) November 20, 2017
