ರಾಷ್ಟ್ರೀಯ ಸುದ್ದಿ

ರಾಫೆಲ್ ಜೆಟ್ ಖರೀದಿ ಹಗರಣ : ಕಾಂಗ್ರೆಸ್ ಪತ್ರಿಕಾಗೋಷ್ಠಿಯನ್ನು ಬಹಿಷ್ಕರಿಸಿದ ಟಿವಿ ಚಾನೆಲ್ ಗಳು!

ವರದಿಗಾರ : ಕಾಂಗ್ರೆಸ್ ಪಕ್ಷ ಇಂದಿಲ್ಲಿ ಆಡಳಿತಾರೂಢ ಬಿಜೆಪಿಯ ವಿರುದ್ಧ, ರಾಫೆಲ್ ಜೆಟ್ ಖರೀದಿ ಒಪ್ಪಂದದ ಕುರಿತಂತೆ ತೀವ್ರ ತರದ ಆರೋಪಗಳನ್ನು ಮಾಡಿದೆ. ಈ ಕುರಿತು ಕಾಂಗ್ರೆಸ್ ತನ್ನ ಕೇಂದ್ರ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯೊಂದನ್ನು ಕರೆದಿತ್ತು. ಆದರೆ ಅಚ್ಚರಿಯೆಂಬಂತೆ ದೇಶದ ಬಹುತೇಕ ಮಾಧ್ಯಮಗಳು ಈ ಪತ್ರಿಕಾಗೋಷ್ಠಿಯನ್ನು ಬಹಿಷ್ಕರಿಸಿದ್ದು, ಮತ್ತೊಮ್ಮೆ ಮಾಧ್ಯಮಗಳು ತಮ್ಮನ್ನು ಬಂಡವಾಳಶಾಹಿಗಳಿಗೆ ಮತ್ತು ಆಡಳಿತ ನಡೆಸುವವರಿಗೆ ಮಾರಿಕೊಂಡಿರುವುದನ್ನು ಸಾಬೀತುಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಸಂವಹನ ಮುಖ್ಯಸ್ಥರಾಗಿರುವ ರಣದೀಪ್ ಸಿಂಗ್ ಸುರ್ಜೆವಾಲಾ, ಪ್ರಧಾನಿ ನರೇಂದ್ರ ಮೋದಿಯವರು ಫ್ರಾನ್ಸಿನ ಡಸಾಲ್ಟ್ ಏವಿಯೇಶನ್’ನಿಂದ 36 ರಾಫೆಲ್ ಜೆಟ್’ಗಳನ್ನು ಹೆಚ್ಚಿನ ಬೆಲೆ ನೀಡಿ ಖರೀದಿಸಿದ್ದಾರೆ. ಈ ಕುರಿತ ಪ್ರಶ್ನೆಗಳಿಗೆ ಅವರು ಉತ್ತರಿಸಲೇಬೇಕಾಗಿದೆ ಎಂದು ಸುರ್ಜೇವಾಲ್ ಹೇಳಿದ್ದಾರೆ. ಮೊದಿಯವರು ಕೇವಲ ರಿಲಾಯನ್ಸ್ ಡಿಫೆನ್ಸ್ ಲಿಮಿಟೆಡ್ ಗ್ರೂಪಿನ ಹಿತಾಸಕ್ತಿಯನ್ನು ಮಾತ್ರ ಇಲ್ಲಿ ಉತ್ತೇಜಿಸಿದ್ದಾರೆ. ಅದರ ಅವಶ್ಯಕತೆ ಏನಿತ್ತು? ನಂತರವಾಗಿತ್ತು ರಿಲಾಯನ್ಸ್ ಗ್ರೂಪ್,  30, 000  ಕೋಟಿ ಮೌಲ್ಯದ ಒಪ್ಪಂದಕ್ಕಾಗಿ ಡಸಾಲ್ಟ್ ಏವಿಯೇಶನ್ ಸಹಯೋಗದೊಂದಿಗೆ ಉದ್ಯಮ ಪ್ರಾರಂಭಿಸಿದ್ದು ಎಂಬುವುದನ್ನು ಸುರ್ಜೇವಾಲ್ ಬೊಟ್ಟು ಮಾಡಿದರು.

