ಸುತ್ತ-ಮುತ್ತ

ಸೌದಿ ಅರೇಬಿಯ: ಗೃಹಬಂಧನದಲ್ಲಿ ವಾಮಂಜೂರಿನ ಗೃಹಿಣಿ ; ಕಂಗಾಲಾಗಿರುವ ಬಡಕುಟುಂಬ !

ಮಂಗಳೂರು: ಅನಾರೋಗ್ಯಪೀಡಿತ ಪತಿ ಮತ್ತು ಮಗನ ವಿದ್ಯಾಭ್ಯಾಸದ ಜವಾಬ್ಧಾರಿಯನ್ನು ಹೊರಲು ವಿದೇಶ ಉದ್ಯೋಗಕ್ಕೆ ತೆರಳಿದ ಮಹಿಳೆಯೊಬ್ಬರು ಸಂಕಷ್ಟಕ್ಕೀಡಾಗಿರುವ ಘಟನೆಯೊಂದು ಮಂಗಳೂರು ಸಮೀಪದ ವಾಮಂಜೂರಿನಿಂದ ವರದಿಯಾಗಿದೆ. ವಾಮಂಜೂರಿನ ಕೆಳರೈ ಕೋಡಿ ಎರಡನೇ ಬ್ಲಾಕಿನ ನಿವಾಸಿ ಬಾಲಪ್ಪ ಬಾಲಕೃಷ್ಣ (55) ಎಂಬವರ ಪತ್ನಿ ವಿಜಯಾ (43) ಎಂಬವರೇ ಸೌದಿಅರೇಬಿಯದಲ್ಲಿ ಸಂಕಷ್ಟಕ್ಕೀಡಾಗಿರುವ ಮಹಿಳೆ. ಹಲವು ತಿಂಗಳಿನಿಂದ ಸರಿಯಾಗಿ ಯಾವುದೇ ಫೋನು ಸಂಪರ್ಕಕ್ಕೆ ಸಿಗದೆ ಊರಿಗೆ ಮರಳಲು ಸಾಧ್ಯವಾಗದೆ ಸೌದಿಅರೇಬಿಯದ ದಮಾಮ್ ಎಂಬ ನಗರದಲ್ಲಿ ಗೃಹಬಂಧನದಲ್ಲಿರುವ ವಿಜಯಾರವರ ಬಿಡುಗಡೆಯ ನಿರೀಕ್ಷೆಯಲ್ಲಿ ವೃದ್ಧ ಪತಿ ಮತ್ತು ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿರುವ ಮಗ ಜಗಜೀವನ್ ದಿನದೂಡುತ್ತಿದ್ದಾರೆ. ತೀರಾ ಬಡಕುಟುಂಬಕ್ಕೆ ವಿಜಯಾ ಅವರೇ ಆಧಾರಸ್ತಂಭವಾಗಿದ್ದರು.ಬಡಕುಟುಂಬಕ್ಕೆ ವಿಜಯಾ ಅವರೇ ಆಧಾರಸ್ತಂಭವಾಗಿದ್ದರು.

2015ರ ಜುಲೈ 15ರಂದು ಬಜ್ಪೆಯ ಮಹಿಳೆಯೋರ್ವರ ಪರಿಚಯದ ಮೂಲಕ ಸೌದಿಅರೇಬಿಯಕ್ಕೆ ಮನೆಗೆಲಸದ ಉದ್ಯೋಗಕ್ಕೆಂದು ವಿಜಯಾ ತೆರಳಿದ್ದರು. ಕೆಲವು ತಿಂಗಳು ಮಾತ್ರ ಫೋನು ಸಂಪರ್ಕದಲ್ಲಿದ್ದ ವಿಜಯಾ ಅನಂತರದ ದಿನಗಳಲ್ಲಿ ಅಪರೂಪಕ್ಕೊಮ್ಮೆ ಮಾತ್ರ ಸಂಪರ್ಕಕ್ಕೆ ಸಿಗುತ್ತಿದ್ದರು. ಯಾವಾಗಲಾದರೊಮ್ಮೆ ಹಣ ಕಳುಹಿಸಿಕೊಡುತ್ತಿದ್ದರು. ಆದರೆ ಎರಡು ವರ್ಷಗಳ ಬಳಿಕ ಪತಿಗೆ ವಿಪರೀತ ಅನಾರೋಗ್ಯದ ಕಾರಣ ಊರಿಗೆ ಮರಳಲು ಬಯಸಿದ ವಿಜಯಾರಿಗೆ ಸೌದಿಪ್ರಾಯೋಜಕನು ಸ್ಪಂದಿಸಲೇ ಇಲ್ಲ. ವಿಶೇಷವೆಂದರೆ ಇದುವರೆಗೆ ವಿಜಯಾ ಅವರಿಗೆ ಒಂದು ಮೊಬೈಲ್ ಸೌಲಭ್ಯವನ್ನೂ ಪ್ರಾಯೋಜಕನು ಒದಗಿಸಿಲ್ಲ. ಹೀಗಾಗಿ ವಿಜಯಾ ಅವರ ಪರಿಸ್ಥಿತಿ ತಿಳಿಯಲು ಅನಕ್ಷರಸ್ಥ ಬಾಲಕೃಷ್ಣ ಅವರಿಗೆ ಸಾಧ್ಯವಾಗುತ್ತಿರಲಿಲ್ಲ.

