ವರದಿಗಾರ: ಮಂಗಳೂರಿನ ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನರೇಶ್ ಶೆಣೈ ಸ್ಥಾಪಿಸಿದ್ದ ‘ಯುವಾ ಬ್ರಿಗೇಡ್’ (ಪೂರ್ವ ನಾಮ ನಮೋ ಬ್ರಿಗೇಡ್) ಹೊಸಪೇಟೆಯ ಗೃಹರಕ್ಷಕ ದಳ ಕಛೇರಿಯಲ್ಲಿ ಯುವ ಪೊಲೀಸರಿಗೆ “ನವ ಕರ್ನಾಟಕದ ಕನಸು” ಎಂಬ ವಿಷಯದ ಕುರಿತಂತೆ ಇತ್ತೀಚೆಗೆ ಉಪನ್ಯಾಸ ಏರ್ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹರಕ್ಷಕ ದಳದ ಘಟಕಾಧಿಕಾರಿ ಎಸ್.ಎಂ. ಗಿರೀಶ್ ಅವರನ್ನು ಬೆಂಗಳೂರಿನ ಮಹಾ ನಿರ್ದೇಶಕರು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಸೋಮವಾರ ಆದೇಶ ಹೊರಡಿಸಿದ್ದಾರೆ.
ಇಲಾಖೆಯ ಹಿರಿಯ ಅಧಿಕಾರಿಗಳ ಅನುಮತಿಯಿಲ್ಲದೇ ಉಪನ್ಯಾಸ ಏರ್ಪಡಿಸಿರುವುದಕ್ಕೆ ಈ ಕ್ರಮ ಜರುಗಿಸಲಾಗಿದ್ದು, ಮುಂದಿನ ಆದೇಶದವರೆಗೆ ಅಮಾನತು ಜಾರಿಯಲ್ಲಿರುತ್ತದೆ.
ಇದನ್ನೂ ಓದಿ:
ನರೇಶ್ ಶೆಣೈಯ ಯುವಾ ಬ್ರಿಗೇಡ್’ನಿಂದ ಪೊಲೀಸರಿಗೆ ‘ಕರ್ನಾಟಕ ನಿರ್ಮಾಣ’ ದ ಪಾಠ!!
ಯುವಾ ಬ್ರಿಗೇಡ್’ನಿಂದ ಪೊಲೀಸರಿಗೆ ಉಪನ್ಯಾಸ; ಎ ಡಿ ಜಿ ಪಿ ಯಿಂದ ತನಿಖೆಗೆ ಆದೇಶ
