ರಾಷ್ಟ್ರೀಯ ಸುದ್ದಿ

ಗುಜರಾತ್: ಮುಸ್ಲಿಮರ ಬಗ್ಗೆ ಭಯ ಹುಟ್ಟಿಸುವ, ಬಿಜೆಪಿ ಪರ, ಕೋಮು ಪ್ರಚೋದನಕಾರಿ ವೀಡಿಯೋ !!

ಅಪಪ್ರಚಾರ, ಸುಳ್ಳು ಸುದ್ದಿ, ಸೆಕ್ಸ್ ಸಿಡಿ ನಂತರ ಇದೀಗ ಕೋಮು ಪ್ರಚೋದನಕಾರಿ ವೀಡಿಯೋ

ವರದಿಗಾರ: ಅಧಿಕಾರಕ್ಕಾಗಿ ಅದ್ಯಾವ ಹಂತಕ್ಕೆ ಬೇಕಾದರೂ ಇಳಿಯಬಹುದೆಂದು ರಾಜಕಾರಣಿಗಳು ಇದೀಗ ಮತ್ತೆ ಸ್ಪಷ್ಟಪಡಿಸಿದ್ದಾರೆ. ಮುಂದಿನ ತಿಂಗಳು ಚುನಾವಣೆಯನ್ನು ಎದುರು ನೋಡುತ್ತಿರುವ ಗುಜರಾತಿನಲ್ಲಿ ಇದೀಗ ಕೋಮು ಪ್ರಚೋದನಕಾರಿ ವೀಡಿಯೋ ಹರಡುತ್ತಿದೆ.

ಈ ವೀಡಿಯೋದಲ್ಲಿ ಹಿಂದೂ ಹುಡುಗಿಯೊಬ್ಬಳು ಮುಸ್ಸಂಜೆ ಹೊತ್ತಿಗೆ ಭಯಪಡುತ್ತಾ ತನ್ನ ಮನೆಯತ್ತ ಧಾವಿಸುತ್ತಿರುವುದು ಕಾಣಿಸುತ್ತಿದೆ. ಹಿನ್ನಲೆಯಲ್ಲಿ ಮುಸ್ಲಿಮರ ಆಝಾನ್ ದ್ವನಿಯಂತೆ ಕೇಳಿ ಬರುತ್ತಿದೆ. ಇತ್ತ ಆಕೆಯ ಮನೆಯಲ್ಲಿ ಆಕೆಯ ಹೆತ್ತವರು ಭಯದಿಂದ ಕಾಯುತ್ತಿರುತ್ತಾರೆ. ಹಿನ್ನಲೆಯಲ್ಲಿ ಕೃಷ್ಣನ ಮೂರ್ತಿಯನ್ನೂ ತೋರಿಸಲಾಗಿದೆ.

ಆಕೆ ಮನೆ ತಲುಪಿದಾಗ ಬಾಗಿಲು ತೆರೆದ ತಾಯಿಯನ್ನು ಅಪ್ಪಿ ಹಿಡಿಯುತ್ತಾಳೆ. ನಂತರ ಕ್ಯಾಮರಾದ ಕಡೆ ನೋಡುವ ತಾಯಿ ಪ್ರಶ್ನಿಸುತ್ತಾರೆ ” ಒಂದು ನಿಮಿಷ, ಗುಜರಾತಿನಲ್ಲಿ ಹೀಗೆ ನಡೆಯುತ್ತಿರುವುದನ್ನು ನೋಡಿ ನೀವ್ಯಾಕೆ ಆಶ್ಚರ್ಯಚಕಿತರಾಗಿದ್ದೀರಿ?”

ಆಗ ಆಕೆಯ ತಂದೆ ” 22 ವರ್ಷಗಳ ಹಿಂದೆ ಹೀಗೆ ನಡೆಯುತ್ತಿತ್ತು, ಅವರು ಮತ್ತೆ ಅಧಿಕಾರಕ್ಕೆ ಬಂದರೆ ಹೀಗೆ ಸಂಭವಿಸಬಹುದು” ಎಂದು ಹೇಳುತ್ತಾರೆ.
ಅದಕ್ಕುತ್ತರಿಸುತ್ತಾ ಹುಡುಗಿಯು ” ಆದರೆ ಭಯಪಡಬೇಡಿ, ಯಾರೂ ಬರಲ್ಲ. ಏಕೆಂದರೆ, ಇಲ್ಲಿ ಮೋದಿ ಇದ್ದಾರೆ” ಎಂದು ಹೇಳುತ್ತಾಳೆ.