ಮೋದಿಯವರು,  ಭಾರತ ಸರ್ಕಾರ ಮತ್ತು ಡಸಾಲ್ಟ್ ಏವಿಯೇಷನ್ ಜೊತೆ ರಾಫೆಲ್ ಖರೀದಿ ಒಪ್ಪಂದಕ್ಕೆಂದು ಫ್ರಾನ್ಸಿನಲ್ಲಿದ್ದ ಸಮಯದಲ್ಲೇ ಅನಿಲ್ ಅಂಬಾನಿಯವರೂ ಅಲ್ಲಿದ್ದದ್ದು ಯಾಕೆಂದು ಅವರು ಪ್ರಶ್ನಿಸಿದರು. ಈ ಒಪ್ಪಂದ ನಡೆದು 10 ದಿನಗಳ ನಂತರ ಅಂಬಾನಿಯವರ ಕಂಪನಿ,  ಡಸಾಲ್ಟ್ ಏವಿಯೇಶನ್ ಜೊತೆ ಸೇರಿಕೊಂಡು ಉದ್ಯಮ ಪ್ರಾರಂಭಿಸಿತ್ತು ಎಂದವರು ಹೇಳಿದರು. ಈ ಒಪ್ಪಂದದಲ್ಲಿ HAL ನಂತಹಾ ಪ್ರತಿಷ್ಟಿತ ಸಾರ್ವಜನಿಕ ಉದ್ದಿಮೆಗಳನ್ನು ಕಡೆಗಣಿಸಿದ್ದು ಯಾಕೆ? ಭಾರತದ ರಕ್ಷಣಾ ಒಪ್ಪಂದದ ಇತಿಹಾಸದಲ್ಲೇ ಅತಿ ದೊಡ್ಡ ಒಪ್ಪಂದವೆಂದೇ ವ್ಯಾಖ್ಯಾನಿಸಲಾದ ‘ರಾಫೆಲ್ ಜೆಟ್ ಖರೀದಿ ಒಪ್ಪಂದ’ ವನ್ನು ಒಂದು ಖಾಸಗಿ ಸಹಯೋಗದ ಕಂಪನಿಗೆ ವಹಿಸುವಾಗ, ಕೇಂದ್ರ ಸಚಿವ ಸಂಪುಟ ಹಾಗೂ ಭದ್ರತೆ ಮತ್ತು ವಿದೇಶಿ ಹೂಡಿಕೆಯ  ಅಭಿವೃದ್ಧಿ ಮಂಡಳಿಯ ಸಂಸದೀಯ ಸಮಿತಿಯ ಅನುಮೋದನೆಯನ್ನು ಏಕೆ ಪಡೆಯಲಾಗಿಲ್ಲವೆಂಬುವುದನ್ನು ಸರ್ಕಾರ ಸ್ಪಷ್ಟಪಡಿಸಬೇಕಾಗಿದೆ ಎಂದು ಸುರ್ಜೇವಾಲ್ ಹೇಳಿದರು.

 

ಮುಖ್ಯವಾಹಿನಿಯ ಮಾಧ್ಯಮಗಳ ಬಹಿಷ್ಕಾರ !

ಇಂದಿನ ಪತ್ರಿಕಾಗೋಷ್ಠಿಯ ಟೀಕೆಗಳು ಬಹುತೇಕ ನರೇಂದ್ರ ಮೋದಿ ಮತ್ತು ಅಂಬಾನಿಯವರನ್ನು ಕೇಂದ್ರೀಕರಿಸಿಯಾಗಿರುತ್ತದೆಯೆಂಬುವುದನ್ನು ಮನಗಂಡಿದ್ದ ದೇಶದ ಮುಖ್ಯವಾಹಿನಿಯ ಹೆಚ್ಚಿನ ಮಾಧ್ಯಮಗಳು, ಪತ್ರಿಕಾಗೋಷ್ಠಿಯನ್ನೇ ಬಹಿಷ್ಕರಿಸಿದ್ದವು. ದೇಶದ ಬಹುತೇಕ ಮಾಧ್ಯಮಗಳು ತಮ್ಮ ಸಂಪಾದಕೀಯ ಸ್ವಾತಂತ್ರ್ಯವನ್ನು ನರೇಂದ್ರ ಮೋದಿಯವರ ಮುಂದೆ ಶರಣಾಗಿಸಿದೆಯೆಂಬ ಟೀಕೆಗಳ ನಡುವೆ ನಡೆದ ಇಂದಿನ ಘಟನೆಯು ಆ ಆರೋಪಗಳನ್ನು ಇನ್ನಷ್ಟು ಪುಷ್ಟೀಕರಿಸಿದೆ.  ಇಂದಿನ ಬೆಳವಣಿಗೆಯು ಭಾರತದ ಸುದ್ದಿ ಚಾನಲ್’ಗಳಲ್ಲಿ ಅಸ್ತಿತ್ವದಲ್ಲಿರುವ ಭಯದ ಮಟ್ಟವನ್ನು ಜನತೆಯ ಮುಂದೆ ಬಟಾಬಯಲುಗೊಳಿಸಿದೆ. ಅವರು ತಮ್ಮ ಕಲ್ಪನಾತ್ಮಕ ‘ಉನ್ನತ ಪ್ರಭಾವ’ ಮತ್ತು ‘ನಿರ್ಭೀತ  ಪತ್ರಿಕೋದ್ಯಮ’ ವನ್ನು ತೋರಿಸಿಕೊಡಲು ತಮಗಿದ್ದ ಅವಕಾಶವೊಂದನ್ನು ವ್ಯರ್ಥ ಮಾಡಿದಂತಾಗಿದೆ.

ಟಿ ವಿ ಚಾನೆಲ್’ಗಳು ಇಂದಿನ ಪತ್ರಿಕಾಗೋಷ್ಠಿಯನ್ನು ಬಹಿಷ್ಕರಿಸಿದ್ದರೂ, ಅದರ ವಿಸ್ತೃತ ವೀಡಿಯೋ ಕೆಳಗಿದೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group