ವರದಿಗಾರ-ಮಕ್ಕತ್ತುಲ್ ಮುಕರ್ರಮಃ: ಅನಿವಾಸಿ ಕನ್ನಡಿಗರ ಸಂಘಟನೆಯಾದ ಟಿಪ್ಪು ಅಭಿಮಾನಿ ಬಳಗದ ವತಿಯಿಂದ ಮೈಸೂರ ಹುಲಿ ಟಿಪ್ಪು ಸುಲ್ತಾನರ ಜಯಂತಿಯನ್ನು ಮಕ್ಕಾದ ಹೆಸರಾಂತ ಕಟ್ಟಡ ಕ್ಲಾಕ್ ಟವರ್ ನಲ್ಲಿ ಸಿಹಿ ತಿಂಡಿ ಹಂಚಿ ವಿಜೃಂಭಣೆಯಿಂದ ಆಚರಿಸಲಾಯಿತು.
ಟಿಪ್ಪು ಅಭಿಮಾನಿ ಬಳಗ ಮಕ್ಕ ಅಧ್ಯಕ್ಷ ಶಾಹುಲ್ ಹಮೀದ್ ಬಂಟ್ವಾಳ ಮಾತನಾಡುತ್ತಾ, ಪ್ರಪಂಚದಲ್ಲೆ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಮಕ್ಕಳನ್ನು ಒತ್ತೆ ಇಟ್ಟ ಏಕೈಕ ವ್ಯಕ್ತಿ ಎಂದರೆ ಅದು ನಮ್ಮ ಕನಾ೯ಟಕದ ಮೈಸೂರ ಹುಲಿ ಶಹೀದ್ ಮಿಲ್ಲತ್ ಟಿಪ್ಪು ಸುಲ್ತಾನ್ ಎನ್ನುತಾ ಟಿಪ್ಪುವಿನ ಚರಿತ್ರೆಯ ಪುಟಗಳನ್ನು ತೆರೆದಿಟ್ಟರು.
ಟಿಪ್ಪು ಅಭಿಮಾನಿ ಬಳಗ ಕೋಶಾಧಿಕಾರಿ ಮುಸ್ತಾಫ ಬಂಟ್ವಾಳ ರವರು ಮಾತನಾಡಿ ಟಿಪ್ಪುವಿನ ಚರಿತ್ರೆಯನ್ನು ಇತಿಹಾಸದ ಪುಟಗಳಿಂದ ಪ್ಯಾಷಿಸ್ಟ್ ಶಕ್ತಿಗಳು ಮರೆಮಾಚಲು ಪ್ರಯತ್ನಿಸುತ್ತಿರುವುದರ ವಿರುದ್ಧ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭ ಅವರು ಸರಕಾರವನ್ನು ಒತ್ತಾಯಿಸಿದರು.
ಪ್ರಧಾನ ಕಾಯ೯ದಶಿ೯ ಕಲಂದರ್ ಶಾಫೀ ಅಸೈಗೋಳಿ ಸಂದರ್ಭೋಚಿತವಾಗಿ ಮಾತನಾಡಿ, ರಾಜ್ಯ ಸರಕಾರವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ‘ಟಿಪ್ಪು ವಿಶ್ವವಿದ್ಯಾನಿಲಯ’ದ ಭರವಸೆಯನ್ನು ಪೂರ್ತಿಗೊಳಿಸಲು ಮುಂದಾಗಬೇಕೆಂದು ಹೇಳಿದರು.
ಕಾಯ೯ಕ್ರಮದಲ್ಲಿ ಟಿಪ್ಪು ಅಭಿಮಾನಿ ಬಳಗದ ಸದಸ್ಯರದ ಅರೀಫ್ ಬಂಟ್ವಾಳ, ಮರ್ಝಕ್ ಬಲ್ಮಠ, ರಫೀಕ್ ಕೂಳಕೇರಿ, ಮುಜೀಬ್ ಹರೇಕಳ, ಝಿಯಾವುದ್ದಿನ್ ಪುತ್ತೂರು ಮತ್ತಿತರರು ಉಪಸ್ಥಿತರಿದ್ದರು.
ರಿಜ್ವಾನ್ ಗೂಡಿನಬಳಿ ಕಾಯ೯ಕ್ರಮ ನಿರೂಪಿಸಿ ವಂದಿಸಿದರು.
