ರಾಷ್ಟ್ರೀಯ ಸುದ್ದಿ

ಜನರನ್ನು ವಿಭಜಿಸದಂತೆ ಪ್ರಧಾನಿ ಸಂಘಪರಿವಾರದವರಲ್ಲಿ ಮನವಿ ಮಾಡಲಿ: ಗುಲಾಂ ನಬಿ

ವರದಿಗಾರ-ನವದೆಹಲಿ: ಪ್ರಧಾನಿ ಯಾವಾಗಲೂ ದೇಶದ ಏಕತೆಯ ಕುರಿತು ಮಾತನಾಡುತ್ತಾರೆ. ಆದರೆ, ಭಾರತ ಈಗಾಗಲೇ ಒಗ್ಗಟ್ಟಾಗಿದೆ. ಜನರನ್ನು ವಿಭಜಿಸದಂತೆ ಪ್ರಧಾನಿಯವರು ಸಂಘಪರಿವಾರದವಲ್ಲಿ ಮನವಿ ಮಾಡಿಕೊಳ್ಳಲಿ ಎಂದು ಕಾಂಗ್ರೆಸ್ ಸಂಸದ ಗುಲಾಂ ನಬಿ ಆಜಾದ್ ಹೇಳಿದ್ದಾರೆ.  

ದೂರದರ್ಶನ ಮತ್ತು ಪತ್ರಿಕೆಗಳ ಮೇಲೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದ್ದಾರೆ ಎಂದು ಹೇಳಿದ ಗುಲಾಂ ನಬಿ, ಮಾಣಿಕ್ ಸರ್ಕಾರ್ ಅವರ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಸಾಧನೆಗಳನ್ನು ಒಳಗೊಂಡಿರಲಿಲ್ಲ. ಆದ್ದರಿಂದ ಅವರ ಭಾಷಣವನ್ನು ಪ್ರಸಾರ ಮಾಡಿಲ್ಲ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗೋರರಖ್​​ಪುರ ದುರಂತದಲ್ಲಿ ಎಪ್ಪತ್ತಕ್ಕೂ ಹೆಚ್ಚು ಮಕ್ಕಳು ಬಲಿಯಾಗಿವೆ. ಈ ಘಟನೆಯನ್ನು ಪ್ರಧಾನಿ ಸ್ವಾಭಾವಿಕ ವಿಕೋಪ ಎನ್ನುತ್ತಾರೆ. ಆದರೆ ಇದು ಮಾನವ ನಿರ್ಮಿತ ವಿಕೋಪ ಎಂದರು. ಅಲ್ಲದೇ, ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಅಡಿಯಲ್ಲಿ ತನಿಖೆ ನಡೆದಲ್ಲಿ ಉತ್ತರಪ್ರದೇಶದ ಸಿಎಂ ವಿರುದ್ಧ ಸತ್ಯ ಎಂದಿಗೂ ಹೊರಬರುವುದಿಲ್ಲ. ಒಂದು ವೇಳೆ ಸತ್ಯ ಹೊರಬರಬೇಕಾದಲ್ಲಿ ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಘಟನೆಯ ಕುರಿತು ತನಿಖೆ ನಡೆಸಲಿ ಎಂದು ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group