ವರದಿಗಾರ: ರಾಜಸ್ತಾನದ ಅಲ್ವಾರ್ನಲ್ಲಿ ಗೋರಕ್ಷಕರಿಂದ ಹತ್ಯೆಯಾಗಿರುವ ಉಮರ್ ಖಾನ್ ಹಾಗೂ ಅವರ ಜೊತೆಗಿದ್ದ ತಾಹಿರ್ ಖಾನ್ ಮತ್ತು ಜಾವೇದ್ ಅವರ ವಿರುದ್ಧ ಗೋವು ಕಳ್ಳಸಾಗಣೆ ಹೆಸರಿನಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದು, ಸ್ವಯಂ ಘೋಷಿತ ಗೋ ರಕ್ಷಕರ ಬೆನ್ನೆಲುಬಾಗಿ ನಿಂತಿದ್ದಾರೆ.
ಹತ್ಯೆಗೆ ಸಂಬಂಧಿಸಿದಂತೆ ಭಗವಾನ್ ಸಿಂಗ್ ಗುರ್ಜರ್ ಮತ್ತು ರಾಮ್ವೀರ್ ಗುರ್ಜರ್ ಎಂಬುವವರನ್ನು ಬಂಧಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಉಮರ್ ಖಾನ್ ಶವದ ಮರಣೋತ್ತರ ಪರೀಕ್ಷೆಗೆ ಕುಟುಂಬ ಸದಸ್ಯರು ಇನ್ನೂ ಸಮ್ಮತಿ ನೀಡಿಲ್ಲ ಎಂದು ಮೂಲಗಳು ವರದಿ ಮಾಡಿವೆ.
