ಮುಂದಿನ ತಿಂಗಳಿಂದ ಮುಸ್ಲಿಮರಿಗೂ ಲಭ್ಯವಾಗಲಿದೆ ಈ ಸೌಲಭ್ಯ; ಅಶ್ಲೀಲ ವೆಬ್ ಸೈಟ್ ತೆರೆಯಲು ಪ್ರಯತ್ನಿಸಿದ ಮುಸ್ಲಿಮರಿಗೆ ಕೇಳಿಸಲಿದೆ “ಅಲ್ಲಾಹು ಅಕ್ಬರ್”
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವೈದ್ಯಕೀಯ ವಿಜ್ಞಾನ ತರಬೇತಿ ಕೇಂದ್ರದ ನರ ಶಾಸ್ತ್ರಜ್ಞರು ಅಶ್ಲೀಲತೆಯನ್ನು ತಡೆಗಟ್ಟಲು ವಿಶೇಷ ಆಪ್ಲಿಕೇಶನ್ ಸೃಷ್ಟಿಸಿದ್ದಾರೆ. ‘ಹರ ಹರ ಮಹಾದೇವ’ ಎಂಬ ಹೆಸರಿನ ಈ ಅಪ್ಲಿಕೇಶನ್ ಜಗತ್ತಿನ ಹಲವು ಅಶ್ಲೀಲತೆ ಹಾಗೂ ಹಿಂಸೆಯನ್ನು ಪ್ರಸರಿಸುವ ವೆಬ್ ಸೈಟ್ ಗಳನ್ನು ಬ್ಲಾಕ್ ಮಾಡುವಲ್ಲಿ ಯಶಸ್ವಿಯಾಗಿದೆ.
ಈ ಅಪ್ಲಿಕೇಶನ್ ಮೊಬೈಲ್ ಗಳಲ್ಲಿ ಇನ್’ಸ್ಟಾಲ್ ಮಾಡಿದಲ್ಲಿ, ನಂತರ ಯಾವುದೇ ಅಶ್ಲೀಲ ವೆಬ್ ಸೈಟ್ ಗಳನ್ನು ಸಂದರ್ಶಿಸಲು ಪ್ರಯತ್ನಿಸಿದ್ದಲ್ಲಿ ವೆಬ್ ಸೈಟ್ ಬ್ಲಾಕ್ ಮಾಡಿ ಭಜನೆ ಹಾಡಲು ಪ್ರಾರಂಭಿಸುತ್ತದೆ.
ಇದೀಗ ಕೇವಲ ಹಿಂದೂ ಭಕ್ತಿ ಗೀತೆಗಳನ್ನು ಮಾತ್ರ ಪ್ರಸರಿಸಲಾಗುತ್ತಿದೆ, ಮುಂಬರುವ ದಿನಗಳಲ್ಲಿ ಇತರ ಧರ್ಮಗಳ ಭಕ್ತಿ ಗೀತೆಗಳನ್ನು ಪ್ರಾರಂಭಿಸುವುದಾಗಿ ಅಪ್ಲಿಕೇಶನ್ ಸೃಷ್ಟಿಸಿದ ಡಾ.ವಿಜಯನಾಥ್ ಮಿಶ್ರಾ ತಿಳಿಸಿದರು.
