ವರದಿಗಾರ : ಗುಜರಾತಿನ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದೆ. ಅದು ಕೆಲವರ ವೈಯುಕ್ತಿಕ ಬದುಕಿಗೂ ಲಗ್ಗೆಯಿಟ್ಟಿದ್ದು ಆತಂಕಕಾರಿಯಾಗಿದೆ. ಆದರೆ ಇದೇ ವೇಳೆ ರಾಹುಲ್ ಗಾಂಧಿ ಚುನಾವಣಾ ಪ್ರಚಾರದ ಸಮಯದಲ್ಲಿ ಆಡಿದ್ದಾರೆನ್ನಲಾದ ಮಾತಿನ ವೀಡಿಯೋ ಒಂದರ ಮೂಲಕ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದ ಬಿಜೆಪಿಗರ ನಿಜ ಬಣ್ಣ ಈಗ ಬಯಲಾಗಿದೆ. ರಾಹುಲ್ ಗಾಂಧಿಯವರ ಭಾಷಣದಲ್ಲಿ ಹೇಳಿದ್ದರೆನ್ನಲಾದ ತುಣುಕೊಂದು ಈ ರೀತಿ ಇತ್ತು. “ಒಂದು ಕಡೆಯಿಂದ ಆಲೂಗಡ್ಡೆ ತುರುಕಿಸಿ, ಇನ್ನೊಂದು ಕಡೆಯಿಂದ ಚಿನ್ನ ಪಡೆಯಲು ಸಾಧ್ಯವಾಗುವಂತಹ ಯಂತ್ರ ನೀಡುತ್ತೇನೆ” ಇದನ್ನು ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಅಮಿತ್ ಮಾಲವೀಯ ಸೇರಿದಂತೆ ಬಿಜೆಪಿಯ ಬಹುತೇಕ ಬೆಂಬಲಿಗರು ಸಾಮಾಜಿಕ ತಾಣಗಳಲ್ಲಿ ರಾಹುಲ್ ಗಾಂಧಿಯನ್ನು ಛೇಡಿಸುವ ಮತ್ತು ಅವರನ್ನು ಓರ್ವ ತಮಾಶೆಯ ವಸ್ತುವನ್ನಾಗಿ ಚಿತ್ರಿಸುವ ಸಲುವಾಗಿ ಬಳಸಿಕೊಳ್ಳಲು ಆರಂಭಿಸಿದರು. ಆದರೆ ಹಿನ್ನೆಲೆ ತಿಳಿಯದೆ ಕೇವಲ ಆ ವೀಡಿಯೋ ತುಣಕನ್ನು ನೋಡಿದ ಯಾರಿಗೇ ರಾಹುಲ್ ಗಾಂಧಿಯ ಕುರಿತೊಮ್ಮೆ ಸಂಶಯ ವ್ಯಕ್ತಪಡಿಸುವುದು ಸಹಜವೇ ಆಗಿತ್ತು.
ಬಿಜೆಪಿಗರು ಪ್ರಸಾರಿಸಿದ ತಿರುಚಿದ ವೀಡಿಯೋ :
ಆದರೆ ಈಗ ಆ ವೀಡಿಯೋದ ನೈಜತೆ ಬಯಲಾಗಿದ್ದು, ರಾಹುಲ್ ಗಾಂಧಿಯವರು, ಮೋದಿ ಗುಜರಾತಿನ ಭನಸ್ಕಾಂತ ಜಿಲ್ಲೆಯ ರೈತರಿಗೆ ನೀಡಿದ್ದ ಸುಳ್ಳು ಭರವಸೆಗಳನ್ನು ಪಟ್ಟಿ ಮಾಡುತ್ತಾ ಮೋದಿಯವರು ಹೇಳಿದ್ದ ಅಶ್ವಾಸನೆಯೊಂದನ್ನು ಹೇಳುವ ವೀಡಿಯೋವನ್ನೇ ಬಿಜೆಪಿಗರು ತಿರುಚಲು ಹೋಗಿ, ಜಾಲ ತಾಣಿಗರ ಕೈಯ್ಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಆ ಮೂಲಕ ರಾಹುಲ್ ಗಾಂಧಿ, ಮೋದಿಯ ಸುಳ್ಳು ಭರವಸೆಗಳ ಪಟ್ಟಿಯನ್ನು ಜನರ ಮುಂದಿಟ್ಟದ್ದನ್ನೂ ಈಗ ಎಲ್ಲರೂ ನೋಡುವ ಅವಕಾಶವನ್ನು ಬಿಜೆಪಿಗರೇ ಮಾಡಿಕೊಟ್ಟಂತಾಗಿದೆ
ರಾಹುಲ್ ಗಾಂಧಿ ಭಾಷಣದ ಪೂರ್ಣ ವೀಡಿಯೋ :
