ರಾಷ್ಟ್ರೀಯ ಸುದ್ದಿ

ಮಧ್ಯಪ್ರದೇಶ : ಬಿಜೆಪಿ ಶಾಸಕಿಯ ಸದಸ್ಯತ್ವ ರದ್ದುಪಡಿಸಿದ ಹೈಕೋರ್ಟ್ !

ವರದಿಗಾರ : ನಾಮಪತ್ರದಲ್ಲಿ ಸರಿಯಾದ ದಾಖಲೆಗಳನ್ನು ಸಲ್ಲಿಸದಿದ್ದ ಕಾರಣಕ್ಕಾಗಿ ಮಧ್ಯಪ್ರದೇಶದ ಧಾರ್ ಕ್ಷೇತ್ರದ ಬಿಜೆಪಿ ಶಾಸಕಿ ನೀನಾ ವರ್ಮಾರವರ ಸದಸ್ಯತ್ವವನ್ನು ಹೈಕೋರ್ಟ್ ಇಂದು ರದ್ದುಪಡಿಸಿದೆ.

ವಕೀಲ ಸುರೇಶ್ ಚಂದ್ರ ಭಂಡಾರಿ ಎನ್ನುವವರು ನೀನಾ ವರ್ಮಾರ ಸದಸ್ಯತ್ವವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ, ವರ್ಮಾರವರು ಸಲ್ಲಿಸಿದ್ದ ನಾಮಪತ್ರಗಳು ಸೂಕ್ತ ದಾಖಲೆಗಳಿಲ್ಲದ ಕಾರಣಕ್ಕಾಗಿ ರದ್ದುಪಡಿಸಿರುವುದಾಗಿ ಘೋಷಿಸಿತು. 45 ದಿನಗಳ ಒಳಗಾಗಿ ನೀನಾರವರಿಗೆ ಈ ಕುರಿತು ತಮ್ಮ ವಾದವನ್ನು ಸುಪ್ರೀಂ ಕೋರ್ಟಿನಲ್ಲಿ ಮಂಡಿಸುವ ಕಾಲಾವಕಾಶವನ್ನೂ  ಹೈಕೋರ್ಟ್ ನೀಡಿತು.

ನೀನಾ ವರ್ಮಾರ ಸದಸ್ಯತ್ವ ರದ್ದಾಗುತ್ತಿರುವುದು ಇದು ಎರಡನೆಯ ಬಾರಿಯಾಗಿದೆ. 2012 ರಲ್ಲಿ ಕಾಂಗ್ರೆಸ್ಸಿನ ತಮ್ಮ ಪ್ರತಿಸ್ಪರ್ಧಿ ಬಾಲಮುಕುಂದ್ ಗೌತಂ ನೀಡಿದ್ದ ದೂರಿನ ಆಧಾರದ ಮೇಲೆ ಕೋರ್ಟ್ ಮೊದಲ ಬಾರಿ ವರ್ಮಾ ಸದಸ್ಯತ್ವವನ್ನು ರದ್ದುಪಡಿಸಿತ್ತು.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group