“ಇದು ಗುಜರಾತಿನಲ್ಲಿ ಸಂಜೆ 7ರ ನಂತರ ನಡೆಯಬಹುದು” ಎಂಬ ವಾಕ್ಯಗಳೊಂದಿಗೆ ಪ್ರಾರಂಭವಾದ ವೀಡಿಯೋ, ” ನಮ್ಮ ಮತ, ನಮ್ಮ ರಕ್ಷಣೆ” ಎಂಬ ವಾಕ್ಯದೊಂದಿಗೆ ಮುಕ್ತಾಯಗೊಳ್ಳುತ್ತದೆ.

‘ಹ್ಯೂಮನ್ ರೈಟ್ಸ್ ಲಾ ನೆಟ್ವರ್ಕ್’ ಸಂಘಟನೆಯ ಗೋವಿಂದ್ ಪರ್ಮಾರ್ ಎಂಬ ವಕೀಲರು ಈ ವೀಡಿಯೋ ವಿರುದ್ಧ ಗುಜರಾತ್ ಪೋಲೀಸ್ ಹಾಗು ಚುನಾವಣಾ ಅಯೋಗಕೆ ದೂರು ಸಲ್ಲಿಸಿ, ವೀಡಿಯೋ ಹರಡದಂತೆ ನೋಡಿಕೊಳ್ಳಲು ವಿನಂತಿಸಿದ್ದಾರೆ.

ಬಹುಸಂಖ್ಯಾತರ ಮಧ್ಯೆ ಮುಸ್ಲಿಮರ ಬಗ್ಗೆ ಭಯ ಸೃಷ್ಟಿಸಿ, ಅವರು ಮುಸ್ಲಿಮರನ್ನು ಧ್ವೇಷಿಸುವಂತೆ ಮಾಡಿ ಆ ಮೂಲಕ ಭಾವನೆಗಳನ್ನು ಮತಗಳಾಗಿ ಪರಿವರ್ತಿಸುವ ಹುನ್ನಾರವಾಗಿದೆ ಎಂದು ಪರ್ಮಾರ್ ಹೇಳಿದ್ದಾರೆ.

ಈ ಬಗ್ಗೆ ಮಾತನಾಡುತ್ತಾ ಗುಜರಾತಿನ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥ ರೋಹನ್ ಗುಪ್ತ ” ನಾವು ಈ ವೀಡಿಯೋಕ್ಕಾಗಿ ಯಾರನ್ನೂ ಅರೋಪಿಸುವುದಿಲ್ಲ, ಆದರೆ ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಇದು ಬಿಜೆಪಿಯ ಬಾಡಿಗೆ ಪ್ರಚಾರವಾಗಿದೆ, ಕಾರಣ ಧ್ವೇಷ ಹರಡುವುದರಿಂದ ಲಾಭ ದೊರೆಯುವ ಏಕೈಕ ಪಕ್ಷ ಬಿಜೆಪಿಯಾಗಿದೆ” ಎಂದು ಹೇಳಿದರು.

ಬಿಜೆಪಿಯ ಗುಜರಾತಿನ ಐಟಿ ಸೆಲ್ ನ ಪಂಕಜ್ ಶುಕ್ಲಾ ” ವೀಡಿಯೋ ಯಾರು ಮಾಡಿದ್ದೆಂದು ನಮಗೆ ಗೊತ್ತಿಲ್ಲ, ನಾವಂತೂ ಮಾಡಲಿಲ್ಲ. ಬಿಜೆಪಿಯ ಹಲವಾರಿ ಹಿತೈಷಿಗಳಲ್ಲಿ ಯಾರಾದರೂ ತಮ್ಮ ಭಾವನೆಗಳನ್ನು ವೀಡಿಯೋ ರೂಪದಲ್ಲಿ ವ್ಯಕ್ತಪಡಿಸಿದ್ದಾಗಿರಬಹುದು” ಎಂದು ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group