ವರದಿಗಾರ : ಉತ್ತರ ಪ್ರದೇಶದ ಬರೇಲಿಯಲ್ಲಿ 50 ವರ್ಷ ವಯಸ್ಸಿನ ಮಹಿಳೆಯೊಬ್ಬಳು ರೇಶನ್ ನಿರಾಕರಿಸಿದ ಕಾರಣ ಹಸಿವಿನಿಂದ ಮೃತಪಟ್ಟಿದ್ದಾಳೆ. ರೇಶನ್ ಅಂಗಡಿಯಲ್ಲಿ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಹೆಂಡತಿಯೂ ಬರಬೇಕೆಂದು ಗಂಡನಾದ ಇಸಾಕ್ ಅಹ್ಮದ್’ರವರಲ್ಲಿ ರೇಶನ್ ಮಾಲಕ ಹೇಳಿದ್ದರು. ಆದರೆ ಐದು ದಿನಗಳಿಂದ ತೀವ್ರತರದ ಅನಾರೋಗ್ಯಕ್ಕೆ ಈಡಾಗಿದ್ದ ಹೆಂಡತಿ ಸಕೀನಾರಿಗೆ ಗಂಡನೊಂಡಿಗೆ ಹೋಗಲು ಸಾಧ್ಯವಿರಲಿಲ್ಲವೆನ್ನಲಾಗಿದೆ. ಮೂಲಗಳ ಪ್ರಕಾರ ಕಡು ಬಡವರಾಗಿರುವ ಇಸಾಕ್ ಅಹ್ಮದ್ ಕುಟುಂಬಕ್ಕೆ ಅಂತ್ಯೋದಯ ಕಾರ್ಡ್ ಆಸರೆಯಾಗಿತ್ತೆನ್ನಲಾಗಿದೆ. ಆದರೆ ಮನೆಯಲ್ಲಿ ಅಹಾರವೂ ಇಲ್ಲದೆ, ರೇಶನ್ ಸಾಮಾನುಗಳು ಸಮಯಕ್ಕೆ ದೊರೆಯದೆ ಸಕೀನ ಮೃತಪಟ್ಟಿದ್ದಾರೆನ್ನಲಾಗಿದೆ. ಘಟನೆಯ ಕುರಿತು ಸೂಕ್ತ ತನಿಖೆ ನಡೆಸಲಾಗುವುದೆಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ.
ಸಾರ್ವಜನಿಕ ಪಡಿತರ ವ್ಯವಸ್ಥೆಯೊಂದಿಗೆ ಆಧಾರನ್ನು ಕಡ್ಡಾಯ ಜೋಡಣೆಯ ಕಾರಣದಿಂದಾಗಿ ಹಲವಾರು ಹಸಿವಿನ ಕಾರಣದಿಂದಾಗಿ ಮರಣ ಸಂಭವಿಸಿದ ಘಟನೆಗಳು ವರದಿಯಾಗುತ್ತಿರುವ ನಡುವೆಯೇ ಉತ್ತರಪ್ರದೇಶದ ಬೈರೇಲಿಯಿಂದ ಈ ಹೊಸ ಘತನೆ ವರದಿಯಾಗಿರುವುದ್ ಆತಂಕಕ್ಕೆ ಕಾರಣವಾಗಿದೆ. ಕಳೆದ ಸಪ್ಟಂಬರ್ 28 ರಂದು ಜಾರ್ಖಂಡಿನ ಸಂದೇಗಾ ಜಿಲ್ಲೆಯಲ್ಲಿ 11 ವರ್ಷದ ಬಾಲಕಿಯೊಬ್ಬಳು ತನ್ನ ಕುಟುಂಬಕ್ಕೆ ಪಡಿತರ ನಿರಾಕರಿಸಿದ ನಂತರ ಹಸಿವಿನ ಕಾರಣದಿಂದಾಗಿ ಮೃತಪಟ್ಟಿದ್ದ ಘಟನೆ ವರದಿಯಾಗಿತ್ತು. ಆಕೆಯ ಕುಟುಂಬದ ಪಡಿತರ ಚೀಟಿಯೊಂದಿಗೆ ಆಧಾರ್ ಜೋಡಣೆಯಾಗದಿರುವುದೇ ಇದಕ್ಕೆ ಕಾರಣವೆನ್ನಲಾಗಿತ್ತು. ಆದರೂ ಅಧಿಕಾರಿಗಳು ಆಕೆ ಮೃತಪಟ್ಟಿರುವುದು ಮಲೇರಿಯಾದಿಂದ ಎಂದು ತಿಳಿಸಿದ್ದರು.
ಕರ್ನಾಟಕದ ಗೋಕರ್ಣದಲ್ಲೂ ಎರಡು ವಾರದ ಅವಧಿಯಲ್ಲಿ ಮೂರು ಸಹೋದರರು ಹಸಿವಿನಿಂದ ಬಳಲಿ ಮೃತಪಟ್ಟ ಘಟನೆ ವರದಿಯಾಗಿತ್ತು. ಅವರ ಕುಟುಂಬಕ್ಕೆ ಆಧಾರ್ ಇಲ್ಲದ ಕಾರಣಕ್ಕಾಗಿ ಪಡಿತರ ವ್ಯವಸ್ಥೆಯನ್ನು ನಿರಾಕರಿಸಲಾಗಿತ್ತೆಂದು ಹೇಳಲಾಗಿತ್ತು. ಆದರೆ ಅಧಿಕಾರಿಗಳು ಇದೊಂದು ಶರಾಬು ಸೇವನೆಯ ಕಾರಣದಿಂದಾದ ಮರಣ ಎಂದು ಹೇಳಿಕೊಂಡು ಕೈ ತೊಳೆದುಕೊಂಡಿದ್ದರು.
