ಸಾಮಾಜಿಕ ತಾಣ

ಕಮಲ್ ಹಸನ್ ಚಿತ್ರಕ್ಕೆ ಚಾಕುವಿನಿಂದ ಇರಿಯುತ್ತಿರುವ ಮಕ್ಕಳು ; ‘ಹಿಂದೂ ವಿರೋಧಿ’ಯನ್ನು ಕೊಲ್ಲಲು ಪೋಷಕರ ಸಾಥ್ !

► ಮಕ್ಕಳ ದಿನಾಚರಣೆಯಂದೇ ವೈರಲ್ ಆದ ಆಘಾತಕಾರಿ ವೀಡಿಯೋ!

ವರದಿಗಾರ : ಸಣ್ಣ ಮಕ್ಕಳಿಬ್ಬರು ತಮಿಳು ಚಿತ್ರ ನಟ ಕಮಲ್ ಹಸನ್ ರ ಚಿತ್ರವಿರುವ ಬ್ಯಾನರೊಂದಕ್ಕೆ ಚಾಕುವಿನಿಂದ ಇರಿಯುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಮಲ್ ಹಸನ್ ಇತ್ತೀಚೆಗೆ ‘ಹಿಂದುತ್ವ ಭಯೋತ್ಪಾದನೆ’ಯ ಬಗ್ಗೆ ಹೇಳಿಕೆ ನೀಡಿ ಬಲಪಂಥೀಯರ ಆಕ್ರೋಶಕ್ಕೆ ಕಾರಣವಾಗಿದ್ದರು.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವೀಡಿಯೋದಲ್ಲಿ ಎರಡು ಮಕ್ಕಳು ಕಮಲ್ ಹಸನ್ ಚಿತ್ರಕ್ಕೆ ಮತ್ತೆ ಮತ್ತೆ ಇರಿಯುತ್ತಿರುವುದು ಕಾಣಬಹುದು. ‘ಆತ ಹಿಂದೂ ವಿರೋಧಿ, ಬಿಡಬೇಡ’ ಎಂದು ಮಕ್ಕಳನ್ನು ಇರಿಯಲು ಪ್ರೋತ್ಸಾಹಿಸುತ್ತಿರುವ ಹಿರಿಯರ ಶಬ್ದವೂ ಕೇಳಿ ಬರುತ್ತದೆ.

 

ಆಟಿಕೆ ಹಿಡಿಯಬೇಕಾದ ಕೈಯಲ್ಲಿ ಮತೀಯ ದ್ವೇಷದ ಕಾರಣ ಚಾಕು ನೀಡಿದ ಹೆತ್ತವರ ಕಲುಷಿತ ಮನೋಸ್ಥಿಯನ್ನು ಈ ವೀಡಿಯೋ ಪ್ರತಿಬಿಂಬಿಸುತ್ತಿದೆ.

 

ಕಮಲ್ ಪ್ರತಿಕ್ರಿಯೆ

ಇನ್ನು ಈ ಕುರಿತು ಟ್ವಿಟ್ಟರ್ ಮೂಲಕಾನೇ ಉತ್ತರಿಸಿರುವ ಕಮಲ್ ಹಸನ್, ಒಬ್ಬ ಬಾಲಕನಿಂದ ಇರಿಯಲ್ಪಡುವುದಕ್ಕಿಂತ ಸಾಯುವುದೇ ಮೇಲೆಂದು ನನಗನಿಸುತ್ತಿದೆ. ಆದರೆ ನನಗೆ ಆಘಾತ ಮೂಡಿಸಿದ್ದು ಅದರ ಹಿನ್ನೆಲೆಯಲ್ಲಿರುವ ಹಿರಿಯರ ಧ್ವನಿಯಾಗಿದೆ. ಅವರು ಆ ಮಗುವಿನೊಂದಿಗೆ ಸಂಸ್ಕಾರ ಹೀನರಾಗಿ ವರ್ತಿಸಿದ್ದು ಯಾವ ರೀತಿಯಲ್ಲೂ ಸಮರ್ಥಿಸಲು ಸಾಧ್ಯವಿಲ್ಲವೆಂದು ಕಮಲ್ ಹೇಳಿದ್ದಾರೆ. ಮುಂದುವರಿದ ಅವರು, “ನೀವು ನನ್ನನ್ನು ಕೊಲ್ಲಲು ಪ್ರಯತ್ನಪಡಬಹುದು, ಆದರೆ ಕೊನೆಯಲ್ಲಿ ಜಯಶಾಲಿಯಾಗುವುದು ನಾನೇ ನೋಡಿ” ಎನ್ನುತ್ತಾ ಅಷ್ಟೇ ವ್ಯಂಗ್ಯಭರಿತ ಧಾಟಿಯಲ್ಲಿ ಮತ್ತೊಮ್ಮೆ ತಮ್ಮ ವಿರೋಧಿಗಳನ್ನು ಚುಚ್ಚಿದಾರೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group