ರಾಜ್ಯ ಸುದ್ದಿ

ಭಾರತದ ಪ್ರಜೆಯಾಗಿ ಸಂವಿಧಾನವನ್ನು ಒಪ್ಪದ ಗೋ.ಮಧುಸೂದನ್ ನಿಜವಾದ ರಾಷ್ಟ್ರದ್ರೋಹಿ: ಜ್ಞಾನಪ್ರಕಾಶ್ ಸ್ವಾಮೀಜಿ

ವರದಿಗಾರ: ಗೋಮುಖ ವ್ಯಾಘ್ರನಂತೆ ವರ್ತಿಸಿ ಭಾರತದ ಸಂವಿಧಾನವನ್ನು ಒಪ್ಪದಿರುವುದು ಮೂರ್ಖತನದ ಪರಮಾವಧಿ. ಭಾರತದ ಪ್ರಜೆಯಾದ ಗೋ.ಮಧುಸೂದನ್ ನಿಜವಾದ ರಾಷ್ಟ್ರದ್ರೋಹಿ ಎಂದು ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದ್ದಾರೆ.

ಟಿವಿ ಚರ್ಚಾ ಕಾರ್ಯಕ್ರಮದಲ್ಲಿ ಸಂವಿಧಾನವನ್ನು ಹಗುರವಾಗಿ ಮಾತನಾಡಿದ ಬಿಜೆಪಿಯ ರಾಜ್ಯ ವಕ್ತಾರ ಗೋ.ಮಧುಸೂದನ್ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಮಧುಸೂದನ್ ವಿರುದ್ಧ  ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಅವರು ಮೈಸೂರಿನ ಕೆ.ಆರ್. ಪೊಲೀಸ್ ಠಾಣೆ ಮುಂಭಾಗ ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಮತ್ತು ಮೈಸೂರು ವಿವಿ ದಲಿತ ವಿದ್ಯಾರ್ಥಿಗಳ ಒಕ್ಕೂಟ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದರು.

ಗೋ.ಮಧುಸೂದನ್ ರನ್ನು ಸಲಹುತ್ತಿರುವ ಸಂಘಪರಿವಾರ ಮತ್ತು ಬಿಜೆಪಿ ಮುಖ್ಯಸ್ಥರೂ ರಾಷ್ಟ್ರದ್ರೋಹದ ಪಟ್ಟಿಗೆ ಸೇರುತ್ತಾರೆ. ಭಾರತೀಯ ರಕ್ಷಾ ಕವಚದಂತಿರುವ ಸಂವಿಧಾನದ ಆಶಯದಡಿಯಲ್ಲಿ ಅಧಿಕಾರ ಪಡೆದ ಈತ ಸಂವಿಧಾನವನ್ನೇ ಒಪ್ಪುದಿಲ್ಲವೆಂದರೆ ಅವನ ತಂದೆಯನ್ನೇ ಒಪ್ಪುವುದಿಲ್ಲವೆಂದರ್ಥ. ತನ್ನ ತಂದೆಯ ಮೇಲೆಯೇ ಗೋ.ಮಧುಸೂದನ್ ಗೆ ಸಂದೇಹವಿದೆ ಎಂದು ಹೇಳಿದ್ದಾರೆ.

ಭಾರತೀಯ ಪ್ರಜೆಯಾಗಿ ಭಾರತದೊಳಗೆ ಕೋಮುವಿಷಬೀಜ ಬಿತ್ತುತ್ತಿರುವ ಗೋ.ಮಧುಸೂದನ್ ಮನು ಸಂವಿಧಾನವನ್ನು ಜಾರಿ ಮಾಡಲು ಹೊರಟಿದ್ದಾನೆ. ದೇಶದಲ್ಲಿ ಮಾನವ ಸಂವಿಧಾನವನ್ನು ಅಲ್ಲಗಳೆದಿರುವ ಗೋ.ಮಧುಸೂದನ್ ಮಂಗನೇ ಸರಿ ಎಂದು ತೀಕ್ಷ ಮಾತುಗಳಿಂದ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಟೀಕಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group