ಬಾಲಕೃಷ್ಣ ಅವರು ಊರಿನ ಪರಿಚಯದವರಿಗೆ ಈ ವಿಚಾರವನ್ನು ತಿಳಿಸಿದ್ದರು. ಮಾಹಿತಿ ಪಡೆದ ಎಸ್ ಡಿ ಪಿ ಐ ಪಕ್ಷದ ರಿಯಾಝ್ ಫರಂಗಿಪೇಟೆಯವರು ಸೌದಿ ಅರೇಬಿಯದಲ್ಲಿರುವ ಕರಾವಳಿಯ ಯುವಕರಿಗೆ ಮಾಹಿತಿ ನೀಡಿದ್ದು, ಅನಿವಾಸಿ ಭಾರತೀಯರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ಇಂಡಿಯನ್ ಸೋಶಿಯಲ್ ಫೋರಮ್ ವಿಜಯಾ ಪ್ರಕರಣವನ್ನು ಭಾರತೀಯ ರಾಯಭಾರ ಕಚೇರಿಯ ಗಮನಕ್ಕೆ ತಂದಿರುವುದಾಗಿ ತಿಳಿದುಬಂದಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ರಿಯಾಝ್ ಅವರು ಇಂಡಿಯನ್ ಸೋಶಿಯಲ್ ಫೋರಮ್ ಗೆ ತಲುಪಿಸಿದ್ದು ಶೀಘ್ರದಲ್ಲೇ ವಿಜಯಾ ಅವರು ತವರಿಗೆ ಮರಳುವಂತಾಗಬಹುದು ಎಂಬ ವಿಶ್ವಾಸವನ್ನು ಇಂಡಿಯನ್ ಸೋಶಿಯಲ್ ಫೋರಮ್ ವ್ಯಕ್ತಪಡಿಸಿದೆ.

SDPI ನಿಯೋಗ ಭೇಟಿ :

ಇಂದು ಸಂತ್ರಸ್ತೆಯ ಪತಿ ಬಾಲಬಾಲಕೃಷ್ಣರವರನ್ನು ವಾಮಂಜೂರಿನ ಅವರ ಮನೆಯಲ್ಲಿ  ಎಸ್ ಡಿ ಪಿ ಐ ದ ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ ಎಂ ಅಥಾವುಲ್ಲಾ ನೇತೃತ್ವದ ನಿಯೋಗ ಭೇಟಿ ಮಾಡಿತು. ನಿಯೋಗದಲ್ಲಿ ಎಸ್ ಡಿ ಪಿ ಐ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ನೂರುಲ್ಲಾ ಕುಳಾಯಿ, ಉಪಾಧ್ಯಕ್ಷ ನಾಸೀರ್ ಉಳಾಯಿಬೆಟ್ಟು, ವಾಮಂಜೂರು ವಾರ್ಡ್ ಸಂಚಾಲಕ ಇಕ್ಬಾಲ್ ವಾಮಂಜೂರು, ಇಂಡಿಯನ್ ಸೋಶಿಯಲ್ ಫೋರಂನ ಸಲೀಮ್ ಗುರುವಾಯನಕೆರೆ ಹಾಗೂ ಸದಸ್ಯ ನಿಯಾಝ್ ಅಡ್ಡೂರು ಉಪಸ್ಥಿತರಿದ್ದರು. ಅದೇ ರೀತಿ ಸ್ಥಳೀಯ ಹಿರಿಯ ಮುಖಂಡರಾಗಿರುವಂತಹಾ ಕೋದಂಡರಾಮ ಸಾಲಿಯಾನ್  ಭೇಟಿ ನೀಡಿದ ಎಸ್ ಡಿ ಪಿ ಐ ನಿಯೋಗದೊಂದಿಗೆ ಸಹಕರಿಸಿದರು.

ನಿಯೋಗ ಬಾಲಕೃಷ್ಣ ಅವರಲ್ಲಿ, ಇದೀಗಾಗಲೇ ಇಂಡಿಯನ್ ಸೋಶಿಯಲ್ ಫೋರಂ ಸದಸ್ಯರಿಗೆ ಸಮಸ್ಯೆಯ  ಕುರಿತು ತಿಳಿಸಲಾಗಿದ್ದು, ಅವರು ಇದರ ಬಗ್ಗೆ ಕಾರ್ಯ ನಿರತರಾಗಿದ್ದಾರೆ  ಮತ್ತು ಶೀಘ್ರವೇ ನಿಮ್ಮ ಪತ್ನಿ ಭಾರತಕ್ಕೆ ವಾಪಾಸಾಗಲು ನೆರವಾಗುವುದಾಗಿ ಭರವಸೆ ನೀಡಿತು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group